ಸಾಧನೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ ಹಾಗೂ ಶಿಕ್ಷಣ ಅನ್ನೋದು ಕೂಡಾ ಯಾರ ಅಪ್ಪನ ಸ್ವತ್ತು ಅಲ್ಲ ವಿದ್ಯೆ ಯಾರ ಅಪ್ಪನ ಸ್ವತ್ತು ಅಲ್ಲ ಅನ್ನೋದನ್ನ ನೀವು ಕೇಳಿರಬಹುದು. ವಿದ್ಯೆ ಅನ್ನುವುದು ಹಣ ಇದ್ದವರಿಗೆ ಮಾತ್ರ ಬರುತ್ತದೆ ಬಡವರಿಗೆ ಬರುವುದಿಲ್ಲ ಅನ್ನುವಂತಹ ಮಾತು ಏನು ಇಲ್ಲ.ವಿದ್ಯೆ ಸರಸ್ವತಿ ಯಾರಿಗೂ ಬೇಕಾದ ಒಲಿಯಬಹುದು. ನೀವು ನೋಡಿರಬಹುದು ಕೆಲವೊಬ್ಬರು ಓದುವುದು ಕೇವಲ ಒಂದು ಗಂಟೆ ಅಥವಾ ಅರ್ಧ ಗಂಟೆ ಆದರೆ ಅವರು ಇಡೀ ಶಾಲೆಗೆ ರಾಂಕ್ ಬರುತ್ತಾರೆ ಅಂದರೆ ನೀವು ಅರ್ಥಮಾಡಿಕೊಳ್ಳಿ ವಿದ್ಯಾ ಸರಸ್ವತಿ ಯಾರಿಗೆ ಬೇಕಾದರೂ ಒಲಿಯಬಹುದು.ಇದಕ್ಕೆ ನಾನು ಕೊಡುವಂತಹ ಒಂದು ಚಿಕ್ಕ ಉದಾಹರಣೆ.
ಅದಲ್ಲ ಬಿಡಿ ಇವತ್ತು ನಾವು ಒಂದು ವಿಚಿತ್ರವಾದ ಹಗೂ ನಾವು ನಂಬುವುದಕ್ಕೆ ಆಗದೇ ಇರುವಂತಹ ಒಂದು ವಿಚಾರವನ್ನು ತಗೊಂಡು ಬಂದಿದ್ದೇನೆ. ಅದು ಏನಪ್ಪಾ ಅಂತೀರಾ ಅದು ಒಂದು ಕುರಿ ಕಾಯುವಂತಹ ಹುಡುಗಿ ಇವತ್ತು ಫ್ರಾನ್ಸ್ ನಲ್ಲಿ ಶಿಕ್ಷಣ ಮಂತ್ರಿಯಾಗಿದ್ದಾರೆ. ಫ್ರಾನ್ಸ್ ನಲ್ಲಿ ಈ ಶಿಕ್ಷಣ ಮಂತ್ರಿ ಅಂದ್ರೆ ಅದು ಸುಲಭದ ವಿಚಾರಣಾ ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.ಫ್ರಾನ್ಸ್ ದೇಶದಲ್ಲಿ ಮೊದಲ ಶಿಕ್ಷಣ ಮಂತ್ರಿಯಾಗಿ ಒಂದು ಹುಡುಗಿಯ ಆಯ್ಕೆಯಾಗಿರುವುದು ನಿಜವಾಗ್ಲೂ ಸಂತೋಷ ತರುವಂತಹ ಸುದ್ದಿ .ಫ್ರಾನ್ಸ್ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ಮುಸ್ಲಿಂ ಯುವತಿ ದೊಡ್ಡ ಮಟ್ಟದ ಹುದ್ದೆಯಲ್ಲಿ ಆಯ್ಕೆಯಾಗಿರುವುದು ನಿಜವಾಗಲೂ ಅವರ ಮನೆಯವರಿಗೆ ಹಾಗೂ ಅಲ್ಲಿನ ದೇಶದವರಿಗೆ ಒಂದು ಹೆಮ್ಮೆಯ ಸಂಗತಿ.
ಇಂಥ ಬಡ ಕುಟುಂಬದಿಂದ ಹುಟ್ಟಿ ಇಂತ ದೊಡ್ಡ ಸ್ಥಾನಕ್ಕೆ ಹೋಗಬೇಕಾದರೆ ಆ ಹುಡುಗಿ ಪಟ್ಟಂತಹ ಕಷ್ಟವಾದರೂ ಎಷ್ಟಿರಬಹುದು ಎನ್ನುವುದಕ್ಕೆ ಈ ಹುಡುಗಿ ಇಂಥ ಸ್ಟೇಜ್ಗೆ ಬಂದು ನಿಂತಿರುವುದನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ.ಬನ್ನಿ ಇವಳ ಕಥೆಯನ್ನು ಸ್ವಲ್ಪ ತಿಳಿದುಕೊಳ್ಳೋಣ, 1977 ಒಂದು ಬಡ ಕುಟುಂಬದಲ್ಲಿ ಒಂದು ಬಡ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದಂತಹ ಯುವತಿ, ಕುರಿಗಳನ್ನು ಸಾಕುತ್ತಾರೆ ಅದರಲ್ಲಿ ಸಿಗುತ್ತಿರುವ ಹಾಲಿನಿಂದ ತನ್ನ ಜೀವನವನ್ನು ಹಾಗೂ ತನ್ನ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು.
ಹೀಗೆ ತಾನು ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಪಾಪ ಕುರಿಗಳನ್ನು ಮೇಯಿಸಿಕೊಂಡು ಅದರಿಂದ ಬರುವಂತಹ ಹಣದಿಂದ ತನ್ನ ಜೀವನವನ್ನು ನಡೆಸುತ್ತಾ ತನ್ನ ವಿದ್ಯಾಭ್ಯಾಸವನ್ನು ಕೂಡ ಮಾಡ್ತಾ ಇದ್ದಳು. 1980 ರಲ್ಲಿ ಫ್ರಾನ್ಸ್ ಗೆ ಅವರ ಕುಟುಂಬ ವಲಸೆ ಬರುತ್ತಾರೆ. ಹೀಗೆ ವಲಸೆ ಬಂದಂತಹ ಇವರ ಕುಟುಂಬ ಅವರಿಗೆ ಯಾವುದೇ ಫ್ರಾನ್ಸ್ ಭಾಷೆ ಬರುತ್ತಿರಲಿಲ್ಲ ,ಆದರೆ ಅದನ್ನು ಒಂದು ಸವಾಲಾಗಿ ತೆಗೆದುಕೊಂಡರು. ಹೀಗೆ ವಲಸೆ ಬಂದಂತಹ ಆ ಹುಡುಗಿ ಇಲ್ಲು ಕೂಡ ಅದೇ ತರದ ಕೆಲಸವನ್ನು ಮಾಡಿಕೊಂಡು ತಾನು ಹೇಗಾದರೂ ಮಾಡಿ ತನ್ನ ಜೀವನದಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರನ್ನು ತಂದುಕೊಡಬೇಕು ಎನ್ನುವಂತಹ ಜಲವನ್ನು ಇಟ್ಟುಕೊಂಡು ಓದಲು ಪ್ರಾರಂಭಿಸುತ್ತಾಳೆ.
ಅದಲ್ಲದೆ ಫ್ರಾನ್ಸ್ ನಲ್ಲಿ ಇವಳು ಓದುವ ಸಂದರ್ಭದಲ್ಲಿ ಹಲವಾರು ಜನರ ಜೊತೆಗೆ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ ಹಾಗೂ ಇತರರ ಕಷ್ಟವನ್ನು ಕೂಡ ಅವಳು ಕೇಳಿ ಅದಕ್ಕೆ ಸ್ವಲ್ಪ ಪರಿಹಾರವನ್ನು ಬರುವಂತಹ ಕೆಲಸವನ್ನು ಕೂಡ ಸಾಮಾಜಿಕ ಕಳಕಳಿ ಯಲ್ಲಿ ಇಟ್ಟುಕೊಂಡು ಮಾಡುತ್ತಾಳೆ.ಇದರಿಂದಾಗಿ ಅವಳ ಹೆಸರು ಆ ಜಾಗದಲ್ಲಿ ತುಂಬಾ ಕೇಳಿಬರುತ್ತದೆ ಅದಲ್ಲದೆ ಅವಳು ಶಿಕ್ಷಣದ ಕುರಿತು ಹಾಗೂ ಚಿಕ್ಕ ಮಕ್ಕಳ ಶಿಕ್ಷಣದ ಕುರಿತು ಹೆಚ್ಚಾಗಿ ಕಳವಳವನ್ನು ತೋರಿಸುತ್ತಿರುತ್ತಾರೆ. ಅಷ್ಟರ ಹೊತ್ತಿಗೆ ಅವಳು ತನ್ನ ವಿದ್ಯಾಭ್ಯಾಸವನ್ನು ಸಂಪೂರ್ಣವಾಗಿ ಮುಗಿಸಿ ಬಿಟ್ಟಿದ್ದಳು ಅವಳು ಆಡುವಂತಹ ಮಾತು ಹೇಳುವಂತಹ ಪರಿ ಹಾಗೂ ಕೊಡುವಂತಹ ಸಲಹೆಗಳು ಸರ್ಕಾರಕ್ಕೆ ತುಂಬಾ ಒಳ್ಳೆಯದಾಗುವ ಹಾಗೆ ಕಾಣಿಸತೊಡಗಿತು.ಆ ಹುಡುಗಿ ಹೆಸರು ಏನು ಎನ್ನುವುದರ ಪ್ರಶ್ನೆಗೆ ಉತ್ತರ ನಜತ್ ಬೆಲ್ ಕಸಮ್ .
ಇದನ್ನು ಗಮನಿಸಿದ ಅಲ್ಲಿನ ಸರ್ಕಾರ ಈ ಹುಡುಗಿಗೆ ಒಂದು ಚಾನ್ಸ್ ಕೊಟ್ಟು ನೀನು ನಮ್ಮ ಸರ್ಕಾರದಲ್ಲಿ ಕೆಲಸ ಮಾಡು ಎಂದು ಅವಕಾಶವನ್ನೂ ಕೊಡುತ್ತಾರೆ. ಕೊಟ್ಟಂತಹ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಅಂತಹ ಯುವತಿ ಎಲ್ಲರ ಕಣ್ಣು ಅವಳ ಮೇಲೆ ಬೀಳುವ ಹಾಗೆ ಕೆಲಸವನ್ನು ಮಾಡುತ್ತಾಳೆ .ಹಾಗೂ ಶಿಕ್ಷಣದಲ್ಲಿ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡದಾದ ಅಂತಹ ಒಂದು ಮಾರ್ಪಾಡನ್ನು ತೆಗೆದುಕೊಂಡು ಬರುತ್ತಾರೆ. ಇದನ್ನು ನೋಡಿದಂತಹ ಅಲ್ಲಿನ ಸರ್ಕಾರ ನೀನು ಶಿಕ್ಷಣ ಮಂತ್ರಿಯಾದರೆ ತುಂಬಾ ಒಳ್ಳೆಯದು ಎಂದು ಹೇಳಿ ಅವಳಿಗೆ ಶಿಕ್ಷಣ ಮಂತ್ರಿಯನ್ನಾಗಿ ಮಾಡುತ್ತಾರೆ.
ಗೊತ್ತಾಯಿತಲ್ಲ ಸ್ನೇಹಿತರೆ ಹೇಗೆ ಒಳ್ಳೆಯ ಮನಸ್ಸಿನಿಂದ ನಾವೇನಾದರೂ ಕೆಲಸವನ್ನು ಮಾಡಿದರೆ ಪ್ರತಿಫಲ ದೊರಕುತ್ತದೆ ಎನ್ನುವುದಕ್ಕೆ ಇದೇ ಒಂದು ಜೀವಂತ ಸಾಕ್ಷಿ. ಈ ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಹೇಳಿ ಲೈಕ್ ಮಾಡುವುದಕ್ಕಾಗಿ. ಹಾಗೆಯೇ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡಿದ ಇಲ್ಲಿಂದ ಹೋಗಬೇಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ.