ವಿದ್ಯುತ್

ರೇಷನ್ ಕಾರ್ಡ್ ಇರುವ SC ಹಾಗೂ ST ಅವರಿಗೆ ಗುಡ್ ನ್ಯೂಸ್,ಉಚಿತ ವಿದ್ಯುತ್…

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭರ್ಜರಿ ಗುಡ್ ನ್ಯೂಸ್ ಇದೆ ಆ ಒಂದು ಗುಡ್ ನ್ಯೂಸ್ ಏನೆಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಕಡೆಯಿಂದ ಪ್ರತಿ ತಿಂಗಳು 75 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಭಾಗ್ಯಜ್ಯೋತಿ / ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ ಮಾಸಿಕ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪೂರೈಕೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.ಈ ಸಮುದಾಯದವರಿಗೆ ಮೊದಲ 75 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವ ನಿರ್ಧಾರ ತೆಗೆದುಕೊಂಡಿದೆ. ಪ್ರಸ್ತುತ ಸರ್ಕಾರದ ಕುಟೀರ ಯೋಜನೆಯಡಿ 40 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು 75 ಯೂನಿಟ್ ಗಳಿಗೆ ಹೆಚ್ಚಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.
News Headlines | SC ST ಅವರಿಗೆ ಉಚಿತ ವಿದ್ಯುತ್ ನೀಡಿದ CM Bommai; ಇದರ ಹಿಂದಿದ್ಯಾ ರಾಜಕೀಯ ಲಾಭ! - YouTube
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈ ಸಮುದಾಯದವರಿಗೆ ಮೊದಲ 75 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಸಲು ಆದೇಶಿಸಿದೆ. ಈ ಸಂಬಂಧ ಇಂಧನ ಇಲಾಖೆ ಆದೇಶ ಹೊರಡಿಸಿದ್ದು, ಮೇ 1 ರಿಂದ ಅನ್ವಯವಾಗುವಂತೆ ಉಚಿತ ವಿದ್ಯುತ್ ಸರಬರಾಜು ಮಾಡಲು ಸೂಚಿಸಲಾಗಿದೆ.ಉಚಿತ ವಿದ್ಯುತ್ ಸರಬರಾಜು ಮಾಡಲು ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸುವ ಅಂಕಿ ಅಂಶಗಳನ್ನು ಪರಿಗಣಿಸಬೇಕು. ಪ್ರತಿ ಸಾಲಿನಲ್ಲಿ ಸಚಿವ ಸಂಪುಟ ಅನುಮೋದಿಸಿರುವ ಪ್ರಕಾರವಾಗಿ ಒದಗಿಸಬೇಕಾದ ವಿದ್ಯುತ್‌ ಸಹಾಯ ಧನದ ಮೊತ್ತದ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡ ನಂತರ ವಿದ್ಯುತ್ ಸರಬರಾಜು ಕಂಪನಿಗಳು ಸದರಿ ಮೊತ್ತದ ವಿವರಗಳೊಂದಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಕ ಆಯೋಗಕ್ಕೆ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಉಚಿತ ವಿದ್ಯುತ್ ಪಡೆಯುವ ಸ್ಥಾವರಗಳಿಗೆ ಮಾಪಕವನ್ನು ಕಡ್ಡಾಯವಾಗಿ ಅಳವಡಿಸಬೇಕು.
ಈ ಸೌಲಭ್ಯಕ್ಕೆ ಅರ್ಹರಾಗುವ ವಿದ್ಯುತ್ ಗ್ರಾಹಕರುಗಳು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ ಸದರಿ ಗ್ರಾಹಕರುಗಳಿಗೆ DBT ಯೋಜನೆಯ ವ್ಯವಸ್ಥೆಯಡಿ ಸರ್ಕಾರದಿಂದ ಸಹಾಯ ಧನ ನೀಡುವ ಮುಖಾಂತರ ಮರು ಪಾವತಿಸಲಾಗುವುದು.ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಪ್ರವರ್ಗದ ವಿದ್ಯುತ್ ಗ್ರಾಹಕರುಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರದ ದೃಢಿಕೃತ ದಾಖಲೆಯನ್ನು ಒದಗಿಸಬೇಕು. ಜತೆಗೆ ಈ ಪ್ರವರ್ಗದ ವಿದ್ಯುತ್ ಗ್ರಾಹಕರುಗಳು ಏಪ್ರಿಲ್ 30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿರಬೇಕು ಎಂದು ಸೂಚಿಸಿದೆ.
ಕೋಟತಟ್ಟು ಮನೆಗೆ ಉಚಿತ ವಿದ್ಯುತ್ ಸಂಪರ್ಕ | Vartha Bharati- ವಾರ್ತಾ ಭಾರತಿ
ಗ್ರಾಹಕರು ಈ ಸೌಲಭ್ಯವನ್ನು ಪಡೆಯಲು ವಿದ್ಯುತ್ ಬಿಲ್ ಪ್ರತಿ, ಬಿಪಿಎಲ್ ರೇಷನ್ ಕಾರ್ಡ್ ಪ್ರತಿ ಆರ್.ಸಿ ಸಂಖ್ಯೆ ಸಹಿತ, ಆಧಾರ್ ಕಾರ್ಡ್ ಪ್ರತಿ, ಜಾತಿ ಪ್ರಮಾಣಪತ್ರದ ಪ್ರತಿ ಆರ್.ಡಿ. ಸಂಖ್ಯೆ ಸಹಿತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಒದಗಿಸಬೇಕು. ಸೌಲಭ್ಯವನ್ನು ಪಡೆಯಲು ಅರ್ಹ ಫಲಾನುಭವಿ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗಧಿತ ಅವಧಿಯೊಳಗೆ ಪಾವತಿಸಬೇಕು. ತದನಂತರ ನೇರವಾಗಿ ಸದರಿ ಗ್ರಾಹಕರ ಸೌಲಭ್ಯವನ್ನು ಪಡೆಯಲು 2022 ರ ಏಪ್ರಿಲ್ 30 ರ ಅಂತ್ಯಕ್ಕೆ ಇರುವ ವಿದ್ಯುತ್ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಮಾತ್ರ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ. ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಉಪವಿಭಾಗದ ಕಂದಾಯ ಶಾಖೆಯಲ್ಲಿ ಸಲ್ಲಿಸಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಪ್ರಕಟಣೆ ತಿಳಿಸಿದೆ.
ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.