
Gandhigrama soumya : ಸಾಮಾನ್ಯವಾಗಿ ಕೆಲವರು ಮಾಡುವ ಕೆಲಸವು ಅಂತಿದ್ದಲ್ಲ. ಹೌದು ಮಹಿಳೆಯೂ ಮಾಡಿದ ಕೆಲಸಕ್ಕೆ ಇದೀಗ ಪೊಲೀಸರ ಕೈಯಲ್ಲಿ ಬಂದಿಯಾಗಿದ್ದಾಳೆ. ಕರೂರು ಜಿಲ್ಲೆಯ ಗಾಂಧಿಗ್ರಾಮದಲ್ಲಿ ವಾಸವಾಗಿರುವ ಶಬರಿ (ಎ) ಸೌಮ್ಯ ಎಂಬ ಮಹಿಳೆ ನಾನಾ ಹಗರಣಗಳಲ್ಲಿ ಭಾಗಿಯಾಗಿದ್ದಾಳೆ. ಹೊಗೆ ವಂಚನೆಯಲ್ಲಿ ತೊಡಗಿರುವ ಮಹಿಳೆ ಕರೂರ್ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವುದನ್ನು ಸಂತ್ರಸ್ತರು ಪತ್ತೆ ಹಚ್ಚಿದ್ದಾರೆ. ಈ ಖತರ್ನಾಕ್ ಮಹಿಳೆ ಸೌಮ್ಯಾಳನ್ನು ಪತ್ತೆ ಮಾಡಿ ಪಶುಪತಿಪಾಳ್ಯಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಈ ಸೌಮ್ಯಾ ವಿದ್ಯುತ್ ವಿಭಾಗದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಲವರನ್ನು ಯಾಮಾರಿಸಿದ್ದಾಳೆ. ಅದರಲ್ಲೂ ವಿದ್ಯುತ್ ಸಚಿವರು ತಮ್ಮ ಸಂಬಂಧಿ ಎಂದು ಹೇಳಿಕೊಂಡು ತಿರುಗಿದ್ದು ಕರೂರ್, ಕೊಯಮತ್ತೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಮಂದಿಯಿಂದ 10 ಲಕ್ಷಕ್ಕೂ ಹೆಚ್ಚಕ್ಕೂ ಹಣವನ್ನು ಲಪಾಟಯಿಸಿದ್ದಾಳೆ. ಅಷ್ಟೇ ಆಗಿದ್ದರೆ ಏನು ಅನಿಸುವುದಿಲ್ಲ. ಆದರೆ ಈ ಮಹಿಳೆಯೂ ಸುಳ್ಳು ಹೇಳಿ 8 ಮಂದಿಯನ್ನು ಮದುವೆಯಾಗಿದ್ದಾಳೆ.
ಸೌಮ್ಯಾ ತನಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮರುಮದುವೆಗೆ ಸಿದ್ಧಳಿದ್ದೇನೆ ಎಂದು ಹೇಳಿ ನನ್ನನ್ನು ಮದುವೆಯಾಗಲು ಯತ್ನಿಸಿದ್ದಾಳೆ. ಮದುವೆಯಾದರೆ ನನಗೂ ಸರ್ಕಾರಿ ನೌಕರಿ ಕೊಡಿಸುತ್ತೇನೆ. ನನ್ನ ಗೆಳೆಯರಿಗೂ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ಮುಂಗಡವಾಗಿ ತೆಗೆದುಕೊಂಡಿದ್ದಳು.
ಮದುವೆಗೂ ಮುನ್ನ ಸಂಬಂಧಿಕರಿಗೆ ಹುಡುಗಿಯ ಫೋಟೋ ಕೊಟ್ಟು ವಿಚಾರಿಸುವಂತೆ ಹೇಳಿದ್ದೆ. ಈ ಹಿಂದೆ ಮಹಿಳೆ ತನ್ನ ಕುಟುಂಬದವರ ಮನೆ ಎಂದು ಹೇಳಿಕೊಂಡಿದ್ದ ಮನೆಗೆ ನನ್ನ ಸಂಬಂಧಿಯೊಬ್ಬರು ಹೋಗಿ ವಿಚಾರಿಸಿದ್ದಾರೆ. ಆದರೆ ಅಲ್ಲಿ ವಾಸಿಸುವ ಜನರಿಗೆ ಈ ಮಹಿಳೆ ಯಾರೆಂದು ತಿಳಿದಿಲ್ಲ. ಈ ಬಗ್ಗೆ ನನ್ನ ಸಂಬಂಧಿಕರು ನನಗೆ ಎಚ್ಚರಿಕೆ ನೀಡಿದ್ದು..
ಬಳಿಕ ಸೌಮ್ಯಾಳನ್ನು ವಿಚಾರಿಸಿದಾಗ ಆಕೆ 8 ಮಂದಿಗೆ ಮೊದಲೇ ಮದುವೆಯಾಗಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೇಲಾಗಿ ಕರೂರು ಅಪರಾಧ ವಿಭಾಗದ ಉಪಾಧೀಕ್ಷಕ ಸುಕುಮಾರ್, ನಗರ ಪೊಲೀಸ್ ಉಪಾಧೀಕ್ಷಕ ದೇವರಾಜ್ ಮತ್ತು ಇನ್ಸ್‌ಪೆಕ್ಟರ್ ಸೆಂಥಿಲ್‌ಕುಮಾರ್ ತನಿಖೆ ನಡೆಸುತ್ತಿದ್ದಾರೆ.
Comments are closed.