ಹಿಂದೂಗಳ ದಾರ್ಮಿಕ ಕಟ್ಟೆಯಲ್ಲಿ ಮು.ಸ್ಲಿಮರ ಧ್ವಜ ಪ್ರತ್ಯಕ್ಷ,ರೊಚ್ಚಿಗೆದ್ದ ಪೋಲಿಸ್‌ ಅಧಿಕಾರಿ ಮಾಡಿದ್ದೇನು ಗೊತ್ತಾ

ರಾಜ್ಯದ ಅಲ್ಲಲ್ಲಿ ಕಿಡಿಗೇಡಿಗಳಿಂದ ಅಶಾಂತಿಯ ವಾತಾವರಣ ಸೃಷ್ಟಿಸಲು ವಿವಿಧ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೇ ವೇಳೆ ಸರಕಾರ ಇಂತಹ ಕೃತ್ಯಗಳನ್ನು ಶತಾಯ ಗತಾಯ ಮಟ್ಟ ಹಾಕಲು ಪ್ರಯತ್ನಿಸುತ್ತಿದೆ.

ಆದರೆ ಮೂಡುಬಿದಿರೆಯ ಪುಚ್ಚೆ ಮೊಗರು ಎಂಬಲ್ಲಿ ಕಿಡಿಗೇಡಿಗಳ ಶಾಂತಿ ಕದಡುವ ಯತ್ನವನ್ನ ತಡೆಯುವ ಬಗ್ಗೆ ಸ್ಥಳೀಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಪೊಲೀಸ್‌ ಅಧಿಕಾರಿಯೊಬ್ಬರು ಅಧಿಕಾರಿಯನ್ನೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಪುಚ್ಚೆ ಮೊಗರು ಎಂಬಲ್ಲಿ ಶಾಂತಿ ದೂತರಿಂದ ಹಿಂದೂಗಳ ಧಾರ್ಮಿಕ ಕಟ್ಟೆಯಲ್ಲಿ ಹಸಿರು ಬಣ್ಣದ ಧ್ವಜ ಹಾಕಿದ್ದನ್ನು ಪ್ರಶ್ನಿಸದ ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮೂಡಬಿದಿರೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಎಂಬ ಶೀರ್ಷಿಕೆಯಲ್ಲಿ ಈ ವೀಡಿಯೋ ಹರಿದಾಡುತ್ತಿದೆ. ಹೊಸಬೆಟ್ಟು ಪಿಡಿಓ ಶೇಖರ್ ಅದನ್ನು ತೆರವು ಮಾಡದೇ ಉದ್ಧಟತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.

ಅದಕ್ಕೆ ಪಿಡಿಓ ವಿರುದ್ಧ ಇನ್ಸ್‌ಪೆಕ್ಟರ್ ಸಂದೇಶ್ ಕಿಡಿ ಕಾಡಿದ್ದಾರೆ. ಇದರ ಮೇಲೆ‌ ಬಾವುಟ ಹಾಕಲಿಕ್ಕೆ ಪರ್ಮಿಶನ್ ತೆಗೊಂಡಿದ್ದಾರಾ? ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನ್ ಮಾಡ್ತಾ ಇದ್ದೀಯಾ? ಅವರು ಪರ್ಮಿಷನ್ ತೆಗೊಂಡಿಲ್ಲ ಅಂದ್ರೆ ಪೊಲೀಸ್ ಕಂಪ್ಲೆಟ್ ಕೊಡಬೇಕು. ಮೊದಲು ಇವನನ್ನೇ ಆರೋಪಿ‌ ಮಾಡಬೇಕು.

ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ. ಸಂಬಂಧ ಇಲ್ಲ ಅಂತ ಹೇಳೋ ನೀನ್ಯಾಕೆ ಪಿಡಿಓ ಆಗಿದ್ದಿ ಎಂದು ಏಕವಚನದಲ್ಲೇ ಇನ್ಸ್ಪೆಕ್ಟರ್ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ಬಾವುಟವನ್ನು ತೆರವು ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಸಮಯ ಪ್ರಜ್ಞೆಯಿಂದ ಸಂಘರ್ಷವೊಂದು ತಪ್ಪಿದೆ ಅನ್ನೋ ಮಾತುಗಳು ಕೇಳಿಬಂದಿವೆ.

You might also like

Comments are closed.