ನೀವೇನಾದ್ರು ಪ್ರತಿನಿತ್ಯ ಪೂಜೆಯನ್ನು ಮಾಡುವಾಗ ಗಣೇಶ ದೇವರ ಈ ಒಂದು ಮಂತ್ರವನ್ನು ಹೇಳಿಕೊಂಡು ಮಾಡಿದರೆ ಸಾಕು.. ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತೆ …!!!!

Today News / ಕನ್ನಡ ಸುದ್ದಿಗಳು

ಗಣೇಶನ ಈ ಒಂದು ಮಂತ್ರವನ್ನು ಪ್ರತಿನಿತ್ಯ ಪೂಜೆ ಮಾಡುವ ಮುನ್ನ ಪಠಿಸಿದರೆ ನಿಮ್ಮ ಜೀವನದಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ.ಹಾಯ್ ಸ್ನೇಹಿತರೆ ದೇವರಲ್ಲಿ ನಂಬಿಕೆ ಇಡುವುದರಿಂದ ನಮ್ಮ ಕಷ್ಟಗಳನ್ನು ಎದುರಿಸುವ ಶಕ್ತಿ ನಮಗೆ ಬರುತ್ತದೆ. ಹಾಗೆ ಜೀವನದಲ್ಲಿ ಭರವಸೆ ಇಟ್ಟುಕೊಳ್ಳಲು ದೇವರು ಇದ್ದಾನೆ ಎಂಬ ಬಲವಾದ ನಂಬಿಕೆ. ದೇವನೊಬ್ಬ ನಾಮ ಹಲವು ಎಂಬ ಗಾದೆಯಂತೆ ದೇವರು ಒಬ್ಬನೇ ಆದರೆ ದೇವರಿಗಿರುವ ಹೆಸರು ತುಂಬಾ ಇವೆ ಆ ಹೆಸರುಗಳನ್ನು ಸಹ ನಾವೇ ಕೊಟ್ಟುಕೊಂಡು ಬಂದಿರುವುದು. ಪ್ರಥಮ ಪೂಜಿತ ವಿಶ್ವ ವಂದಿತ ಎಂದು ಕರೆಯಲ್ಪಡುವ ಶ್ರೀಗಣೇಶನು ವಿಘ್ನಗಳನ್ನು ಕಳೆಯುವ ವಿಜ್ಞೇಶ್ವರ. ವಿಘ್ನಗಳು ಎಂದರೆ ತೊಂದರೆಗಳು ಎಂದು ಅರ್ಥ ಇವುಗಳನ್ನು ಕಳೆಯುವ ದೇವನೆ ಶ್ರೀ ಗಣೇಶ.

ಪಾರ್ವತಿಯ ಪ್ರಿಯ ಪುತ್ರನಾದ ಗಣೇಶನನ್ನು ಪ್ರತಿನಿತ್ಯ ಪೂಜೆ ಮಾಡುವ ಮುನ್ನ ಆಮಂತ್ರಿಸಬೇಕೆಂದರೆ ಈ ಒಂದು ಮಂತ್ರವನ್ನು ನೀವು ಪ್ರತಿನಿತ್ಯ ಪೂಜೆ ಮಾಡುವಾಗ ಹೇಳಬೇಕು. ಮನೆಯಲ್ಲಿ ಯಾವುದೇ ದೇವರಿದ್ದರೂ ಅಥವಾ ಯಾವುದೇ ಶುಭ ಕಾರ್ಯಗಳಲ್ಲಿ ಎಷ್ಟೇ ದೇವರಿದ್ದರೂ ಮೊದಲು ನಾವು ಗಣೇಶನನ್ನು ಪೂಜೆ ಮಾಡುತ್ತೇವೆ ಇದಕ್ಕೆ ಕಾರಣ ಮುಂದೆ ಬರುವ ಎಲ್ಲ ವಿಘ್ನಗಳನ್ನು ದೂರಮಾಡು ಎಂದು ಕೇಳಿಕೊಳ್ಳುವುದಕ್ಕೆ. ಶ್ರೀ ಗಣೇಶನಿಗೆ ತಿನ್ನುವುದಕ್ಕೆ ಮೋದಕ ತುಂಬ ಪ್ರಿಯವಾದದ್ದು. ಪ್ರತಿ ಸಂಕಷ್ಟಿಯ ದಿನದಂದು ಗಣೇಶನನ್ನು ಪೂಜೆ ಮಾಡಿ 21 ಗರಿಕೆ ಪತ್ರಿಗಳನ್ನು ಏರಿಸಿ ಮೋದಕ ಮಾಡಿ ಎಡೆ ಹಿಡಿದು ಭಕ್ತಿಯಿಂದ ಕೈ ಮುಗಿದರೆ ಗಣೇಶನು ನಿಮಗೆ ಎಲ್ಲಾ ಸಂಕಷ್ಟಗಳಿಂದ ದೂರವಾಗುವಂತೆ ಆಶೀರ್ವದಿಸುವನು.

ಗಣೇಶನಿಗೆ ಇಷ್ಟವಾದ ದಿನ ಮಂಗಳವಾರ ಅದಕ್ಕೆ ಸಂಕಷ್ಟಿಯ ದಿನ ಮಂಗಳವಾರ ಬಂದರೆ ಅಂಗಾರಕ ಸಂಕಷ್ಟಿ ಎಂದು ಕರೆಯುತ್ತಾರೆ. ಪ್ರತಿ ವರ್ಷ ಗಣೇಶ ಹಬ್ಬದಲ್ಲಿ ನಾವು ಸಂಭ್ರಮವನ್ನು ಪಡೆಯುತ್ತೇವೆ. ಗಣೇಶನಿಗೆ ಪಟಾಕಿಯನ್ನು ಹಚ್ಚುತ್ತೇವೆ ವಿಧವಿಧವಾದ ತಿಂಡಿ ತಿನಿಸುಗಳನ್ನು ಮಾಡಿ ಗಣೇಶನಿಗೆ ಇಡುತ್ತೇವೆ. ಹೀಗೆ ಮಾಡುವುದರಿಂದ ಗಣೇಶನು ಮನೆಯ ಎಲ್ಲಾ ಕಷ್ಟಗಳನ್ನು ದೂರ ಮಾಡಿ ನಮಗೆ ಆಶೀರ್ವದಿಸುವನು. ಯಾರಾದರೂ ನಿಮಗೆ ಪೂಜೆಗಳನ್ನು ಮಾಡಲು ಹೇಳಿದರೆ ಮೊದಲು ತಪ್ಪದೇ ಗಣೇಶನ ಪೂಜೆಯನ್ನು ಮಾಡಬೇಕು ಏಕೆಂದರೆ ಪೂಜೆಯಲ್ಲಿ ಯಾವುದಾದರೂ ವಿಘ್ನಗಳು ಬರದಂತೆ ಅಂದರೆ ಯಾವುದೇ ದೋಷಗಳು ಬರದಂತೆ ವಿನಾಯಕನು ನಮ್ಮನ್ನು ಕಾಪಾಡುವನು.

ಮಹಾಗಣಪತಿ, ಲಂಬೋದರ, ಗಜಾನನ, ಹೇರಂಬ, ಗಣೇಶ, ವಿನಾಯಕ, ವಕ್ರತುಂಡ ಮುಂತಾದ ಅನಂತ ನಾಮಗಳಿಂದ ವಿಖ್ಯಾತನಾದ ಈ ದೇವನ ಮಹಿಮೆಯನ್ನು ಅರಿಯದವರು ಯಾರು ಹೇಳಿ ಸ್ನೇಹಿತರೆ. ಗಣೇಶನು ಲೋಕಪ್ರಿಯನು. ಗಣಗಳ ಅಧಿಪತಿ ಈ ಗಣೇಶ. ಪತಿ ಎಂದರೆ ಪಾಲನೆ ಮಾಡುವುದು ಎಂದು ಅರ್ಥ. ಯಾವುದೇ ಪೂಜೆಗಳಲ್ಲಿ ಗಣೇಶನನ್ನು ಮೊದಲು ಪೂಜೆ ಮಾಡದಿದ್ದರೆ ಯಾವ ದೇವರು ಕೂಡ ಬೇರೆ ಬೇರೆ ದಿಕ್ಕಿನಿಂದ ಬರಲು ಸಾಧ್ಯವಿಲ್ಲ ಹಾಗಾಗಿ ಮೊದಲು ಗಣೇಶನಿಗೆ ನಾವು ಆದ್ಯತೆ ಕೊಡಬೇಕು. ಪೂಜೆ ಮಾಡುವಾಗ ಈ ಒಂದು ಮಂತ್ರವನ್ನು ಪಠಿಸಬೇಕು ಅದರಲ್ಲೂ ಗಣೇಶನ ಪೂಜೆ ಮೊದಲು ಮಾಡುವಾಗ ಇದನ್ನು ಹೇಳಬೇಕು ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ.

ಇದನ್ನೂ ಓದಿ >>>  ಇಂದಿನಿಂದ 33 ಕೋಟಿ ದೇವರುಗಳ ಆಶೀರ್ವಾದದಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು.

ಇದರ ಅರ್ಥ ಎಲ್ಲಾ ವಿಘ್ನಗಳನ್ನು ನಿವಾರಿಸುವನು ಗಣಪತಿ ಎಂದು. ನಂತರ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ಎಂದು ಹೇಳಿ ಪೂಜೆಯನ್ನು ಪ್ರಾರಂಭ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಪೂಜೆಗೆ ಸಾಕಷ್ಟು ಫಲ ಸಿಗುತ್ತದೆ. ಪ್ರತಿನಿತ್ಯ ನೀವು ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ವಿಘ್ನಗಳು ದೂರಾಗುತ್ತವೆ. ಇನ್ನು ಯಾರಾದರೂ ಹೊಸ ಅಂಗಡಿ ಅಥವಾ ವಾಹನ ವ್ಯಾಪಾರ ಅಥವಾ ಹೊಸಮನೆ ಹೀಗೆ ಯಾವುದಾದರೂ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡುತ್ತಿರುವಾಗ ಮೊದಲು ಗಣೇಶನನ್ನು ಪೂಜಿಸಬೇಕು. ನಂತರ ಈ ಮಂತ್ರಗಳನ್ನು ಹೇಳಿ ದೇವರನ್ನು ಅಮಂತ್ರಿಸು ಬೇಕು ಸ್ನೇಹಿತರೆ ಹಾಗಾದರೆ ಏಕೆ ಗಣೇಶನನ್ನು ಮೊದಲು ಪೂಜೆ ಮಾಡಬೇಕು ಮತ್ತು ಇದರ ಫಲಗಳು ಏನು ಎಂದು ಈ ಮಾಹಿತಿಯಲ್ಲಿ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...