ಗದಗದಲ್ಲಿ ಸತ್ತ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದ ವೈದ್ಯರು..!! ಇದು ನಿಜಕ್ಕೂ ಹೇಗೆ ಸಾಧ್ಯ..??

ನಮಸ್ಕಾರ ಸ್ನೇಹಿತರೇ, ಗದಗದಲ್ಲಿ ಮೃತ ಗರ್ಭಿಣಿಯ ಗರ್ಭದಿಂದ ಜೀವದ ಶಿಶುವೊಂದನ್ನು ಹೊರಗಡೆ ತೆಗೆದಿರುವಂತಹ ವಿಚಿತ್ರ ಘಟನೆಯೊಂದು ನಡೆದಿದೆ. ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ದಂಡಪ್ಪ ಮಾನ್ವಿ ಮಹಿಳಾ ಅಂಡ್ ಮಕ್ಕಳ ಆಸ್ಪತ್ರೆ ವೈದ್ಯರು ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವೊಂದನ್ನು ಹೊರತೆಗೆದಿದ್ದಾರೆ. ಗರ್ಭಿಣಿ ಅನ್ನಪೂರ್ಣ ಇನ್ನೋವ ಬಿಪಿ ಮತ್ತು ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಊರಿನಿಂದ ಆಸ್ಪತ್ರೆಗೆ ಕರೆತರುವ ರಲ್ಲಿ ಗರ್ಭಿಣಿ ಸತ್ತು ಹೋಗಿದ್ದರು. ಆದರೆ ಹೊಟ್ಟೆಯಲ್ಲಿರುವ ಮಗುವನ್ನು ಜೀವಂತವಾಗಿ ಇರುವುದನ್ನು ಗಮನಿಸಿದ ವೈದ್ಯರು ಕೂಡಲೇ ಆಪರೇಷನ್ ಮಾಡಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಘಟನೆ ನಡೆದಿರುವುದು ನವಂಬರ್ 4ರಂದು.

ಇನ್ನು ಅನ್ನಪೂರ್ಣ ಎನ್ನುವವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳದ ಹಿನ್ನೆಲೆ ಆರೋಗ್ಯದಲ್ಲಿ ಏರುಪೇರಾಗಿದೆ.
ಅದಲ್ಲದೆ ಬಿಪಿ ಮತ್ತು ಮೂರ್ಛೆ ರೋಗದಿಂದ ತೀವ್ರವಾಗಿ ಅಸ್ವಸ್ಥರಾಗಿದ್ದರು. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಎಲ್ಲಾ ತಯಾರಿ ಮಾಡಿದರು ಸಹ ಗರ್ಭಿಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ತದನಂತರ ಗರ್ಭಿಣಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಅನಂತರ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹೃದಯ ಬಡಿತ ಗಮನಿಸಿದ ವೈದ್ಯರು ಮಗುವನ್ನು ರಕ್ಷಣೆ ಮಾಡಿದ್ದು ಈಗ ಮಗು ದಿನದಿಂದ ದಿನಕ್ಕೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದ್ದು ನಾವು ಬಹಳ ವಿಶೇಷವಾಗಿ ಕಾಳಜಿ ವಹಿಸುತ್ತಿದ್ದೇವೆ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ.

ಇನ್ನು ಮದುವೆಯಾಗಿ ಕೇವಲ ಒಂದು ವರ್ಷ ಆಗಿದ್ದು ಈಗ ನನ್ನ ಹೆಂಡತಿ ನನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದಾಳೆ ಆದರೆ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಾನು ಮಗುವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆ ಮಗುವಿನ ತಂದೆ ಈಗ ಕಣ್ಣೀರು ಹಾಕುತ್ತಿದ್ದಾರೆ….

You might also like

Comments are closed.