ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ವು ಅತೀ ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ರಾಜ್ಯದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿದೆ. ಈಗಾಗಲೇ ಕಾಂಗ್ರೆಸ್ ಚುನಾವಣೆಯ ಮೊದಲೇ ನೀಡಿದ್ದ ಐದು ಭರವಸೆಗಳನ್ನು ಈಡೇರಿಸುತ್ತ ಗಮನ ಹರಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಈಡೇರಿಸುತ್ತಿದ್ದೂ, ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಯೋಜನೆಗಳಿಂದ ಪಕ್ಷಕ್ಕೆ ತಲೆ ನೋವು ಶುರುವಾಗುವಂತೆ ಆಗಿದೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ (Gurantee Scheme) ಗಳಲ್ಲಿ ಮೊದಲನೇದಾಗಿ ಅನುಷ್ಠಾನಗೊಂಡ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಒಂಭತ್ತು ದಿನದಲ್ಲಿ ಸುಮಾರು 4 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿ 100 ಕೋಟಿ ಮೊತ್ತದ ಟಿಕೆಟ್ ಪಡೆದಿದ್ದು ಯಶಸ್ವಿಯಾಗಿ ಸಾಗುತ್ತಿದೆ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಬಸ್ಸ್ ರಶ್ ಆಗುತ್ತಿದೆ. ಇದರಿಂದಾಗಿ ಉಳಿದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಅದಲ್ಲದೇ ಬಸ್ಸಿನಲ್ಲಿ ಮಹಿಳೆಯರು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಮೈಸೂರಿ (Mysore) ನ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಸ್‌ನಲ್ಲಿ ಮಹಿಳೆಯರು ಜಗಳ ಮಾಡಿಕೊಂಡಿದ್ದರು. ಅದಲ್ಲದೇ ಕೆಲವು ಕಡೆಗಳಲ್ಲಿ ಮಹಿಳೆ ಪ್ರಯಾಣಿಕರ ಕಿತ್ತಾಟಕ್ಕೆ ಬಸ್ಸಿನ ಕಿಟಕಿ ಹಾಗೂ ಬಾಗಿಲುಗಳು ಮುರಿದು ಬಿದ್ದಿದ್ದವು. ಇದೀಗ ಮತ್ತೊಂದು ವಿಡಿಯೋವೊಂದು ವೈರಲ್ ಆಗಿವೆ.
ಈ ವಿಡಿಯೋ (Video) ದಲ್ಲಿ ಬಸ್ಸು ರಶ್ ಇದ್ದ ಕಾರಣ ಡ್ರೈವರ್ ಸೀಟಿನ ಬಾಗಿಲಿನಿಂದ ಮಹಿಳೆಯರು ಹತ್ತಿದ್ದಾರೆ. ಈ ಘಟನೆಯು ನಡೆದಿರುವುದು ಚಿಕ್ಕಬಳ್ಳಾಪುರದಲ್ಲಿ. ಚಿಕ್ಕಬಳ್ಳಾಪುರ (Chikkaballapura) ದ ಚಿಂತಾಮಣಿ ನಗರ ( Chintamani Nagar) ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ (KSRTC Bus Stand) ದಲ್ಲಿ ಇಂತಹದೊಂದು ದೃಶ್ಯ ಕಂಡು ಬಂದಿದೆ. ಬಸ್ಸನ್ನು ಹತ್ತಲು ಕೆಲವರು ಕಿಟಕಿ ಒಳಗಿನಿಂದ ಸೀಟ್ ಮೇಲೆ ತಮ್ಮ ಬ್ಯಾಗ್, ಕರ್ಚೀಫ್‌ಗಳನ್ನು ಹಾಕಲು ಪ್ರಯತ್ನಿಸಿದ್ದಾರೆ.
ಆದರೆ ಕೆಲವು ಮಹಿಳೆಯರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿದ್ದಾರೆ. ಬಸ್ ಹತ್ತುವ ಸಲುವಾಗಿ ಡ್ರೈವರ್ ಸೀಟ್ ಬಳಿಗೆ ಓಡಿದ ಮಹಿಳೆಯರು ಅಲ್ಲಿಂದಲೇ ಬಸ್ಸ್ ಹತ್ತಿದ್ದಾರೆ. ಅದಾಗಲೇ ಒಬ್ಬರ ಹಿಂದೆ ಇನ್ನೊಬ್ಬರಂತೆ ನಾಲ್ಕೈದು ಮಹಿಳೆಯರು ಬಸ್ಸಿನೊಳಗೆ ಹೋಗಿದ್ದಾರೆ. ಈ ವಿಚಾರ ಬಸ್ ನಿರ್ವಾಹಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲೇ ಇದ್ದ ಮಹಿಳೆಯರನ್ನು ಬೈದು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.