ಅಪಾಯ ಎನ್ನುವುದು ಯಾವಾಗ? ಎಲ್ಲಿಂದ? ಹೇಗೆ? ಬಬರಹುದು ಎಂಬುದನ್ನು ಯಾರೂ ಕೂಡಾ ಊಹೆ ಮಾಡಲು ಸಾಧ್ಯವಿಲ್ಲ. ಸಾಧ್ಯವಾಗುವುದಿದ್ದರೆ ಎಲ್ಲರೂ ಕೂಡಾ ಯಾವುದೇ ಅಪಾಯಕ್ಕೂ ಕೂಡಾ ಸಿಲುಕುವ ಸಂಭವವೇ ಇರುತ್ತಿರಲಿಲ್ಲ. ಆದರೆ ಅಂತಹ ಅವಕಾಶಗಳು ನಮಗಿಲ್ಲ ಎನ್ನುವುದು ವಾಸ್ತವ. ಆದರೆ ಅಪಾಯ ಎದುರಾದರೆ ಅದನ್ನು ಹೇಗೆ ಎದುರಿಸಬೇಕು, ಹೇಗೆ ಪರಸ್ಥಿತಿಯನ್ನು ನಿಭಾಯಿಸಬೇಕು ಎಂಬುದು ಕೂಡಾ ತಿಳಿಯಬೇಕಾದುದು ಅನಿವಾರ್ಯವಾಗಿದೆ. ವಿಪರ್ಯಾಸವೆಂದರೆ ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ ಅನೇಕರಿಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿ ಅಪಾಯಕ್ಕೆ ಸಿಲುಕಿಕೊಂಡು ನಷ್ಟ ಅನುಭವಿಸುತ್ತಾರೆ ಅಥವಾ ಕೆಲವು ಸಂದರ್ಭಗಳಲ್ಲಿ ಪ್ರಾಣಾಪಾಯವನ್ನು ಎದುರಿಸುವ ಪರಿಸ್ಥಿತಿ ಕೂಡಾ ಅವರಿಗೆ ಎದುರಾಗಿ ಬಿಡುತ್ತದೆ.
ಆದರೆ ಕೆಲವೊಮ್ಮೆ ಅಪಾಯ ಎದುರಾದಾಗ ಕೆಲವರ ಸಮಯೋಚಿತ ವರ್ತನೆ ಅಥವಾ ತೆಗೆದುಕೊಳ್ಳುವ ತ್ವರಿತವಾದ ನಿರ್ಧಾರಗಳಿಂದ ಬಹು ದೊಡ್ಡ ಸಮಸ್ಯೆಗಳು ಅಥವಾ ಅಪಾಯಗಳನ್ನು ತಡೆಯಲು ಸಾಧ್ಯವಾಗುತ್ತದೆ. ಅಂತಹ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಾಗ ಜನ ಕೂಡಾ ಅದನ್ನು ನೋಡಿ ಎಂತಹ ಸಮಯ ಪ್ರಜ್ಞೆ ಎಂದು ಹೊಗಳುವುದನ್ನು ಆ ವೀಡಿಯೋಗಳನ್ನು ಶೇರ್ ಮಾಡುವುದನ್ನು ಕೂಡಾ ನಾವು ಗಮನಿಸಬಹುದು. ಇಂತಹ ವೀಡಿಯೋಗಳು ಬಹು ಬೇಗ ಎಲ್ಲರ ಗಮನವನ್ನು ಕೂಡಾ ಸೆಳೆಯುತ್ತವೆ.
ಇಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಪೆಟ್ರೋಲ್ ಬಂಕ್ ಒಂದರ ಬಳಿ ನಡೆದ ಭೀಕರ ಸನ್ನಿವೇಶವನ್ನು ನಾವು ಗಮನಿಸಬಹುದು. ಬೈಕ್ ನಲ್ಲಿ ಬಂದಿರುವ ವ್ಯಕ್ತಿಗಳಿಬ್ಬರು ಬೈಕ್ ಮೇಲೆ ಕುಳಿತಿದ್ದಾರೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ವ್ಯಕ್ತಿ ಪೆಟ್ರೋಲ್ ಹಾಕುತ್ತಿದ್ದಾರೆ. ಆಗ ಅನಿರೀಕ್ಷಿತ ಅವಘಡ ಎನ್ನುವ ಹಾಗೆ ಬೆಂಕಿ ಹೊತ್ತಿ ಕೊಂಡಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಭಯದಿಂದ ಬೈಕ್ ಮೇಲೆ ಇದ್ದವರು ಅದನ್ನು ಅಲ್ಲೇ ಬಿಟ್ಟು ದೂರ ಓಡಿದ್ದಾರೆ. ಪೆಟ್ರೋಲ್ ಹಾಕುತ್ತಿದ್ದ ವ್ಯಕ್ತಿ ಕೂಡಾ ಅದನ್ನು ಅಲ್ಲೇ ಬಿಟ್ಟು ದೂರ ಸರಿದು ಅದಕ್ಕೂ ಕೂಡಾ ಬೆಂಕಿ ಹೊತ್ತಿಕೊಂಡಿದೆ.
ಅದಕ್ಕೆ ಹೊತ್ತಿದ್ದ ಬೆಂಕಿಯನ್ನು ಆರಿಸಲು ಆತ ಪ್ರಯತ್ನವನ್ನು ಮಾಡಿದ್ದಾನೆ. ಆದರೆ ಆ ವೇಳೆಗೆ ಅಲ್ಲಿಯೇ ಇದ್ದ ಇಬ್ಬರು ಇತರೆ ಸಿಬ್ಬಂದಿ ಅಗ್ನಿಯನ್ನು ನಂದಿಸುವ ಉಪಕರಣವನ್ನು ಹೊತ್ತು ತಂದು ಅದನ್ನು ತಡಮಾಡದೇ ಅಲ್ಲಿ ಸಿಂಪಡಣೆ ಮಾಡಿದ್ದಾರೆ. ಅವರ ಆ ಕಾರ್ಯದಿಂದ ಆಗಬೇಕಿದ್ದ ದೊಡ್ಡ ಬೆಂಕಿಯ ಪ್ರಮಾದವು ತಪ್ಪಿಹೋಗಿದೆ. ಇಲ್ಲದೇ ಹೋಗಿದ್ದರೆ ಅಲ್ಲಿ ಆಗಬಹುದಾಗಿದ್ದ ಅನಾಹುತವನ್ನು ಯಾರಿಂದಲೂ ಕೂಡಾ ಊಹಿಸಲು ಕೂಡಾ ಅಸಾಧ್ಯ ಎನಿಸುವ ಹಾಗೆ ಇದೆ. ಆದರೆ ಸಮಯ ಪ್ರಜ್ಞೆ ಒಂದು ಅನಾಹುತವನ್ನು ತಪ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎನಿಸಿದೆ.
ಸುಮಾರು 56 ಲಕ್ಷಕ್ಕಿಂತ ಹೆಚ್ಚು ಜನರು ನೋಡಿರುವ ಈ ವೀಡಿಯೋಗೆ ಎರಡು ಸಾವಿರಕ್ಕಿಂತ ಅಧಿಕ ಜನರು ಪ್ರತಿಕ್ರಿಯೆ ನೀಡಿದ್ದು, ಬಹುತೇಕ ಎಲ್ಲರೂ ಕೂಡಾ ಅವರ ಕ್ವಿಕ್ ರಿಯಾಕ್ಷನ್ ಅಥವಾ ಬೇಗ ಬೆಂಕಿ ನಂದಿಸಿದ ಕೌಶಲ್ಯ ವನ್ನು ಮೆಚ್ಚಿದ್ದಾರೆ. ಕೆಲಸಕ್ಕೆ ತರಬೇತಿ ಎನ್ನುವುದು ಬಹಳ ಮುಖ್ಯವೆನ್ನುವುದು ಇದೇ ಕಾರಣದಿಂದ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಬೈಕ್ ಮೇಲಿದ್ದ ಹಿರಿಯ ವ್ಯಕ್ತಿಯನ್ನು ಅಪಾಯದಿಂದ ಪಾರು ಮಾಡಿದ್ದನ್ನು ಮೆಚ್ಚಿದ್ದಾರೆ. ಮತ್ತೊಬ್ಬರು ಬಹಳ ದೂರ ವಾಹನ ಡ್ರೈವ್ ಮಾಡಿ ತಕ್ಷಣವೇ ಪೆಟ್ರೋಲ್ ತುಂಬಿಸಲು ಹೋಗಬೇಡಿ ಎನ್ನುವ ಸಲಹೆಯನ್ನು ಕೂಡಾ ನೀಡಿದ್ದಾರೆ.