ಕರ್ನಾಟಕದಲ್ಲಿ ಈಗ ರಾಜ್ಯದಾದ್ಯಂತ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಕರ್ನಾಟಕದ ಮಹಿಳೆಯರಿಗೆ ಅನುಕೂಲತೆ ಮಾಡಿಕೊಡಲಾಗಿದೆ. ಶಕ್ತಿ ಯೋಜನೆಯಡಿ ಈ ಪ್ರಯೋಜನವನ್ನು ನಾಡಿನ ಎಲ್ಲಾ ನಾರಿಮಣಿಯರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಎಲ್ಲಾ ಕಡೆ ಮಹಿಳೆಯರೇ ತುಂಬಿತುಳುಕುತ್ತಿದ್ದಾರೆ.
ಎಲ್ಲಾ ಸಾರ್ವಜನಿಕ ಬಸ್ ನಿಲ್ದಾಣಗಳಲ್ಲೂ ಕೂಡ ಮಹಿಳಾಮಣಿಗಳದೇ ಗುಂಪು. ಈ ಯೋಜನೆಯಿಂದ ಉಂಟಾಗಿರುವ ಪಾಸಿಟಿವ್ ಮತ್ತು ನೆಗೆಟಿವ್ ಪರಿಣಾಮಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ ಅದಕ್ಕೆ ಸಂಬಂಧಪಟ್ಟ ನ್ಯೂಸ್ಗಳು ಮತ್ತು ಟ್ರೋಲಿಂಗ್ ವಿಡಿಯೋಗಳನ್ನು ಕೂಡ ನೋಡಿದ್ದೇವೆ. ಈಗ ಶಕ್ತಿ ಯೋಜನೆಯಡಿ ಕಳ್ಳತನದ ಹಾವಳಿ ಕೂಡ ಹೆಚ್ಚಾಗಿದೆ ಎನ್ನಬಹುದಾದಂತಹ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಸಹಜವಾಗಿ ಜನಸಂದಣಿ ಇರುವ ಸಾರ್ವಜನಿಕ ಪ್ರದೇಶಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಸಂತೆ ಜಾತ್ರೆಗಳಲ್ಲಿ ಈ ರೀತಿ ಅನೌನ್ಸ್ಮೆಂಟ್ ಬರುತ್ತಲೇ ಇರುತ್ತದೆ. ಯಾಕೆಂದರೆ ನೂಕು ನುಗ್ಗಲಿನಲ್ಲಿ ಏನೇ ಕಳ್ಳತನ ಆದರೂ ಕೂಡ ಕಳೆದುಕೊಂಡವರಿಗೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ ಎನ್ನುವುದು ಕಳ್ಳತನ ಮಾಡುವವರಿಗೆ ಗೊತ್ತಿರುವುದರಿಂದ ಕೈಚಳಕ ತೋರಿಸುವ ಪ್ರಯತ್ನ ಮಾಡುತ್ತಾರೆ.
ಆದರೆ ಎಲ್ಲಾ ಸಮಯದಲ್ಲೂ ಅದೃಷ್ಟ ಅವರ ಕಡೆಗೆ ಇರುವುದಿಲ್ಲ, ಕಳ್ಳತನ ಮಾಡುವ ಸಿಕ್ಕಿಬಿಟ್ಟರೆ ಅಂತವರಿಗೆ ಧರ್ಮದೇಟು ತಪ್ಪುವುದಿಲ್ಲ. ಇಂತಹದೇ ಒಂದು ಸಾಹಸಕ್ಕೆ ಕೈ ಹಾಕಿದ ಮಹಿಳೆಯೊಬ್ಬಳು ಈಗ ಚಿಕ್ಕಬಳ್ಳಾಪುರದ ಪೊಲೀಸರ ಅತಿಥಿ ಆಗಿದ್ದಾಳೆ. ಜೊತೆಗೆ ಈಕೆ ಮಹಿಳೆಯೊಬ್ಬರ ಸರ ಕದಿಯಲು ಯತ್ನಿಸಿ ಸಿಕ್ಕಿಬಿದ್ದದ್ದಕ್ಕಾಗಿ ಸರಿಯಾಗಿ ಶಿಕ್ಷೆ ಅನುಭವಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರಕರಣದ ಹಿನ್ನೆಲೆ ನೋಡುವುದಾದರೆ ಕಳೆದ ಭಾನುವಾರ ವೀಕೆಂಡ್ ಇದ್ದ ಕಾರಣ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣದ ಅನುಕೂಲತೆ ಇರುವುದರಿಂದ ಚಿಕ್ಕಬಳ್ಳಾಪುರದ ಇಶಾ ಫೌಂಡೇಶನ್ ಗೆ ಭೇಟಿ ಕೊಡಲು ಸಾವಿರಾರು ಮಹಿಳೆಯರು ಬಂದಿದ್ದರು. ಆದ್ದರಿಂದ ಚಿಕ್ಕಬಳ್ಳಾಪುರದ ಬಸ್ ನಿಲ್ದಾಣದಲ್ಲಿ ಮತ್ತು ಎಲ್ಲ ಸಾರ್ವಜನಿಕ ಬಸ್ ಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಇದ್ದರು.
ಇದನ್ನು ಬಂಡವಾಳ ಮಾಡಿಕೊಂಡ ಮೈಸೂರು ಮೂಲದ ಮಂಜುಳಾ ಎನ್ನುವ ಮಹಿಳೆ ಕೋಲಾರದಿಂದ ಚಿಕ್ಕಬಳ್ಳಾಪುರದ ನೆಂಟರ ಮನೆಗೆ ಬಂದು ಮರಳಿ ವಾಪಸ್ಸು ಹೋಗಲು ಬಸ್ ಗಾಗಿ ಕಾಯುತ್ತಿದ್ದ ನಾಗಮ್ಮ ಎನ್ನುವ ಮಹಿಳೆಯ ಎರಡು ಲಕ್ಷ ಬೆಲೆಬಾಳುವ ಮಾಂಗಲ್ಯ ಸರದ ಮೇಲೆ ಕಣ್ಣು ಹಾಕಿದ್ದಾಳೆ.
ಬಸ್ಸು ಏರುವ ವೇಳೆ ನೂಕುನುಗ್ಗಲು ಇದ್ದ ಕಾರಣ ಈ ಸಮಯದಲ್ಲಿ ಅವಳ ಆಭರಣ ಎಗರಿಸಿದರೆ ಗೊತ್ತಾಗುವುದಿಲ್ಲ ಎಂದುಕೊಂಡು ಬಸ್ ಹತ್ತುವ ವೇಳೆ ಅದನ್ನು ಕಿತ್ತುಕೊಂಡಿದ್ದಾಳೆ. ತಕ್ಷಣವೇ ಹಿಂದಕ್ಕೆ ತಿರುಗಿ ನಾಗಮ್ಮ ನೋಡಿದಾಗ ಮಂಜುಳಾ ವರ್ತನೆ ಅನುಮಾನಾಸ್ಪದವಾಗಿದ್ದಲ್ಲದೇ ಸೆರಗಿನಲ್ಲಿ ಏನನ್ನೋ ಬಚ್ಚಿಟ್ಟುಕೊಳ್ಳುತ್ತಿರುವಂತೆ ಕಂಡಿದೆ.
ಎಚ್ಚೆತ್ತುಕೊಂಡ ನಾಗಮ್ಮ ಕೊರಳನ್ನು ನೋಡಿಕೊಳ್ಳುತ್ತಿದ್ದಾಗ ಮಂಜುಳ ಸರವನ್ನು ಕೈ ಬಿಟ್ಟಿದ್ದಾರೆ. ಆದರೆ ಅದು ಆಕೆಯ ಸೀರೆಗೆ ಅಂಟುಕೊಂಡು ಜೋತಾಡುತ್ತಿದ್ದಂತೆ. ಆದರಿಂದ ಈಕೆಯನ್ನೇ ಕಳ್ಳಿ ಎಂದು ನಾಗಮ್ಮ ಆಕೆಯ ಜುಟ್ಟು ಹಿಡಿದು ಧರಧರನೆ ಕೆಳಗೆ ಎಳೆದು ತಂದಿದ್ದಾರೆ. ಆ ಸಮಯದಲ್ಲಿ ಆರೋಪ ಹೊತ್ತ ಮಂಜುಳಾ ನಾನವಳಲ್ಲ ನಾನವಳಲ್ಲ ಎಂದು ಹೇಳುತ್ತಿದ್ದರು ಕೇಳುವಷ್ಟು ಸಮಾಧಾನ ನಾಗಮ್ಮ ಅವರಿಗೆ ಇರಲಿಲ್ಲ.
ಅಲ್ಲಿದ್ದ ಮಹಿಳೆಯರು ಮತ್ತು ಪ್ರಯಾಣಿಕರು ನಿರ್ವಾಹಕರು ಜಗಳ ನಡೆಸುವ ಪ್ರಯತ್ನ ಮಾಡಿದರು. ಕೊನೆಗೆ ಮಂಜುಳಾ ಅವರನ್ನು ಹತ್ತಿರದಲ್ಲಿದ್ದ ಪೊಲೀಸರಿಗೆ ಒಪ್ಪಿಸಲಾಗಿದೆ. ಇಷ್ಟೆಲ್ಲ ಘಟನೆ ನಡೆಯುತ್ತಿರುವಾಗ ಅಲ್ಲಿದ್ದವರಲ್ಲಿ ಒಬ್ಬರು ಇದನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.