ಕಾರ್ಮಿಕ ಇಲಾಖೆಯು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಫಲಾನುಭವಿಗಳಿಗೆ ಉಚಿತ ಬಸ್‍ಪಾಸ್ ಒದಗಿಸಲಾಗುವುದು.
ಈ ಮಂಡಳಿಯಲ್ಲಿ ಈಗಾಗಲೇ ನೋಂದಾಯಿಸಿರುವ ಫಲಾನುಭವಿಗಳು ತಮ್ಮ ವಾಸಸ್ಥಳಕ್ಕೆ ಹತ್ತಿರದಲ್ಲಿರುವ ಕರ್ನಾಟಕ ಒನ್/ ಗ್ರಾಮ ಸೇವಾ ಒನ್ ಸೆಂಟರ್‍ಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸುವಾಗ ಕಾರ್ಮಿಕ ಕಲ್ಯಾಣ ಇಲಾಖೆಯವರು ನೀಡಿರುವ ಗುರುತಿನ ಚೀಟಿಯನ್ನು ಹಾಗೂ ಆಧಾರ್ ಕಾರ್ಡನ್ನು ಹಾಜರುಪಡಿಸಿ, ಉಚಿತ ಪಾಸ್ ಪಡೆದುಕೊಳ್ಳಬಹುದು.
ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ (45 ಕಿ.ಮೀ.) ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ಪಾಸುದಾರರು ಕ.ರಾ.ಸಾ.ನಿಗಮ, ವಾ.ಕ.ರ.ಸಾ ನಿಗಮ ಹಾಗೂ ಕ.ಕ.ರ.ಸಾ ನಿಗಮದ ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.
ಪಾಸುದಾರರು ಮೂಲ ಪಾಸುಗಳನ್ನು ಮಾತ್ರ ಜೊತೆಯಲ್ಲಿಟ್ಟು ಪ್ರಯಾಣಿಸುವುದು ಕಡ್ಡಾಯವಿರುತ್ತದೆ. ಪಾಸಿನ ನಕಲು ಪ್ರತಿ/ ಕಲರ್ ಜೆರಾಕ್ಸ್ ಪಾಸುಗಳನ್ನು ನಿಗಮದ ಬಸ್ಸುಗಳಲ್ಲಿ ಮಾನ್ಯ ಮಾಡಲಾಗುವುದಿಲ್ಲ.
ಈ ಬಸ್ ಪಾಸ್ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿಗೆ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಬಹುದು.