ನಮ್ಮ ಮನಸ್ಸಿನಲ್ಲಿ ಸಾಧನೆ ಮಾಡಬೇಕು ಎನ್ನುವ ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರೆ ಸಾಕು ಏನು ಬೇಕಾದರೂ ಸಾಧನೆ ಮಾಡಬಹುದು. ಅದಕ್ಕೆ ಬೇಕಾಗಿರುವುದು ಕಷ್ಟಪಟ್ಟು ದುಡಿಯುವುದು. ಅಷ್ಟೇ ಅಲ್ಲ ಕನಸು ಕಟ್ಟುದಲ್ಲ ನನಸು ಮಾಡಿಕೊಳ್ಳುವ ಛಲ ಇರಬೇಕು.ಕನಸು ಕಾಣಬೇಕು ಅದರ ಬಗ್ಗೆ ಯಾವಾಗಲೂ ಸತತ ಪ್ರಯತ್ನ ಇರಬೇಕು.ನಮ್ಮಲ್ಲಿ 80% ರೈತರು ತಮ್ಮ ಮಕ್ಕಳು ರೈತರಾಗಲಿ ಒಂದು ಬಯಸುವುದಿಲ್ಲ.ಅದಕ್ಕೆ ಕಾರಣ ವ್ಯವಸಾಯ ಅಂದರೆ ನಷ್ಟ, ಹಗಲಿರುಳು ಕಷ್ಟ ಎಷ್ಟೇ ಕಷ್ಟಪಟ್ಟರೂ ಕೈಗೆ ಕಾಸು ಬರುವುದಿಲ್ಲ.ಜೀವನ ಉತ್ತಮವಾಗಿರುವುದಿಲ್ಲ. ಇದೆಲ್ಲಾ ಕಾರಣಗಳಿಂದ ರೈತರು ತಮ್ಮ ಮಕ್ಕಳು ರೈತರು ಆಗುವುದಕ್ಕೆ ಬಯಸುವುದಿಲ್ಲ.
