ಸೀರೆ ಉಟ್ಟ ಯುವತಿಯ ಅದ್ಭುತ ಬ್ಯಾಕ್ ಫ್ಲಿಪ್: ಯುವತಿಯ ಸ್ಟಂಟ್ ನೋಡಿ ದಂಗಾದ ನೆಟ್ಟಿಗರು! ನೋಡಿ ಈ Video

Entertainment/ಮನರಂಜನೆ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಅನೇಕರು ತಮ್ಮಲ್ಲಿನ ವಿಶೇಷವಾದ ಪ್ರತಿಭೆ ಅಥವಾ ವಿಶೇಷವಾದ ಕೌಶಲ್ಯ ಗಳಿಂದಾಗಿ ದೊಡ್ಡ ಹೆಸರನ್ನು ಮಾಡಿಕೊಂಡಿರುವುದು ಮಾತ್ರವಲ್ಲದೇ, ದೊಡ್ಡ ಪ್ರಮಾಣದಲ್ಲಿ ಹಿಂಬಾಲಕರನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಇವರು ಒಂದು ರೀತಿಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳಾಗಿ ಹೊರಹೊಮ್ಮಿದ್ದಾರೆ. ಯಾವುದಾದರೊಂದು ವಿಶಿಷ್ಠವಾದ ವೀಡಿಯೋ ಗಳನ್ನು ಹಂಚಿಕೊಳ್ಳುವುದರ ಮೂಲಕ ಜನರೊಂದಿಗೆ ಸಂಪರ್ಕದಲ್ಲಿ ಇದ್ದು ಜನ ಮೆಚ್ಚುಗೆ ಪಡೆಯುತ್ತಾರೆ. ಇಂತಹವರಲ್ಲಿ ಕೆಲವರಂತೂ ತಮ್ಮ ಸ್ಟಂಟ್ ಗಳ ವಿಡಿಯೋಗಳನ್ನು ಶೇರ್ ಮಾಡುವ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಭಿನ್ನ ವಿಭಿನ್ನವಾದ ಸಾಹಸಗಳ ಸ್ವಂಟ್ ಮಾಡಿ ಅವುಗಳ ವಿಡಿಯೋಗಳನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಗಳಂತಹ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಹಂಚಿಕೊಳ್ಳುತ್ತಾರೆ.

ಇವರು ಹಂಚಿಕೊಳ್ಳುವ ವಿಡಿಯೋಗಳಿಗೆ ಕೂಡ ಬೇಡಿಕೆ ಇದ್ದು, ಈ ವಿಡಿಯೋಗಳು ಶೇರ್ ಆದ ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲೆಡೆ ಸದ್ದು ಮಾಡುತ್ತವೆ. ಹೀಗೆ ಸ್ಟಂಟ್ ಗಳ ಮೂಲಕವೇ ಮೀಡಿಯಾಗಳಲ್ಲಿ ಜನಪ್ರಿಯತೆ ಪಡೆದಿರುವವರಲ್ಲಿ ಮಿಲಿ ಸರ್ಕಾರ್ ಎನ್ನುವ ಯುವತಿ ಕೂಡ ಸೇರಿಕೊಂಡಿದ್ದಾಳೆ. ಈಕೆಗೆ ಇನ್ಸ್ಟಾಗ್ರಾಂ ನಲ್ಲಿ 14000 ದಾಟಿದ ಹಿಂಬಾಲಕರು ಇದ್ದಾರೆ.

ಅಲ್ಲದೆ ಈಕೆ ಶೇರ್ ಮಾಡಿರುವ ವೀಡಿಯೋಗಳಿಗೆ ಕೂಡಾ ಸಾವಿರಗಟ್ಟಲೆ , ಲಕ್ಷಗಟ್ಟಲೆ ವೀಕ್ಷಣೆಗಳು ದಕ್ಕಿವೆ. ಇನ್ನು ಈಕೆಯ ವಿಡಿಯೋಗಳಲ್ಲಿನ ವಿಶೇಷತೆ ಏನು? ಎನ್ನುವುದಾದರೆ, ವೈವಿಧ್ಯಮಯವಾದ ಫ್ಲಿಪ್ ಗಳನ್ನು ಹೊಡೆಯುವುದು. ಹೌದು ಬಹಳ ಚಾಕಚಕ್ಯವಾಗಿ ಸ್ಟಂಟ್ ಮಾಡುವುದರಲ್ಲಿ ಮಿಲಿ ನಿಸ್ಸೀಮಳು.‌ ಆಕೆಯ ಇನ್ಸ್ಟಾಗ್ರಾಂ ಖಾತೆಯಲ್ಲಿ ಈಗಾಗಲೇ ಸಾಕಷ್ಟು ವಿಧದ ಫ್ಲಿಪ್ ಮಾಡಿರುವ ಸ್ಟಂಟ್ ವೀಡಿಯೋಗಳನ್ನು ನೋಡಬಹುದು.

ಸಾಮಾನ್ಯವಾಗಿ ಫ್ಲಿಪ್ ಮಾಡಲು ಅಥವಾ ಇನ್ಯಾವುದೇ ಸ್ಟಂಟ್ ಮಾಡಲು ಹೆಣ್ಣು ಮಕ್ಕಳು ಧರಿಸುವ ವಸ್ತ್ರ ಕೂಡ ಅದಕ್ಕೆ ತಕ್ಕಂತೆ ಇರಬೇಕು, ಇಲ್ಲದೇ ಹೋದರೆ ಅದು ಕ ಷ್ಟವಾಗುತ್ತದೆ. ಅದರಲ್ಲೂ ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆಯಾದ ಸೀರೆ ಉಟ್ಟುಕೊಂಡು ಸ್ಟಂಟ್ ಗಳನ್ನು ಮಾಡುವುದು ಎಂದರೆ ಅನೇಕರು ಅಯ್ಯೋ ಅದು ಸಾಧ್ಯವಿಲ್ಲ ಬಿಡಿ ಎನ್ನುತ್ತಾರೆ. ಆದರೆ ಈಗ ಮಿಲಿ ಸರ್ಕಾರ್ ಅಂತಹುದೇ ಒಂದು ಪ್ರಯತ್ನವನ್ನು ಬಹಳ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾಳೆ. ಆಕೆ ಈ ಹೊಸ ಬ್ಯಾಕ್ ಫ್ಲಿಪ್ ಹೊಡೆದಿರುವ ವೀಡಿಯೋ ವೈರಲ್ ಆಗುತ್ತಾ ಸಾಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಮಿಲಿ ಫ್ಲಿಪ್ ಹೊಡೆಯುವ ಸ್ಟಂಟ್ ಅನ್ನು ಈ ಬಾರಿ ಸೀರೆ ಉಟ್ಟು ಮಾಡಿರುವುದೇ ವಿಶೇಷ. ವೀಡಿಯೋ ನೋಡಿದಾಗ ಆಕೆ ಸೀರೆಯುಟ್ಟು ಬ್ಯಾಕ್ ಫ್ಲಿಪ್ ಹೊಡೆಯುವುದನ್ನು ನಾವು ನೋಡಬಹುದು. ಆಕೆ ಎಷ್ಟು ಚೆನ್ನಾಗಿ ಸ್ಟಂಟ್ ಮಾಡುತ್ತಾಳೆ ಎಂದರೆ ಸೀರೆ ಉಟ್ಟು ಸ್ಟಂಟ್ ಮಾಡುವುದು ಕಷ್ಟ ಎನ್ನುವವರಿಗೆ ಅಭ್ಯಾಸ ಮಾಡಿದರೆ ಅದು ಕೂಡಾ ಕಷ್ಟವೇನಲ್ಲ ಎಂಬುದನ್ನು ತೋರಿಸಿದ್ದಾಳೆ. ಆಕೆ ಎಷ್ಟು ಸರಾಗವಾಗಿ ಬ್ಯಾಕ್ ಫ್ಲಿಪ್ ಹೊಡೆಯುವಳೆಂದರೆ ಸೀರೆ ಉಟ್ಟು ಅಂತಹ ಸಾಹಸ ಮಾಡುವುದು ಆಕೆಗೆ ಕಷ್ಟವೇ ಅಲ್ಲವೇನೋ ಎನ್ನುವಂತೆ ಕಾಣುತ್ತದೆ. ಮಿಲಿ ಈ ಹಿಂದೆ ಕೂಡಾ ದೋಣಿಯ ಮೇಲೆ, ರಸ್ತೆಗಳಲ್ಲಿ ಹೀಗೆ ಹಲವು ಕಡೆ ಸ್ಟಂಟ್ ಗಳನ್ನು ಮಾಡಿದ್ದಾಳೆ.

ಮಿಲಿ ಸೀರೆಯುಟ್ಟು ಬ್ಯಾಕ್ ಫ್ಲಿಪ್ ಮಾಡಿರುವ ಈ ವೀಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಸುಮಾರು 700 ಕ್ಕಿಂತ ಅಧಿಕ ಮಂದಿ ಈಕೆಯ ಸ್ಟಂಟ್ ನೋಡಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಎಲ್ಲರೂ ಕೂಡಾ ಮಿಲಿಯ ಕೌಶಲ್ಯ ಮೆಚ್ಚಿದ್ದಾರೆ. ಒಂದಿಬ್ಬರು ಇವರು ನಮ್ಮ ಹೆಣ್ಣು ಮಕ್ಕಳು, ಇವರಿಗೆ ಒಲಂಪಿಕ್ಸ್ ಗೆ ಹೋಗುವ ಸಾಮರ್ಥ್ಯ ಇದೆ ಆದರೆ ಸರಿಯಾದ ಅವಕಾಶಗಳು ಹಾಗೂ ಆರ್ಥಿಕ ಸಾಮರ್ಥ್ಯ ಇಲ್ಲವಷ್ಟೇ ಎಂದು ಬೇಸರವನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ.

 

View this post on Instagram

 

A post shared by Mili Sarkar (@milisarkar72)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.