ginirama-serial-actress-kaveri

ಮನಸಾರೆ ಪ್ರೀತಿಸಿದ ಸೈನಿಕನನ್ನು ಮದುವೆಯಾಗಲು 8 ವರ್ಷಗಳ ಕಾಲ ಕಾದು,ನಾನು ಸೈನಿಕನ ಹೆಂಡತಿ ಆಗುವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ ಎಂದ ಗಿಣಿರಾಮ ಸೀರಿಯಲ್ ನಟಿ ಕಾವೇರಿ! ಇದು ಕಣ್ರೀ ನಿಜವಾದ ಪ್ರೀತಿ ನೋಡಿ!!

Entertainment/ಮನರಂಜನೆ

ಕನ್ನಡ ಸಿನಿಮಾರಂಗದ ನಟ ನಟಿಯರು ವೃತ್ತಿ ಜೀವನದ ಜೊತೆಗೆ ವೈವಾಹಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಕಿರುತೆರೆ ಲೋಕದಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿದೆ. ಇದೀಗ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿ ರಾಮ ಧಾರಾವಾಹಿಯಲ್ಲಿ (Colours Kannada Gini Rama serial) ಸೀಮಾ ಅಲಿಯಾಸ್ ಕಾವೇರಿ (Kaveri Bagalakote)ಸೈನಿಕನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಹೌದು, ಕಾವೇರಿ ಬಾಗಲಕೋಟೆ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಸೈನಿಕನ ಜೊತೆಯಲ್ಲಿ ವಿವಾಹವಾಗುತ್ತಿದ್ದಾರೆ. ಕಾವೇರಿ ನನ್ನ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ, ಮನೆಯವರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಮದುವೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾವೇರಿ, ನಾನು ಸೈನಿಕನನ್ನು ಮದುವೆಯಾಗುತ್ತಿರುವುದರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

PhotoGrid Site 1686978164434

ತಮ್ಮ ಮದುವೆಯ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಶೇಷ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, “ಎಲ್ಲರಿಗೂ ನಮಸ್ಕಾರ ನಮ್ಮ 8 ವರ್ಷದ ಪ್ರೀತಿಯ ಕನಸು ನನಸಾಯಿತು. ಇವತ್ತು ಹಣ್ಣು ಇಡುವ ಶಾಸ್ತ್ರ ಆಯಿತು. ನಾನು ಸೈನಿಕನ ಹೆಂಡತಿ ಆಗುವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ” ಎಂದಿದ್ದಾರೆ.

ಕಾವೇರಿಯವರು ಸಣ್ಣ ವಯಸ್ಸಿನಲ್ಲಿಯೇ ನಟನೆಯತ್ತ ಒಲವು ಹೊಂದಿದ್ದರು. ನಟಿ ಕಾವೇರಿ ಮೇಕಪ್ ಆರ್ಟಿಸ್ಟ್ ಆಗಿದ್ದು ಬಾಗಲಕೋಟೆಯಲ್ಲಿ ತನ್ನದೇ ಆದ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಹೀಗಿರುವಾಗ ಗಿಣಿ ರಾಮ (Gini Rama) ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವಕಾಶಗಳು ಬರುತ್ತಿದ್ದಂತೆ ನಟಿ ಕಾವೇರಿಯವರು ಸಾಕಷ್ಟು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅದಲ್ಲದೇ, ‘ಗಿಣಿರಾಮ’ ಧಾರಾವಾಹಿ ಬಿಟ್ಟ ಬಳಿಕ ಮೇಕಪ್ ಆರ್ಟಿಸ್ಟ್ (Makeup Artist) ಆಗಿ ಕೆಲಸ ಮಾಡುತ್ತಿದ್ದಾರೆ. ಗಿಣಿರಾಮ ಧಾರಾವಾಹಿ ಬಿಟ್ಟ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

PhotoGrid Site 1686978182094

“ಎಲ್ಲರಿಗೂ ನಮಸ್ಕಾರ, ನಾನು ಎರಡು ವರ್ಷ ಸೀಮಾ ಪಾತ್ರವನ್ನು ನಿಭಾಯಿಸಿದ್ದೇನೆ. ಇಷ್ಟುದಿನಗಳ ಕಾಲ ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರೋತ್ಸಾಹ ಅಪಾರವಾಗಿತ್ತು. ಕಾರಣಾಂತರಗಳಿಂದ ನಾನು ಗಿಣಿರಾಮ ಧಾರಾವಾಹಿಯಿಂದ ಹೊರಬರಬೇಕಾಯ್ತು. ಹೀಗೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ನನ್ನ ಮೇಲೆ ಇರಲಿ. ಧನ್ಯವಾದಗಳು” ಎಂದು ಕಾವೇರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.