ಶಾಲೆಗೆ 10 ನಿಮಿಷ ತಡವಾಗಿ ಬಂದಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ!

Today News / ಕನ್ನಡ ಸುದ್ದಿಗಳು

ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಪ್ರಾಂಶುಪಾಲ ಅಜಿತ್ ವರ್ಮಾ ಶಿಕ್ಷಾ ಮಿತ್ರರಾಗಿರುವ ಶಿಕ್ಷಕಿಯನ್ನು ತಮ್ಮ ಬೂಟಿನಿಂದ ಥಳಿಸಿದ್ದಾರೆ.

ಲಖಿಂಪುರ ಖೇರಿ: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಪ್ರಾಂಶುಪಾಲ ಬೂಟಿನಿಂದ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಖೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಂಗು ಖೇರಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಶಾಲೆಗೆ ತಡವಾಗಿ ಬಂದಿದ್ದರು. ಇದರಿಂದ ಕುಪಿತರಾದ ಪ್ರಾಂಶುಪಾಲ ಶೂಗಳಿಂದ ಅವರನ್ನು ಥಳಿಸಿದ್ದಾರೆ. 20 ಸೆಕೆಂಡುಗಳ ವಿಡಿಯೋವನ್ನು ANI ಸುದ್ದಿಸಂಸ್ಥೆ ಹಂಚಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಪ್ರಾಂಶುಪಾಲ ಅಜಿತ್ ವರ್ಮಾ ವಿದ್ಯಾರ್ಥಿಗಳು ಮತ್ತು ಸಹದ್ಯೋಗಿಗಳ ಸಮ್ಮುಖದಲ್ಲಿ ಶಿಕ್ಷಾ ಮಿತ್ರರಾಗಿರುವ ಶಿಕ್ಷಕಿಯನ್ನು ತಮ್ಮ ಬೂಟಿನಿಂದ ಥಳಿಸಿದ್ದಾರೆ. ಈ ಬಗ್ಗೆ ಶಿಕ್ಷಕಿ ಖೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಿನ್ಸಿಪಾಲ್ ಅಜಿತ್ ವರ್ಮಾ ತನಗೆ ಕಿರುಕುಳ ನೀಡುತ್ತಿದ್ದರು ಎಂದು ಶಿಕ್ಷಕಿ ಆರೋಪಿಸಿದ್ದಾರೆ.

ಶಿಕ್ಷಕಿ ಹಾಜರಾತಿ ಹಾಕಲು ಅಡ್ಡಗಾಲು ಹಾಕಿದ್ದು ವಾಗ್ವಾದಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇನ್ನು ಮಹಿಳಾ ಶಿಕ್ಷಕಿ ಮೊದಲು ಕೈ ಎತ್ತಿ ತನಗೆ ಥಳಿಸಲು ಪ್ರಯತ್ನಿಸಿದರು ಎಂದು ಅಜಿತ್ ವರ್ಮಾ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪ್ರಾಂಶುಪಾಲನನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ(ಬಿಎಸ್‌ಎ) ಲಕ್ಷ್ಮೀಕಾಂತ್ ಪಾಂಡೆ ಹೇಳಿದ್ದಾರೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...