ಸದ್ಯಕ್ಕೆ ದೇಶದ ಪರಿಸ್ಥಿತಿ ಹೇಗಾಗಿದೆ ಎಂದರೆ ಟೇಬಲ್ ಕೆಳಗೆ ಹಣ ಇಡದೆ ಯಾವುದೇ ಸರ್ಕಾರಿ ಕೆಲಸಗಳು ಮುಂದಕ್ಕೆ ಹೋಗುವುದಿಲ್ಲ. ಅದಕ್ಕೆ ಕರ್ನಾಟಕ ರಾಜ್ಯ ಕೂಡ ಹೊರತೇನಲ್ಲ. ರಾಜ್ಯದಲ್ಲೂ ಕೂಡ ಬಹುತೇಕ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಹೀಗೆ ಇದೆ. ತಿಂಗಳುಗಟ್ಟಲೆ ಪ್ರತಿದಿನ ಅಲೆದರೂ ಕೂಡ ಗಿಂಬಳ ನೋಡದೆ ಇಲ್ಲಿ ಫೈಲ್ ಮುಂದಕ್ಕೆ ಹೋಗುವುದಿಲ್ಲ.
ಆದರೆ ಎಲ್ಲಕ್ಕೂ ಅಂತ್ಯ ಇರುವಂತೆ ಲಂಚ ಬಯಸುವವರ ಆಸೆಬುರುಕು ತನಕ್ಕೂ ಕೂಡ ಕಡಿವಾಣ ಇದ್ದೇ ಇದೆ. ಅದಕ್ಕಾಗಿ ಲೋಕಾಯುಕ್ತ ಎನ್ನುವ ಅಸ್ತ್ರವನ್ನು ಬಳಸಬೇಕು. ಈ ರೀತಿ ಲೋಕಾಯುಕ್ತ ದಾ’ಳಿ ನಡೆಸಿದ ವೇಳೆ ಲಂಚ ಪಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದೇ ರೀತಿ ಆಹಾರ ಇಲಾಖೆಯ ಅಧಿಕಾರಿ ಲಂಚ ಸ್ವೀಕರಿಸಿ ಎಸ್ಕೇಪ್ ಆಗುವಾಗ ಸಿನಿಮಾ ಸ್ಟೈಲಲ್ಲಿ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಬಂದಿಸಿರುವ ಘಟನೆಯೊಂದು ನಡೆದಿದೆ.
ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಸುಂಡೆಕೊಪ್ಪ ಎನ್ನುವಲ್ಲಿ ಈ ಘಟನೆ ನಡೆದಿದೆ. ರಂಗಧಾಮಯ್ಯ ಎನ್ನುವ ವ್ಯಕ್ತಿ ಕೆಜಿ ಸರ್ಕಲ್ ಬಳಿ ಇರುವ ತನ್ನ ವ್ಯಾಪ್ತಿಗೆ ಬರುವ ತಹಶೀಲ್ದಾರ್ ಕಚೇರಿಗೆ ಹಲವು ತಿಂಗಳಿಂದ ಆಹಾರ ಪರವಾನಗಿ ಪಡೆಯಲು ಹೋಗುತ್ತಿದ್ದರು. ಇವರ ದಾಖಲೆಗಳು ಸರಿಯಾಗಿದಯೇ ಎಂದು ಪರೀಕ್ಷಿಸಿ ಕೆಲಸ ಮಾಡಿ ಕೊಡಬೇಕಾದ ಫುಡ್ ಇನ್ಸ್ಪೆಕ್ಟರ್ ಆಗಿರುವ ಮಹಾಂತೇಶ್ ಗೌಡ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ.
ಇದಕ್ಕಾಗಿ ಬರೋಬ್ಬರಿ ಒಂದು ಲಕ್ಷ ಡಿಮ್ಯಾಂಡ್ ಮಾಡಿದ್ದ ಈತ ಮುಂಗಡವಾಗಿ 12,000 ರೂಗಳನ್ನು ಪಡೆದಿದ್ದಾನೆ. ಬಳಿಕ 43,000 ರೂ. ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ತಾನು ಟ್ರ್ಯಾಕ್ ಆಗುತಿದ್ದೇನೆ ಎನ್ನುವುದು ಅರ್ಥ ಕೂಡಲೇ ಅಲ್ಲಿಂದ ಪರಾರಿ ಆಗಲು ಯತ್ನಿಸಿದವನನ್ನು ಸುಮಾರು 15 ಕಿಲೋ ಮೀಟರ್ ವರೆಗೂ ಕೂಡ ಬೆನ್ನಟ್ಟಿದ ಲೋಕ ಅಧಿಕಾರಿಗಳು ಸಿನಿಮಾ ಸ್ಟೈಲಲ್ಲಿ ಚೇಸ್ ಮಾಡಿ ಬಂಧಿಸಿ ತರುವಲ್ಲಿ ಯಶಸ್ವಿ ಆಗಿದ್ದಾರೆ.
ಈಗ ಆತ ಲೋಕಾಯುಕ್ತ ಕಸ್ಟಡಿಯಲ್ಲಿ ಇದ್ದಾನೆ. ಈ ಬಳಿಕ ತಾಲೂಕು ಆಫೀಸ್ ಬಳಿ ಸಭೆ ನಡೆಸಿ ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಕುರಿತು ಮಾತನಾಡಿದ ಲೋಕಾಯುಕ್ತ DYSP ಎಸ್.ಕೆ ಮಾಲತೇಶ್ ಅವರು ಸಾರ್ವಜನಿಕರ ಕೆಲಸ ಮಾಡಿಕೊಡಲು ಬೇಕೆಂದಲೇ ವಿಳಂಬ ಮಾಡುವ ಹಾಗೂ ಲಂಚ ಕೇಳುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು.
ನಮ್ಮ ಈ ಸಭೆಯ ಉದ್ದೇಶ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುವುದು ಮಾತ್ರವಲ್ಲ, ಸಾರ್ವಜನಿಕರಿಗೆ ಅರಿವು ಮೂಡಿಸುವುದು ಎಂದು ಹೇಳಿದ ಅವರು ಬೆಂಗಳೂರು ಮತ್ತಿತರ ದೊಡ್ಡ ನಗರಗಳಲ್ಲಿ ನಿಗದಿತ ನಮೂನೆಗಳಲ್ಲಿ ಸಾರ್ವಜನಿಕರು ನಮಗೆ ದೂರು ಸಲ್ಲಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಜನರಿಗೆ ತಿಳುವಳಿಕೆ ಇರುವುದಿಲ್ಲ, ಸಾರ್ವಜನಿಕರು ನೇರವಾಗಿ ಲೋಕಾಯುಕ್ತಕ್ಕೆ ಭೇಟಿ ನೀಡಿ ದೂರು ಸಲ್ಲಿಸುವ ಬದಲು ಆನ್‌ಲೈನ್ ಮೂಲಕವು ಕೂಡ ದೂರು ಸಲ್ಲಿಸಬಹುದಾಗಿದೆ.
ಕೆಲ ಅಧಿಕಾರಿಗಳು ಅನಾವಶ್ಯಕವಾಗಿ ಸಾರ್ವಜನಿಕ ಕೆಲಸ ಮಾಡಲು ಸತಾಯಿಸುತ್ತಾರೆ, ದಲ್ಲಾಳಿಗಳ ಮೂಲಕ ಹೋದರೆ ಅವರ ಕೆಲಸವಾಗುತ್ತದೆ ಆದರಿ ಈ ವ್ಯವಸ್ಥೆ ತಪ್ಪಬೇಕು. ಇದಾಗಬೇಕು ಎಂದರೆ ಸಾರ್ವಜನಿಕರು ನಮಗೆ ದೂರು ನೀಡಬೇಕು ಎಂದರು. ಮತ್ತು ಪ್ರತಿ ಸರ್ಕಾರಿ ಕಚೇರಿಗಳನ್ನು ಡಿಕ್ಲರೇಷನ್ ರಿಜಿಸ್ಟರ್ ಅನ್ನು ಸರಿಯಾಗಿ ಮೆಂಟೇನ್ ಮಾಡಬೇಕು ಸಂಬಂಧಪಟ್ಟವರು ವರ್ಗಾವಣೆಗೊಂಡರೆ ನಂತರ ಬಂದವರನ್ನೇ ಹೊಣೆಗಾರಿಕೆ ಮಾಡಲಾಗುತ್ತದೆ ಎಂದು ಸರ್ಕಾರಿ ಕಚೇರಿ ಸಿಬ್ಬಂದಿಗಳನ್ನು ಎಚ್ಚರಿಸಿದರು.