father-anushree

ವಿದೇಶದಲ್ಲಿ ದುಡಿದು ಅನುಶ್ರೀಗಾಗಿ ಅವರ ತಂದೆ ಮಾಡಿದ ಆಸ್ತಿ ಎಷ್ಟು ಕೋಟಿ ಗೊತ್ತಾ?

Entertainment/ಮನರಂಜನೆ

ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀರವರ ಹೆಸರು ಸದ್ದು ಮಾಡುತ್ತಿರುತ್ತದೆ. ಅನುಶ್ರೀ ಜೀ ಕನ್ನಡ ವಾಹಿನಿಯಲ್ಲಿ ಆಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ಒಬ್ಬರು ತಾನು ಅನುಶ್ರೀಯ ತಂದೆ ಎಂದು ಹೇಳಿಕೊಂಡು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದಾರೆ. ಅನುಶ್ರೀರವರ ತಂದೆ ಕೊನೆಯ ಕಾಲದಲ್ಲಿ ಪಾರ್ಶ್ವ ವಾಯುವಿನಿಂದ ಬಳಲುತ್ತಿದ್ದು ತನ್ನ ಮಗಳು ಅನುಶ್ರೀಯನ್ನು ನೋಡಬೇಕು ಎಂದು ಆಸೆ ಪಡುತ್ತಿದ್ದಾರೆ.

ಕಳೆದ 22 ವರ್ಷಗಳ ಹಿಂದೆ ಕುಟುಂಬವನ್ನು ಬಿಟ್ಟು ಹೋಗಿದ್ದ ತಂದೆಗೆ ಮಕ್ಕಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಅನುಶ್ರೀ ಮೊನ್ನೆ ದಿನ ಸಂಪತ್ ಅವರ ಕೇರ್ ಟೇಕರ್ ಶಿವಲಿಂಗಯ್ಯ ರವರ ವಿರುದ್ಧ ಗುಡುಗಿದ್ದರು ಆದರೆ ಇದೀಗ ಅನುಶ್ರೀರವರ ಆಸ್ತಿಯ ಬಗ್ಗೆ ಸುದ್ದಿ ಎದ್ದಿದ್ದು ಅನುಶ್ರೀ ತನ್ನ ವೃತ್ತಿ ಜೀವನದಲ್ಲಿ ಎಷ್ಟು ಆಸ್ತಿಯನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ ಅನುಶ್ರೀ ತಂದೆ ಸಂಪತ್ ಮಕ್ಕಳಿಗಾಗಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ವೈರಲಾಗುತ್ತಿದೆ.

ನಾನು ಅನುಶ್ರೀ ತಂದೆಯಂತಿರುವ ಸಂಪತ್ ಎಂದು ಇದೀಗ ಅನುಶ್ರೀ ತಂದೆ ಎಂದು ಹೇಳಿಕೊಂಡು ಬಂದಿರುವ ವ್ಯಕ್ತಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ಅವರ ಹೆಸರಿನಲ್ಲಿ ಈಗಲೂ ಸಹ ಸಾಕಷ್ಟು ಆಸ್ತಿ ಇದೆ ಆ ಎಲ್ಲಾ ಆಸ್ತಿಯೂ ನನ್ನ ಮಕ್ಕಳಿಗೆ ಸೇರುತ್ತದೆ ಎಂದು ಹೇಳುತ್ತಿದ್ದಾರೆ.

ಅನುಶ್ರೀಯೂ ಸಹ ತಮ್ಮ ನಿರೂಪಣ ವೃತ್ತಿ ಹಾಗೂ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸೈಟ್ ಒಂದನ್ನು ಖರೀದಿಸಿದ್ದಾರೆ ಬೆಂಗಳೂರಿನಲ್ಲಿ ಫಾರ್ಮ್ ಹೌಸ್, ಬೆಳ್ಳಿ ಮತ್ತು ಚಿನ್ನ ಹೀಗೆ ಸುಮಾರು 10 ಕೋಟಿಯಷ್ಟು ಆಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅನುಶ್ರೀ ತನ್ನ ತಂದೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

 

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.