ganesh-rupees

ಈ ದೇಶದ ನೋಟಿನ ಮೇಲಿದೆ ಗಣಪತಿ ಚಿತ್ರ ! ಇದು ಸತ್ಯ,ಅದೆಷ್ಟೋ ಜನರಿಗೆ ಈಗಲೂ ಈ ಸತ್ಯ ಗೊತ್ತೇ ಇಲ್ಲ

Entertainment/ಮನರಂಜನೆ

ಭಾರತದ ನೋಟಿನಲ್ಲೂ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಈ ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ ಎಂದರೆ ನೀವು ನಂಬಲೇಬೇಕು. ಈ ಗಣೇಶನ ಚಿತ್ರವಿರುವ ನೋಟು ಇಂಡೋನೇಷ್ಯಾ ದೇಶದ್ದಾಗಿದೆ. 20,000 ರೂಪಾಯಿ ಮುಖಬೆಲೆಯ ಇಂಡೊನೇಷ್ಯಾದ ಹಳೆಯ ನೋಟಿನಲ್ಲಿ ಗಣೇಶನ ಫೋಟೋ ಇದೆ. ಇಂಡೋನೇಷ್ಯಾದಲ್ಲಿ ಸುಮಾರು 87ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿದ್ದು ಹಿಂದೂಗಳ ಸಂಖ್ಯೆ ಕೇವಲ 3ರಷ್ಟು. ಹೀಗಿದ್ದರೂ 20 ಸಾವಿರ ರುಪಾಯಿ ನೋಟಿನ ಮೇಲೆ ಗಣಪತಿ ಫೋಟೋವನ್ನು ಹಾಕಲಾಗಿದೆ. ಗಣೇಶನ ಫೋಟೋ ಪಕ್ಕದಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರ ಕೀ ಹಾಜಾರ್ ಫೋಟೋವೂ ಇದೆ

ಗಣೇಶ ಎಂದರೆ ಬುದ್ಧಿವಂತ, ಕಲೆ ಮತ್ತು ವಿಜ್ಞಾನದ ಸಂಕೇತ ಎಂದು ಇಲ್ಲಿ ನಂಬಲಾಗಿದೆ. ಈ ಕಾರಣಕ್ಕಾಗಿಯೇ ನೋಟಿನಲ್ಲಿ ಮುದ್ರಿಸಲಾಗಿದೆ ಎಂದು ಹೇಳಲಾಗುತ್ತದೆ.ಇಂಡೋನೇಷ್ಯಾದ ನೋಟಿನ ಮೇಲೆ. ಬರೋಬ್ಬರಿ 20 ಸಾವಿರ ರುಪಾಯಿ ನೋಟಿನ ಮೇಲೆ ಗಣೇಶನ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದಲ್ಲಿನ ವಾತಾಪಿ ಗಣಪತಿಯನ್ನೇ ಹೋಲುತ್ತದೆ. ಇಂಡೋನೇಷ್ಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾಗ ಅಲ್ಲಿ 20 ಸಾವಿರದ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿತ್ತು.

ಇದಾದ ಬಳಿಕ ಅಲ್ಲಿನ ಅರ್ಥ ವ್ಯವಸ್ಥೆ ಹತೋಟಿಗೆ ಬಂತಂತೆ. ಹೀಗಾಗಿಯೇ ಅಲ್ಲಿನ ಸರ್ಕಾರ ಇಂದಿಗೂ ಸಹ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸುತ್ತಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.