fhakirappa

ಆತ್ಮಹತ್ಯೆಗೆ ಯತ್ನಿಸಿದ್ದ ಹಳ್ಳಿಮೇಷ್ಟ್ರು ಸಿನೆಮಾದಲ್ಲಿ ಕಪ್ಪೆರಾಯ ಪಾತ್ರಧಾರಿ ಫಕೀರಪ್ಪ ಜೀವನದಲ್ಲಿ ನಡೆದ ದುರ್ಘಟನೆ ಎಂತದ್ದು ಗೊತ್ತಾ?

CINEMA/ಸಿನಿಮಾ

ಸಿನಿರಂಗದ ಕಲಾವಿದರ ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಈ ಜೀವನ ಬೇರೆ, ಸಿನಿಮಾ ಜೀವನವೇ ಬೇರೆ ಆಗಿರುತ್ತದೆ. ನಿಜ ಜೀವನದಲ್ಲಿ ಕೆಲ ಕಲಾವಿದರು ಕಂಡಂತಹ ಕನಸುಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇನ್ನು ಕೆಲವರು ನಿಜ ಜೀವನದಲ್ಲಿ ಅಂದುಕೊಂಡ ಅವರ ಕನಸುಗಳನ್ನು ಈ ಜೀವನದಲ್ಲಿ ನನಸು ಮಾಡಿಕೊಂಡು ತುಂಬಾ ಖುಷಿಯಾಗಿ ಜೀವನ ನಡೆಸುತ್ತಾರೆ.

ಆಗಿರಲಿ ಜೀವನದಲ್ಲಿ ಸುಖ-ದುಃಖ ನೋವು-ನಲಿವು ಎಲ್ಲವೂ ಸಮನಾಗಿಯೇ ಎಲ್ಲರಿಗೂ ದೊರಕುತ್ತವೆ.. ಕೆಲವರು ದೇಹದಲ್ಲಿ ಎಲ್ಲಾ ಭಾಗಗಳು ಸರಿಯಾಗಿದ್ದರೂ ಕೂಡ ಕೆಲಸ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಅಂತಹವರು ಪ್ರಪಂಚದಲ್ಲಿ ತುಂಬಾ ಜನರು ಇದ್ದಾರೆ ಎಂದು ಹೇಳಬಹುದು. ಆದರೆ ಕೆಲವರು ತಮ್ಮ ದೇಹದಲ್ಲಿ ಕೆಲ ನೂನ್ಯತೆಗಳು ಇದ್ದರೂ ಕೂಡ ಅವುಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಂಡು ತಮ್ಮ ಜೀವನದಲ್ಲಿ ಮುಂದೆ ಬಂದಿದ್ದ ಉದಾಹರಣೆಗಳು ಕೂಡ ತುಂಬ ಇವೆ.

ಕೆಲವರು ತಮಗೆ ನ್ಯೂನ್ಯತೆಗಳು ಇದೆ ಎಂದು ಯಾವಾಗಲೂ ಯೋಚಿಸುತ್ತಾ ಜೀವನದಲ್ಲಿ ಏನೂ ಮಾಡದೆ ಕುಗ್ಗಿ ಹೋಗುತ್ತಿರುತ್ತಾರೆ. ಕಪ್ಪೆರಾಯ ಪಾತ್ರ ನಿರ್ವಹಿಸಿದ್ದ ವ್ಯಕ್ತಿಯ ನಿಜವಾದ ಹೆಸರು ಫಕೀರಪ್ಪ ದೊಡ್ಮನಿ. ಇವರು ಮೂಲತಃ ಹಾವೇರಿ ಜಿಲ್ಲೆಯವರು. ಹಾವೇರಿ ತಾಲ್ಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮಕ್ಕೆ ಸೇರಿದ ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದರು ಫಕೀರಪ್ಪ ದೊಡ್ಮನಿ. ಇವರ ಎತ್ತರ 2.5 ಅಡಿ ಮಾತ್ರವಾಗಿತ್ತು. ಇದರಿಂದಾಗಿ ಆದ ಅವಮಾನ ತಡೆಯದೆ, ಇದರಿಂದ ಇವರು ಆತ್ಮಹ@ ಮಾಡಿಕೊಳ್ಳಲು ಯತ್ನಿಸಿದರು.

ಆದರೆ ತಮ್ಮ ನ್ಯೂನ್ಯತೆಗಳನ್ನೇ ಸುವರ್ಣ ಅವಕಾಶ ಎಂದು ಅಂದುಕೊಂಡು ಸಿನಿಮಾಗಳಲ್ಲಿ ಹಾಸ್ಯದ ಪಾತ್ರಗಳನ್ನು ಹೆಚ್ಚಾಗಿ ಮಾಡಿದರು. ಇಲ್ಲಿಯವರೆಗೂ ಹಳ್ಳಿಮೇಷ್ಟ್ರು,ನಮ್ಮೆಜಮಾನ್ರು ಸೇರಿದಂತೆ 16 ಸಿನಿಮಾಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ಕವಿತಾ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಇವರ ಮದುವೆಯ ಫೋಟೋವನ್ನು ನೀವು ಈ ಕೆಳಗೆ ಕಾಣಬಹುದು. ಸಧ್ಯಕ್ಕೆ ತಮ್ಮ ಊರಿನಲ್ಲೇ ಕೃಷಿ ಕೆಲಸ ಮಾಡುತ್ತಾ ಸಂತೋಷವಾಗಿದ್ದಾರೆ ಕಪ್ಪೆರಾಯ ಪಾತ್ರ ಮಾಡಿದ್ದ ಫಕೀರಪ್ಪ ದೊಡ್ಮನಿ.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...