ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದವರು ಅಲ್ಪ ಸಂಖ್ಯಾತರು ಹಾಗೂ ಯಾರು ಅಲೆಮಾರಿ ಜೀವನ ಸಾಗಿಸುತ್ತಾ ಇರುತ್ತಾರೆ ಒಂದು ಕಡೆ ನೆಲೆ ನಿಲ್ಲದೆ ಊರಿಂದ ಊರಿಗೆ ಅಲೆದಾಟ ಜನ ಇವರು ಹಾಗಾಗಿ ಇವರಿಗೆ ಅಂತಾನೆ ಸರಕಾರ ಹಲವರು ಯೋಜನೆ ಅನ್ನು ಅನುಷ್ಠಾನ ಮಾಡಿದೆ ಅದರಲ್ಲಿ ಗಂಗಾ ಕಲ್ಯಾಣ ಯೋಜನೆ ಕೂಡ ಒಂದು.
ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಅವರಿಗೆ ತನ್ನ ಹೊಲ ಗದ್ದೆ ಇದ್ದು ಅದರಲ್ಲಿ ನೀರಿಗೆ ಅಭಾವ ಇದ್ದಲ್ಲಿ ಸರಕಾರಕ್ಕೆ ಅರ್ಜಿಯನ್ನು ಸಲ್ಲಿಸಿ ಅವರಿಂದ ಸಹಾಯವನ್ನು ಪಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆಯೋಣ ಬನ್ನಿ.
ಗಂಗಾ ಕಲ್ಯಾಣ ಯೋಜನೆ ಅಂದರೆ ರೈತರ ಯಾರ ಹೊಲದಲ್ಲಿ ನೀರಿಗೆ ತೊಂದರೆ ಇರುವುದೋ ಅವರಿಗೆ ಕೊಳವೆ ಬಾವಿ ಹಾಕಿಸಿ ಪಂಪ್ ಸೆಟ್ ಅನ್ನು ಅಳವಡಿಸಿ ವಿದ್ಯುತ್ ಅನ್ನು ಕೂಡ ನೋಡಿ ಆ ಹೊಲಕ್ಕೆ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು. ಹಾಗೇಯೇ ಪರಿಶಿಷ್ಟ ಜಾತಿ ಹಾಗೂ ಪಂಗಡ ಅವರು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾವೆಲ್ಲ ದಾಖಲೆ ನಮೂದಿಸಬೇಕು ಹಾಗೂ ಈ ಯೋಜನೆ ಇಂದ ಏನೆಲ್ಲಾ ಉಪಯೋಗ ಪಡೆಯಬಹುದು ಎಂಬುದನ್ನು ಹಂತ ,ಹಂತವಾಗಿ ನೋಡೋಣ.
ಮೊದಲಿಗೆ ವೈಯಕ್ತಿಕ ಕೊಳವೆ ಬಾವಿ ಯೋಜನೆ ಇದರಡಿಯಲ್ಲಿ ರೈತರಿಗೆ ಸರಕಾರದವರು ನಿಮಗೆ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡುತ್ತಾರೆ ಹಾಗೂ ನಿಮ್ಮ ಹೊಲವು ಒಂದೂವರೆ ಎಕರೆ ಇಂದ 5 ಜಮೀನನ್ನು ನೀವು ಹೊಂದಿರಬೇಕು. ಕೊಡಗು, ಕಾರವಾರ ,ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಇಂಥ ಪ್ರದೇಶ ಅಲ್ಲಿ ಒಂದು ಎಕರೆ ಜಮೀನು ಇದ್ದರೆ ಸಾಕು ಈ ಯೋಜನೆಯನ್ನು ಪಡೆಯಲು.
ಇನ್ನು ಈ ಯೋಜನೆಯ ಅಡಿಯಲ್ಲಿ ಕೆಲವೊಂದು ಜಿಲ್ಲೆಗಳಿಗೆ ಎಷ್ಟು ಸಾಲ ನೀಡುವರು ಎನ್ನುವುದು ಇಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಂ ಹಾಗೂ ಬೆಂಗಳೂರು ನಗರ ,ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಅಂತರ್ಜಾಲ ಮಟ್ಟ ಕಡಿಮೆ ಇರುವುದರಿಂದ ಈ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದರೆ ಸರಕಾರ 4.5 ಲಕ್ಷ ನೀಡುವುದು. ಇದರಲ್ಲಿ 4 ಲಕ್ಷ ಸಹಾಯಧನ ಆಗಿದ್ದು ಉಳಿದ 50000 ಕ್ಕೆ 10ವಾರ್ಷಿಕ ಕಂತುಗಳ ಲೆಕ್ಕದಲ್ಲಿ ಮರುಪಾವತಿ ಮಾಡಬೇಕು ಹಾಗೂ ಸಾಲ ಮೊತ್ತಕ್ಕೆ 6% ಅಷ್ಟು ಬಡ್ಡಿಯನ್ನು ವಿಧಿಸಲಾಗುವುದು.
ಇನ್ನಿತರ ಜಿಲ್ಲೆಯಲ್ಲಿ 3.5 ಲಕ್ಷ ಸಹಾಯಧನ ನೀಡಿ ಮೂರು ಲಕ್ಷ ಸಹಾಯಧನ ಆದರೆ ಉಳಿದ 50000 ಅನ್ನು ವಾರ್ಷಿಕ ಕಂತುಗಳ ಮೂಲಕ ಮರುಪಾವತಿ ಮಾಡಬೇಕು. ಇನ್ನೂ ವಿದ್ಯುತಿಕರಣಕ್ಕೇ ಪ್ರತಿ ಕೊಳವೆ ಬಾವಿಗಳಿಗೆ 50000 ಸಹಾಯಧನ ಅನ್ನು ಸರಕಾರವು ಸಂಬಂಧಿಸಿದ ಬೆಸ್ಕಾಂ ಬಿಡುಗಡೆ ಮಾಡುವುದು.
ಸಾಮೂಹಿಕ ಏತ ನೀರಾವರಿ ಯೋಜನೆ ಅಡಿಯಲ್ಲಿ ರೈತರ ಹೊಲವು ನದಿ ಕಾಲುವೆ ಹಾಗೂ ಹಳ್ಳಗಳ ಬಳಿ ಇದ್ದಲ್ಲಿ ಅಂತಹ ರೈತರಿಗೆ ಈ ಯೋಜನೆ ಆಗಿದೆ ಹಾಗೂ ಆ ರೈತರಿಗೆ 3 ಜನ ಹೊಲವನ್ನು ಒಗ್ಗೂಡಿಸಿ ಈ ಯೋಜನೆಯನ್ನು ಮಾಡಿಕೊಡಲು ಸರಕಾರ ಸಹಾಯಧನ ನೀಡುವುದು. ಇಲ್ಲಿ ಆ ಮೂರು ಜನ ರೈತರ ಹೊಲ ಸುಮಾರು 8 ಎಕರೆ ಇದ್ದಲಿ ಸರಕಾರ ಅವರಿಗೆ4 ಲಕ್ಷ ಹಣವನ್ನು ಮಂಜೂರು ಮಾಡುವುದು. ಹಾಗೂ ರೈತ ಯಾವುದೇ ರೀತಿಯ ಹಣ ಖರ್ಚು ಮಾಡುವ ಅಗತ್ಯ ಇಲ್ಲ. ಇನ್ನು 5 ಮಂದಿ ತನ್ನ ಜಮೀನನ್ನು ಒಟ್ಟುಗೂಡಿಸಿ 15 ಎಕರೆ ಅಷ್ಟು ಇದ್ದಲ್ಲಿ ಸರಕಾರ ಅಂತವರಿಗೆ 6 ಲಕ್ಷ ಸಹಾಯಧನ ಅನ್ನು ನೀಡುವುದು. ಇದನ್ನು ಕೇಂದ್ರ ಸರ್ಕಾರ ಇಲ್ಲ ರಾಜ್ಯ ಸರ್ಕಾರ ಮಂಜೂರು ಮಾಡುವುದು ಹಾಗೂ ನಿಮ್ಮ ಹೊಲಕ್ಕೆ ಪಂಪ್ ಸೆಟ್ ಹಾಗೂ ವಿದ್ಯುತಿಕರಣ ಕೂಡ ಮಾಡಿಕೊಡಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅವರಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಬಗ್ಗೆ ಮಾಹಿತಿ ಇಲ್ಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದವರು ಆಗಿರಬೇಕು ಮತ್ತು ಕನಿಷ್ಟ 15 ವರ್ಷ ಕರ್ನಾಟಕ ರಾಜ್ಯ ಅಲ್ಲಿ ವಾಸ ಮಾಡಿರಬೇಕು, ಅವರ ವಯಸ್ಸು 18-60 ವರ್ಷದ ಒಳಗಿನ ಪ್ರಾಯವದರು ಆಗಿರಬೇಕು. ಇವರ ಕುಟುಂಬದ ವಾರ್ಷಿಕ ಆದಾಯ 22000 ಇಂದ ಹೆಚ್ಚಿಗೆ ಇರಬಾರದು ಅರ್ಜಿದಾರ ಸಣ್ಣ/ಅತಿ ಸಣ್ಣ ಹಿಡುವಳಿದಾರರು ಆಗಿರಲೇಬೇಕು. ಇವರ ಕುಟುಂಬದಲ್ಲಿ ಯಾರೊಬ್ಬರೂ ಕೂಡ ಸರಕಾರಿ ನೌಕರ ಆಗಿರಬಾರದು. ಅರ್ಜಿದಾರ ಹಾಗೂ ಆತನ ಕುಟುಂಬದ ಸದಸ್ಯರು ಆಗಿರಲಿ ಯಾವುದೇ ಕಾರಣಕ್ಕೂ ಯಾವುದೇ ಯೋಜನೆಯ ಅಡಿಯಲ್ಲಿ ಸೌಲಭ್ಯಗಳನ್ನು ಪಡೆದಿರಬಾರದು. ಇನ್ನೂ ಈ ಯೋಜನೆಗೆ ಒಳಪಡುವ ಎಲ್ಲರ ಜಮೀನು ಕೂಡ ಒಟ್ಟಿಗೆ ಇರಬೇಕು ಜಮೀನು ಹತ್ತಿರ ವಿದ್ಯುತ್ ತಂತಿ ಇದ್ದಲ್ಲಿ ಅಂತವರಿಗೆ ಆದ್ಯತೆ ನೀಡಲಾಗುವುದು.
ಗಂಗಾ ಕಲ್ಯಾಣ ಯೋಜನೆ ಅರ್ಜಿ ಸಲ್ಲಿಸಲು ನೀವು ನಮೂದಿಸಬೇಕಾದ ದಾಖಲೆ ವಿವರ ಇಲ್ಲಿದೆ ಅಭ್ಯರ್ಥಿಯು ಪಾಸ್ ಪೋರ್ಟ್ ಗಾತ್ರದ ಇತ್ತೀಚಿನ ನಿಮ್ಮ 2 ಭಾವಚಿತ್ರ , ನಿಮ್ಮ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ನಿಮ್ಮ ಗುರುತಿನ ಚೀಟಿ ( ಬ್ಯಾಂಕ್ ಪಾಸ್ ಬುಕ್ ಮತದಾರ ಚೀಟಿ ಡ್ರೈವಿಂಗ್ ಲೈಸೆನ್ಸ್ ಪಾನ್ ಕಾರ್ಡ್) ಇತ್ತೀಚಿನ ಪಹಣಿ ಹಾಗೂ ಭೂ ನಕ್ಷೆ ಹಾಗೂ ಕೃಷಿ ಪಾನ್ ಪುಸ್ತಕ ಮತ್ತು ಸಣ್ಣ/ ಅತಿ ಸಣ್ಣ ಹಿಡುವಳಿ ಪತ್ರ, ನೀರನ್ನು ಉಪಯೋಗಿಸಲು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತವರಿಂದ ಪರವಾನಗಿಯನ್ನು ಪಡೆದು ಸಲ್ಲಿಸಬೇಕು. ಹಾಗೂ ಸ್ಥಳೀಯ ವಿದ್ಯುತ್ ನಿಗಮ ಆಡಳಿತ ಮಂಡಳಿ ಇಂದ ಪಡೆದ ಅನುಮತಿ ಅಥವಾ ರಶೀದಿಯನ್ನು ಕೂಡ ನೀಡಬೇಕು.
ಈ ಅರ್ಜಿಯನ್ನು ಆನ್ಲೈನ್ ಮೂಲಕ ಸುವಿದ ಆ್ಯಪ್ ತೆರೆದು ಅದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೀವು ಅರ್ಜಿಯನ್ನು ಸಲ್ಲಿಸಬೇಕು. ಮೊದಲಿಗೆ ನಿಮ್ಮ ಭಾಷೆ ಅನ್ನು ಸೇರಿಸಿ ಅಮೇಲೆ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ ಮುಂದೆ ನಂತರದ ಪುಟಕ್ಕೆ ಹೋಗಿ ನಂತರ ಸುವಿದಾ ಆಫೀಸ್ ಯೋಜನೆ ಅಲ್ಲಿ ಸೈನ್ ಇನ್ ಆಗಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಸೂಕ್ತವಾದ ಓ ಟಿ ಪಿ ಅನ್ನು ನಮೂದಿಸಿದ ಬಳಿಕ ನೀವು ಪಾಸ್ವರ್ಡ್ ಅನ್ನು ಸೇರಿಸಿ ಅಮೇಲೆ ಆ ಪುಟ ಬಲಭಾಗಕ್ಕೆ ಸೈನ್ ಇನ್ ಆಪ್ಷನ್ ಇದ್ದು ಮತ್ತೊಮ್ಮೆ ಸೈನ್ ಇನ್ ಆಗಬೇಕು ತದನಂತರ ಸರ್ಚ್ ಬಾಕ್ಸ್ ಅಲ್ಲಿ ಗಂಗಾ ಕಲ್ಯಾಣ ಯೋಜನೆ ಎಂದು ನಮೂದಿಸಿ ಬಳಿಕ ಈ ಯೋಜನೆ ಸಂಪೂರ್ಣ ಮಾಹಿತಿ ಇದ್ದು ನಿಮ್ಮ ಜಾತಿ ವಾಲ್ಮೀಕಿ (ಪರಿಶಿಷ್ಟ ಪಂಗಡ)ಅಥವಾ ಅಂಬೇಡ್ಕರ( ಪರಿಶಿಷ್ಟ ಜಾತಿ) ಸೇರಿದ್ದ ಎಂದು ತಿಳಿದು ನೀವು ಆ ಯೋಜನೆ ಕಾಲಂ ಮೇಲೆ ಕ್ಲಿಕ್ ಮಾಡಬೇಕು.
ಅರ್ಜಿಯಲ್ಲಿ ನಿಮ್ಮ ಧರ್ಮ ಹಿಂದೂ ಅಥವಾ ನೀವು ಯಾವ ಜನಾಂಗಕ್ಕೆ ಸೇರಿದರು ಎಂದು ನಮೂದಿಸಿ ನೀವು ಪುರುಷ / ಮಹಿಳೆಯ ಎಂದು ನಮೂದಿಸಬೇಕು. ಹಾಗೂ ನೀವು ಕರ್ನಾಟಕ ಅಲ್ಲಿ ವಾಸಸ್ಥಳ ಹೌದು ಎಂದು ನಮೂದಿಸಿ, ನಿಮ್ಮ ವಯಸ್ಸು ಹಾಗೂ ನೀವು ಕೃಷಿಕರ ಎಂದು ಕೂಡ ಕೇಳುವುದು ಅದನ್ನು ಕೂಡ ನಮೂದಿಸಿ ಹಾಗೂ ನಿಮ್ಮ ಉದ್ಯೋಗ, ನೀವು ವಾಸಿಸುವ ಸ್ಥಳದ ಮಾಹಿತಿಯನ್ನು ವಿವರವಾಗಿ ಬರ್ತಿ ಮಾಡಿ ದೃಢೀಕರಿಸಿ ಎಂದು ಕೇಳುವುದು ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಾತಿಯ ಬಗ್ಗೆ ಭರ್ತಿ ಮಾಡಿ ಆಮೇಲೆ ನೀವು ಯಾವ ಅಭಿವೃದ್ದಿ ನಿಗಮ ಅಡಿಯಲ್ಲಿ ಬರುವಿರಿ ಎಂದು ಸರಿಯಾಗಿ ನಮೂದಿಸಿ, ನೀವು ಯಾವ ಪ್ರದೇಶ ಅಲ್ಲಿ ವಾಸವಾಗಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಹಾಗೂ ನಿಮ್ಮಲ್ಲಿ ಎಷ್ಟು ಎಕರೆ ಜಮೀನು ಇದೆ ಎನ್ನುವುದರ ವಿವರವನ್ನು ಕೂಡ ಭರ್ತಿ ಮಾಡಬೇಕು.
ನಿಮ್ಮ ವಾರ್ಷಿಕ ಕುಟುಂಬದ ವರಮಾನ ಹಾಗೂ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಬೇರೆ ಯಾವುದೇ ಯೋಜನೆ ಅಲ್ಲಿ ಸೌಲಭ್ಯಗಳನ್ನು ಪಡೆದಿಲ್ಲ ಹಾಗೂ ಯಾರು ಕೂಡ ಸರಕಾರಿ ನೌಕರ ಆಗಿಲ್ಲ ಎಂದು ನಮೂದಿಸಸಬೇಕು. ತದನಂತರ ಎಷ್ಟೆಲ್ಲ ಸಾಲ ಹಾಗೂ ಸಹಾಯ ಧನ ಸಿಗುವುದು , ಯಾವೆಲ್ಲ ದಾಖಲೆ ನೀಡಬೇಕು ಎಂಬುದರ ಮಾಹಿತಿ ಅನ್ನು ಓದಿ ಅಮೇಲೆ ಅರ್ಜಿ ಸಲ್ಲಿಸಲು ಮುಂದುವರಿಯಿರಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ ಅಮೆಲ್ ekvc ಸರ್ವೀಸ್ ಎನ್ನುವ ಪುಟ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅನ್ನು ಸೇರಿಸಿ ಓಟಿಪಿ ಅನ್ನು ಕ್ಲಿಕ್ ಮಾಡಿ ನಿಮ್ಗೆ otp ಬರುವುದು ಅದನ್ನು ನಮೂದಿಸಿ ಸಬ್ಮಿಟ್ ಮಾಡಬೇಕು.
ನಂತರ ನಿಮ್ಮ ಆಧಾರ್ ಕಾರ್ಡ್ ಪ್ರತಿ ಬರುವುದು ಅಮೇಲ್ ಇನ್ನೊಂದು ಪುಟ ಅಲ್ಲಿ ಅರ್ಜಿದಾರರ ಸಂಪೂರ್ಣ ಮಾಹಿತಿ ಅನ್ನು ನಮೂದಿಸಬೇಕು ನೀವು ಯಾವ ತಾಲೂಕು ಸೇರಿದವರು ಯಾವ ವಿಧಾನಸಭಾ ಕ್ಷೇತ್ರಕ್ಕೆ ನೀವು ಸೇರಿದ್ದಿರಿ ಎಂದು ಹಾಗೂ ನಿಮ್ಮ ಫೋಟೋ ಅನ್ನು ಕೂಡ ಅಪ್ಲೋಡ್ ಮಾಡಬೇಕು ಇವು ೨೦೦ ಕೆ ಬಿ ಒಳಗಡೆ ಇರಬೇಕು ಹಾಗೂ ನಿಮ್ಮ ಮತದಾರ ಚೀಟಿ ಅನು ಕೂಡ ಅಪ್ಲೋಡ್ ಮಾಡಬೇಕು ಆವಾಗ ನಿಮ್ಮ ವಿವರ ಅಲ್ಲಿ ಕೇಳುವುದು ಅಲ್ಲಿ ನಿಮ್ಮ ಜಾತಿ ಪ್ರಮಾಣ ಪತ್ರ rd ಸಂಖ್ಯೆ ಅನ್ನು ಹಾಕಬೇಕು ಹಾಗೂ ನಿಮ್ಮ ಆದಾಯ ಪ್ರಮಾಣ ಪತ್ರ ಅರ್ ಡಿ ಸಂಖ್ಯೆ ಅನ್ನು ಕೂಡ ಹಾಕಬೇಕು ಹಾಗೂ ರೈತರ ಎಫ್ ಐ ಡಿ ಹಾಗೂ ರೈತರ ರ್ ಡೀ ಪ್ರಮಾಣ ಪತ್ರ ಸಂಖ್ಯೆಯನ್ನು ಕೂಡ ಕೇಳುವುದು ಗಂಗಾ ಕಲ್ಯಾಣ ಯೋಜನೆ ಎಂದು ನಮೂದಿಸಿ ಅಮೇಲೆ ನಿನ್ನ ಪಡಿತರ ಚೀಟಿ ಅನ್ನು ಅಪ್ಲೋಡ್ ಮಾಡಬೇಕು ಹಾಗೂ ನಿಮ್ಮ ದೂರವಾಣಿ ಸಂಖ್ಯೆ ಅನ್ನು ಕೂಡ ಹಾಕಬೇಕು ನಿಮ್ಮ ಜಮೀನಿನ ವಿವರ ಅಲ್ಲಿ ನಿಮ್ಮ ಜಮೀನು ಎಲ್ಲಿದೆ ಹಾಗೂ ಅದರ ಪಹಣಿ ಹಾಗೂ ಸರ್ವೇ ನಂಬರ್ ಅನ್ನು ಸೇರಿಸಿ ಅಪ್ಲೋಡ್ ಮಾಡಬೇಕು
ತದನಂತರ ನಿಮ್ಮ ಕುಟುಂಬದರ ಸಂಪೂರ್ಣ ಮಾಹಿತಿ ಅನು ಕೂಡ ಅಪ್ಲೋಡ್ ಮಾಡಬೇಕು ಅಮೇಲೆ ಸ್ವಯಂ ದೃಡೀಕರಣ ಮೇಲೆ ಕ್ಲಿಕ್ ಮಾಡಿ ಓಕೆ ಕೊಡಬೇಕು ಎಲ್ಲ ಕಾಲಂ ಮೇಲೆ ಹಸಿರು ಬಣ್ಣ ಬರಬೇಕು ಹಾಗೂ ಅಮೇಲೆ ಕೆಳಗಡೆ ಒಂದು code ಸಿಗುವುದು ಅದನು ಕೊಟ್ಟಿರುವ ಸ್ಥಾನ ಅಲ್ಲಿ ತುಂಬಿಸಿ ಅರ್ಜಿಯನ್ನು ಸಲ್ಲಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಮತೊಮ್ಮೆ ಆಧಾರ್ ಕಾರ್ಡ್ ಸಂಖ್ಯೆ ಅನ್ನು ನಮೂದಿಸಿ ಬಳಿಕ e ಸೈನ್ ಸರ್ವೀಸ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಆಧಾರ್ ಕಾರ್ಡ್ ಅನ್ನು ಸೆಲೆಕ್ಟ್ ಮಾಡಿಬೇಕು ಆಮೇಲೆ ಆಧಾರ್ ಓ ಟಿ ಪಿ ಅನ್ನು ಜನರೇಟ್ ಮಾಡಿ ಅದನ್ನು ನಮೂದಿಸಬೇಕು ಇವಲ್ಲ ಆದಮೇಲೆ ಸಬ್ಮಿಟ್ ಮಾಡ್ಬೇಕು ಆಮೇಲೆ ನೀವು ಸಲ್ಲಿಸಿದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಒಮ್ಮೆ ಪರಿಶೀಲನೆ ನಡೆಸಿದ ಬಳಿಕ ನೀವು ಸ್ವಲ್ಪ ದಿನ ಬಳಿಕ ಪರಿಶೀಲನೆ ಅಲ್ಲಿ ಕ್ಲಿಕ್ ಮಾಡಿದಾಗ ನಿಮ್ಮ ಅರ್ಜಿಯ ಬಗ್ಗೆ ತಿಲ್ಯಬಹುದು ಹಾಗೂ ನಿಮ್ಮ ಅರ್ಜಿ ಯಾವ ಸ್ಟೇಟಸ್ ಅಲ್ಲಿ ಇದೆ ಎನ್ನುವುದನ್ನು ಕೂಡ ಅಪ್ಲೈ ಮಾಡಲಾಗಿದೆ ಎನ್ನುವುದರ ಮೇಲೆ ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು ಈ ರೀತಿಯಾಗಿ ಗಂಗಾ ಕಲ್ಯಾಣ ಯೋಜನೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.