ಈ ಪಂಚ ಗುಣಗಳನ್ನು ಹೊಂದಿರುವ ಮಹಿಳೆಯನ್ನು ಮದುವೆ ಆದ್ರೆ ಅದೃಷ್ಟವೇ ನಿಮ್ಮ ಜೀವನಕ್ಕೆ ಬಂದಂತೆ

HEALTH/ಆರೋಗ್ಯ

ಚಾಣಕ್ಯ ನಮ್ಮ ಭಾರತೀಯ ಇತಿಹಾಸದ ಅತ್ಯಂತ ಚಾಣಾಕ್ಷ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು. ಇನ್ನು ಆತ ತನ್ನ ಪುಸ್ತಕದಲ್ಲಿ ಈ ಐದು ಗುಣಗಳಿರುವ ಮಹಿಳೆಯನ್ನು ಮದುವೆಯಾದರೆ ಗಣಿತವಾಗಿ ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಿ ಅದೃಷ್ಟವನ್ನು ಪಡೆಯಲಿದ್ದೀರಿ ಎಂಬುದಾಗಿ ಉಲ್ಲೇಖಿಸಿದ್ದಾನೆ. ಹಾಗಿದ್ದರೆ ಆ ಐದು ಗುಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಆ ಮಹಿಳೆ ಸದ್ಗುಣ ಶೀಲೆ ಆಗಿರಬೇಕು. ಆಕೆ ಸದ್ಗುಣಶೀಲೇ ಆಗಿರದೆ ಇದ್ದರೆ ಖಂಡಿತವಾಗಿ ಕಷ್ಟದ ಸಂದರ್ಭದಲ್ಲಿ ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹೀಗಾಗಿ ಸುಂದರ ಮಹಿಳೆಯ ಹಿಂದೆ ಓಡುವುದಕ್ಕಿಂತ ಹೆಚ್ಚಾಗಿ ಇಂತಹ ಸದ್ಗುಣಶೀಲ ಮಹಿಳೆಯನ್ನು ನಿಮ್ಮ ಜೀವನದಲ್ಲಿ ನಿಮ್ಮವಳನ್ನಾಗಿಸಲು ಪ್ರಯತ್ನಪಡಿ.

ಎರಡನೇದಾಗಿ ಪ್ರಮುಖವಾಗಿ ಧರ್ಮ ಹಾಗೂ ಕರ್ಮಗಳ ಮೇಲೆ ನಂಬಿಕೆ ಇಡುವ ಮಹಿಳೆಯನ್ನು ಮದುವೆಯಾಗಬೇಕು. ಯಾಕೆಂದರೆ ಆ ಮಹಿಳೆ ಒಬ್ಬ ತಾಯಿಯಾಗಿ ತಾನು ಕಲಿತುಕೊಂಡಿರುವ ಹಾಗೂ ತಾನು ಇಷ್ಟ ಪಡುವ ವಿಷಯಗಳನ್ನೇ ತನ್ನ ಮಕ್ಕಳಿಗೆ ಹೇಳಿಕೊಡುತ್ತಾಳೆ. ಹೀಗಾಗಿ ಆಕೆ ಧಾರ್ಮಿಕವಾಗಿ ಕನೆಕ್ಟ್ ಆಗಿದ್ದರೆ ಮಕ್ಕಳು ಕೂಡ ಆಕೆಯ ರೀತಿಯಲ್ಲಿಯೇ ಧಾರ್ಮಿಕವಾಗಿ ಸುಸಂಸ್ಕೃತರಾಗುತ್ತಾರೆ.

ಇನ್ನು ಮೂರನೇಯದಾಗಿ ಪ್ರಮುಖವಾಗಿ ಗೌರವಯುತವಾಗಿ ಹಾಗೂ ಸಮಾಜದಲ್ಲಿ ಘನತೆಯಿಂದ ಬಾಳುವ ಹೆಣ್ಣುಮಗಳನ್ನು ಮದುವೆಯಾದರೆ ಆಕೆ ತನ್ನ ಗಂಡ ತಲೆತಗ್ಗಿಸುವ ಕೆಲಸವನ್ನು ಯಾವತ್ತೂ ಕೂಡ ಮಾಡಲು ಹೋಗುವುದಿಲ್ಲ.

ನಾಲ್ಕನೇದಾಗಿ ಕೋಪವನ್ನು ನಿಯಂತ್ರಣ ಮಾಡಬಲ್ಲಂತಹ ಹೆಣ್ಣುಮಗಳು ಮದುವೆಗೆ ಯೋಗ್ಯಳು. ಕೋಪ ಎನ್ನುವುದು ಮನುಷ್ಯನ ನಿಜವಾದ ಶತ್ರು ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಹೀಗಾಗಿ ಕೋಪವನ್ನು ಕಂಟ್ರೋಲ್ ಮಾಡುವ ಹೆಣ್ಣು ಮಗಳು ಮದುವೆಗೆ ಅತ್ಯಂತ ಅರ್ಹಳು ಎಂದು ಹೇಳಬಹುದು.

ಪ್ರಮುಖವಾಗಿ ಹಾಗೂ ಕೊನೆಯದಾಗಿ ನೀವು ಮದುವೆಯಾಗುವ ಹೆಣ್ಣಿನ ಸಂಪೂರ್ಣ ಒಪ್ಪಿಗೆ ಇದ್ದರೆ ಮಾತ್ರ ಆಕೆಯನ್ನು ನೀವು ಮದುವೆಯಾಗಿ. ಆಕೆಯ ಒಪ್ಪಿಗೆ ಇಲ್ಲದೆ ಮದುವೆಯಾಗಿ ನಂತರ ಅವಳ ಹಾಗೂ ನಿಮ್ಮ ಜೀವನ ಎರಡೂ ಕೂಡ ನರಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಮಹಿಳೆಯಲ್ಲಿ ಆ ಗುಣಗಳು ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನಂತರವೇ ಮದುವೆಯಾಗಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...