ಹುಡುಗ ಹಾಗೂ ಹುಡುಗಿ ಜೀವನ ಪೂರ್ತಿ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂದು ಹಲವಾರು ಜನ ಹೇಳುವುದಕ್ಕೆ ಕಾರಣಗಳೇನು ಗೊತ್ತೇ??

Girls Matter/ಹೆಣ್ಣಿನ ವಿಷಯ

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಸ್ನೇಹ ಸಂಬಂಧವನ್ನು ಪ್ರಪಂಚದಲ್ಲಿ ಅತ್ಯಂತ ಪವಿತ್ರ ಸಂಬಂಧ ಎಂದು ಕರೆಯಲಾಗುತ್ತದೆ. ಸ್ನೇಹಿತರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇರಲು ಸಾಧ್ಯವೇ ಇಲ್ಲ. ತಮ್ಮ ಸ್ನೇಹಿತರ ಕುರಿತಂತೆ ಅವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಆದರೆ ಯಾವಾಗ ಹುಡುಗರು ಹುಡುಗರೊಂದಿಗೆ ಹುಡುಗಿಯರು ಹುಡುಗಿಯರೊಂದಿಗೆ ಸ್ನೇಹ ಸಂಬಂಧದಲ್ಲಿ ಇರುತ್ತಾರೆ ಅಲ್ಲಿಯವರೆಗೂ ಈ ಸಮಾಜದಲ್ಲಿ ಯಾರೂ ಕೂಡ ಏನನ್ನು ಹೇಳಲು ಹೋಗುವುದಿಲ್ಲ. ಆದರೆ ಒಬ್ಬ ಹುಡುಗ ಹುಡುಗಿಯೊಂದಿಗೆ ಸ್ನೇಹ ಸಂಬಂಧವನ್ನು ಹೊಂದಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಹೇಳುತ್ತಾರೆ. ಒಂದು ಹುಡುಗ ಹಾಗೂ ಹುಡುಗಿ ಸ್ನೇಹದಲ್ಲಿ ಇದ್ದರೆ ಅದು ಖಂಡಿತವಾಗಿ ಸ್ನೇಹ ಅಲ್ಲ ಎನ್ನುವುದಾಗಿ ಎಲ್ಲರೂ ವಾದಿಸುತ್ತಾರೆ. ಅಷ್ಟಕ್ಕೂ ಸಮಾಜ ಹೀಗೆ ಹೇಳಲು ಕಾರಣವೇನು ಎನ್ನುವುದನ್ನು ತಿಳಿಯೋಣ ಬನ್ನಿ.

ಹುಡುಗ ಹಾಗೂ ಹುಡುಗಿ ಜೀವನ ಪೂರ್ತಿ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂದು ಹಲವಾರು ಜನ  ಹೇಳುವುದಕ್ಕೆ ಕಾರಣಗಳೇನು ಗೊತ್ತೇ?? - Hello Karnataka News

ಮೊದಲನೇದಾಗಿ ಸಮಾಜ ಎಷ್ಟೇ ಆಧುನಿಕವಾಗಿ ಬದಲಾಗಿದ್ದರು ಕೂಡ ಯಾವಾಗ ಹುಡುಗ ಹಾಗೂ ಹುಡುಗಿಯ ನಡುವಿನ ಸ್ನೇಹ ಸಂಬಂಧದ ಕುರಿತಂತೆ ಬರುತ್ತದೆಯೋ ಆಗ ಯಾವತ್ತೂ ಕೂಡ ಸಮಾಜ ಅವರಿಬ್ಬರ ಸ್ನೇಹ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿ ಬಾರಿ ಹುಡುಗ-ಹುಡುಗಿಯ ನಡುವಿನ ಸ್ನೇಹ ಸಂಬಂಧವನ್ನು ತಪ್ಪು ದೃಷ್ಟಿಯಲ್ಲಿ ನೋಡುತ್ತದೆ ಸಮಾಜ. ಇದಕ್ಕಾಗಿಯೇ ಇಂದಿನ ಸಮಾಜದಲ್ಲಿ ಹುಡುಗ ಹಾಗೂ ಹುಡುಗಿ ಸ್ನೇಹ ಸಂಬಂಧವನ್ನು ಇಟ್ಟುಕೊಳ್ಳಲು ಹಿಂಜರಿಯುತ್ತಾರೆ. ಯಾಕೆಂದರೆ ಅವರಿಬ್ಬರ ನಡುವೆ ಪವಿತ್ರವಾದ ಸ್ನೇಹ ಸಂಬಂಧ ಇದ್ದರೂ ಕೂಡ ಸಮಾಜ ಅವರ ನಡುವೆ ಬೇರೆಯದೇ ಸಂಬಂಧ ಇದೆ ಎನ್ನುವುದಾಗಿ ಅನುಮಾನ ದೃಷ್ಟಿಯಲ್ಲಿ ನೋಡುತ್ತದೆ.

ಎರಡನೆಯದಾಗಿ ಒಂದು ವೇಳೆ ಹುಡುಗ ಹಾಗೂ ಹುಡುಗಿ ಒಟ್ಟಿಗೆ ಕುಳಿತುಕೊಂಡು ಮಾತನಾಡುತ್ತಿದ್ದರೆ ಸಮಾಜ ಅಥವಾ ಬೇರೆಯವರು ಅವರ ಕುರಿತಂತೆ ಏನು ಯೋಚಿಸುತ್ತಾರೆ ಎಂದರೆ ಅವರಿಬ್ಬರು ಡೇಟ್ ಮಾಡುತ್ತಿದ್ದಾರೆಯೇ ಎನ್ನುವುದಾಗಿ. ಸಮಾಜ ಒಂದು ಹುಡುಗ ಹಾಗೂ ಹುಡುಗಿ ಜೊತೆಯಾಗಿ ಕುಳಿತುಕೊಂಡಿದ್ದಾರೆ ಎಂದರೆ ಅವರನ್ನು ಗರ್ಲ್ಫ್ರೆಂಡ್ ಹಾಗೂ ಬಾಯ್ಫ್ರೆಂಡ್ ಎನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಹೀಗಾಗಿ ಹುಡುಗ-ಹುಡುಗಿಯರು ಸಮಾಜದ ಬಾಯಿಗೆ ಬೇಡುವುದಕ್ಕಿಂತ ಮಿಗಿಲು ತಾವು ದೂರವಿರುವುದು ಒಳ್ಳೆಯದು ಎಂಬುದಾಗಿ ಭಾವಿಸುತ್ತಾರೆ.

ಅಯ್ಯೋ.. ಕ್ರಶ್​ ಆಗೋಯ್ತು! ಹುಡುಗಿಯರು ಹೆಚ್ಚು ಈ ಸ್ವಭಾವದವರನ್ನು ಇಷ್ಟ ಪಡುತ್ತಾರಂತೆ

ಮೂರನೇದಾಗಿ ಕೆಲವೊಮ್ಮೆ ಆ ಹುಡುಗ-ಹುಡುಗಿಯ ನಡುವಿನ ಸ್ನೇಹ ಸಂಬಂಧದಲ್ಲೇ ಬದಲಾವಣೆಗಳು ಆರಂಭ ಆಗುತ್ತದೆ. ಕೆಲವೊಮ್ಮೆ ಹುಡುಗಿಗೆ ಹುಡುಗನ ಸ್ನೇಹಿತರ ತಾಪತ್ರಯಗಳು ಅಥವಾ ಹುಡುಗಿಯ ಪುರುಷ ಸ್ನೇಹಿತರಿಂದ ಆ ಹುಡುಗನಿಗೆ ಕಷ್ಟಗಳು ಬರಬಹುದು. ಕೆಲವೊಮ್ಮೆ ಇವರಿಬ್ಬರ ನಡುವೆ ಬರಬರುತ್ತಾ ಸ್ನೇಹದ ರೂಪ ಇರುವುದು ಪ್ರೀತಿಗೆ ಬದಲಾಗಿ ಬಿಡಬಹುದಾಗಿದೆ.

ನಾಲ್ಕನೆಯದಾಗಿ ಕೆಲವೊಮ್ಮೆ ಹೊರಗಿನ ಜನರ ಮಾತುಗಳಿಂದ ನಿಮ್ಮ ಮಗಳು ಅಥವಾ ನಿಮ್ಮ ಮಗ ಯಾವುದು ಹುಡುಗಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂಬುದಾಗಿ ಹೇಳುವುದರ ಮೂಲಕ ಇಬ್ಬರ ಮನೆಯವರು ಕೂಡ ಅವರಿಬ್ಬರ ಮದುವೆಯನ್ನು ಬೇರೆಬೇರೆಯಾಗಿ ಬೇಗನೆ ಮಾಡಲು ನಿರ್ಧರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ನಿಮ್ಮ ಕಣ್ಣೆದುರೆ ಸಮಾಜದಲ್ಲಿ ನೋಡಿರುತ್ತೀರಿ. ಅದರಲ್ಲೂ ಕೆಲವೊಮ್ಮೆ ಆ ಹುಡುಗ-ಹುಡುಗಿಯ ನಡುವೆಯೇ ಸ್ನೇಹ ಸಂಬಂಧ ಎನ್ನುವುದು ಪ್ರೇಮಕ್ಕೆ ತಿರುಗಿ ಇಬ್ಬರು ಕೂಡ ಮದುವೆಯಾಗುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ.

ಇದನ್ನೂ ಓದಿ >>>  ಹೊಸದಾಗಿ ಮದುವೆಯಾದ ಹೆಣ್ಣು ಮಗಳು..ಈಕೆಗೆ ಗಂಡ ಏನು ಕುಡಿಸಿದ್ದಾನೆ ನೋಡಿ..ಇವನ ಜನ್ಮಕ್ಕಿಷ್ಟು..

ಪ್ರೀತಿಯ ಹುಚ್ಚು ಹಚ್ಚಿಕೊಂಡ ಹುಡುಗ-ಹುಡುಗಿಯರೆ ಪ್ರೇಮದ ಅಮಲಿನಲ್ಲಿ ಮುಳಗಬೇಡಿ” -  karijananews

ಕೊನೆಯದಾಗಿ ಸಿನಿಮಾಗಳ ಪ್ರಭಾವ ಕೂಡ ಇವರ ಮೇಲೆ ಬೀರುತ್ತದೆ. ನೀವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರಬಹುದು ಹೀರೋ ಹಾಗೂ ಹೀರೋಯಿನ್ ಇಬ್ಬರೂ ಕೂಡ ಮೊದಲು ಸಿನಿಮಾದಲ್ಲಿ ಸ್ನೇಹಿತರಾಗಿರುತ್ತಾರೆ. ನಂತರ ಇವರಿಬ್ಬರ ನಡುವೆ ನಿಧಾನವಾಗಿ ಪ್ರೀತಿ ಮೂಡಲು ಆರಂಭವಾಗುತ್ತದೆ. ನಿಜ ಜೀವನದಲ್ಲಿ ಕೂಡ ಇದು ಹುಡುಗ-ಹುಡುಗಿ ನಡುವೆ ಪ್ರಭಾವಬೀರಿ ಇವರ ಸ್ನೇಹ ಪ್ರೀತಿಗೆ ತಿರುಗುವುದರಲ್ಲಿ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಹೀಗಾಗಿ ಹುಡುಗ ಹಾಗೂ ಹುಡುಗಿಯ ನಡುವಿನ ಸ್ನೇಹ ಸಂಬಂಧ ಎನ್ನುವುದು ಹೆಚ್ಚಿನ ಕಾಲ ಉಳಿಯುವುದಿಲ್ಲ. ಈ ಮೇಲೆ ತಿಳಿಸಿರುವ ವಿಚಾರಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...