ಒಂದು ಮನೆಯಲ್ಲಿ ಅತ್ತೆ ಮತ್ತು ಸೊಸೆ ತುಂಬ ಪ್ರೀ-ತಿಯಿಂದ ಜೀವನ ನಡೆಸುತ್ತಿದ್ದರು. ಒಂದು ದಿನ ಅವರ ಮನೆಯಲ್ಲಿ ನೆಂಟರು ಬಂದರು ಆ ಸಮಯದಲ್ಲಿ ಅತ್ತೆ ನೆಂಟರ ಜೊತೆ ಮಾತನಾಡುತ್ತಾ ಹೇಳಿದರು,
ಮಗಳು ಸಕ್ಕರೆ ಇದ್ದಂತೆ,
ಮತ್ತು
ಸೊಸೆ #ಉಪ್ಪು ಇದ್ದಂತೆ ,
ಇ ರೀತಿ ಮಾತನಾಡುತ್ತಾ ಇರುವಾಗ ಸೊಸೆಯು ಅತ್ತೆಯ ಮಾತುಗಳು ಕಿವಿಗೆ ಬಿದ್ದು ಬಿಟ್ಟಿತು. ಸೊಸೆಯು ಅತ್ತೆಗೆ ತುಂಬಾ ಪ್ರೀ-ತಿ ಮಾಡುತ್ತಿದ್ದಳು ಅತ್ತೆಗೆ ಯಾವುದೇ ಕೊರತೆಯನ್ನು ಮಾಡುವುದಿಲ್ಲವಾಗಿದ್ದಳು ತುಂಬಾ ಅನೋ-ನ್ಯತೆಯಿಂದ ಇರುತಿದ್ದಳು ಆದರೆ ಅತ್ತೆಯ ಈ ಮಾತುಗಳನ್ನು ಕೇಳಿ ಸೊಸೆಯು ತುಂಬಾ ದುಃಖಿಯಾದಳು, ಮತ್ತು ಸೊಸೆಯ ನಡುವಳಿಕೆಯಲ್ಲೂ ತುಂಬಾ ಬದಲಾವಣೆಗಳು ಆದುದನ್ನು ನೋಡಿದ ಅತ್ತೆ ಸೊಸೆಯನ್ನು ಸ್ವಲ್ಪ ದಿನದ ನಂತರ ಪ್ರೀತಿಯಿಂದ ಕರೆದು ಜೊತೆಯಲ್ಲಿ ಕುಳಿಸಿ ಕೇಳಿದಳು ನೀನು ಈಗ ತುಂಬಾ ಮೌನವಾಗಿ ಇರಲು ಕಾರಣವೇನು?
ಆಗ ಸೊಸೆಯು ಅಳುತ್ತಾ ಅಳುತ್ತಾ ಹೇಳಿದಳು ನೀವು ನಮ್ಮ ನೆಂ-ಟರೊಟ್ಟಿಗೆ ಮಾತನಾಡುವಾಗ ನಾನು ನಿಮ್ಮ ಮಾತುಗಳನ್ನು ಕೇಳಿದೇ, ಅತ್ತೆ ಅವರೊಟ್ಟಿಗೆ ಮಾತನಾಡಿದ ವಿಚಾರದ ಬಗ್ಗೆ ತಿಳಿಸು ಹೇಳಿದಳು.
ಅತ್ತೆ ನಗುತ್ತಾ ಮಗಳೇ ನೀನು ನನ್ನ ಮಾತಿನ ತಿರುಳನ್ನು ಅರಿತಿಲ್ಲ ಕಣೆ,ನೀನು ತಪ್ಪು ಅರ್ಥ ಮಾಡಿ ಕೊಂಡಿರುವೆ, ಆ ಮಾತಿನ ಅರ್ಥ ಏನೆಂದರೆ : ಮಗಳು ಎಲ್ಲಾ ಸಮಯದಲ್ಲೂ ಸಕ್ಕರೆಯಂತೆ ಸಿಹಿ ಸಿಹಿಯಾಗಿ ಇರುತ್ತಾಳೆ.ಸೊಸೆ ಉಪ್ಪಿನಂತೆ ಇರುತ್ತಾಳೆ ಅವಳ ಋಣವನ್ನು ತೀರಿಸಲು ಆಗುವುದಿಲ್ಲ, ಮತ್ತೆ ಉಪ್ಪು ಇಲ್ಲವೆಂದರೆ ಯಾವ ತಿನಿಸು ಸಹ ರುಚಿಕರ ಆಗಿರುವುದಿಲ್ಲ. ಮನೆಯ ಗೌರವ ಒಂದು ಸೊಸೆಯಿಂದಲೇ ಬರುತ್ತದೆ.ಹೌದು ಒಂದು ಹೆ-ಣ್ಣು ತನ್ನ ಗಂಡನ ಮನೆಗೆ ಕಾಲಿಟ್ಟಾಗ ಆ ಮನೆಯವರ ಜೀವನ ಸ್ವರ್ಗ ಮಾಡುವ ಅಥವಾ ನರ-ಕವನ್ನಾಗಿ ಮಾಡುವ ಒಂದು ಶಕ್ತಿ ಹೆಣ್ಣು ಹೊಂದಿದೆ.
ಸಂಜೆ ಮನೆ ತುಂಬಿಸಿಕೊಳ್ಳುವ ಸಂದರ್ಭ.ಹೊಸ್ತಿಲ ಪೂಜೆ ಮಾಡುತ್ತಿದ್ದ ನವ ಜೋಡಿಗಳು. ಸೊಸೆಯನ್ನೇ ಎದುರು ನೋಡುತ್ತ ,ದೀಪ ಹಿಡಿದು ನಿಂತ ಅತ್ತೆ.ಅತ್ತೆ ಸೊಸೆ ಮುಖ ನೋಡಿಕೊಂಡು ಸಂತಸದಿಂದ ಸಂಜ್ಞೆ ಮಾಡಿಕೊಂಡರು.ಸೇರು ಒದ್ದು ಒಳ ಬರುವಾಗಲೇ ಅತ್ತೆ ಮಾವ ತನ್ನ ತಂದೆ ತಾಯಿ ಎಂದು accept ಮಾಡಿಯಾಗಿತ್ತು . ಎಲ್ಲವನ್ನೂ ಅವರ ಆಸೆಯಂತೆ ಮಾಡುವ ಹಂಬಲ..ಅವರನ್ನು ತೃಪ್ತರನ್ನಾಗಿಸುವ ಹಪಹಪಿ ಸದಾ ಆಕೆಯನ್ನು ಆವರಿಸಿತ್ತು.ಎಲ್ಲವನ್ನೂ ಅವರ ಆಶಯದಂತೆ ಅವರ ಅಭಿಪ್ರಾಯವನ್ನು ಕೇಳಿ ಮುಂದುವರಿಯುವಾಕೆ. ಅತ್ತೆ ಮಾವರು ಕೂಡ ಕಾಳಜಿಯಿಂದ ಜವಾಬ್ದಾರಿ ಹೊತ್ತು ಕರ್ತವ್ಯವನ್ನು ನಿಭಾಯಿಸುವವರು.
ತಾಯಿಯ ಮೆನೊ ಪಾಸ್ ಸಮಯದಲ್ಲಿ ಅವಳ ಕಾಳಜಿ ಮಾಡಲಾಗಲಿಲ್ಲ.ಅತ್ತೆಯ ಜತೆ ತಾನು ಸದಾ ಮಾನಸಿಕವಾಗಿರಬೇಕು.ಅತ್ತೆಯ ಕಾಳಜಿ ಕರ್ತವ್ಯದಿಂದಲ್ಲ ಪ್ರೀತಿಯಿಂದ ಮಾಡಬೇಕು ಎಂಬ ಭಾವ ಆಕೆಯದು.ಸದಾ ಅತ್ತೆಗೆ ನೆರಳಾಗುವ ಪ್ರಯತ್ನ.
ಆಕೆ ಗರ್ಭಿಣಿ.ಮನೆಯಲ್ಲೇ ಇರುವಾಕೆ.ಅಷ್ಟೊ ಇಷ್ಟೋ ಅತ್ತೆಗೆ ಸಹಾಯ ಮಾಡುತ್ತಿದ್ದಳು.ಒಂದೊಮ್ಮೆ ಬಟ್ಟೆ ಕೊಳ್ಳುವ ಅನಿವಾರ್ಯತೆ ಬಂತು.ನಿನ್ನ ಆಯ್ಕೆಗಳು ಚೆನ್ನಾಗಿಲ್ಲ ನನ್ನ ಮಗಳ ಬಳಿ ಹೇಳುತ್ತೇನೆ ಇಬ್ಬರೂ ಹೋಗಿ ಎಂದದ್ದು ಆಕೆಯ ಅತ್ತೆಯೆ.ಆಗಲಿ ಎಂದು ತಲೆದೂಗಿದಳು.ಅದೇ ಸಮಯಕ್ಕೆ ಸಹೋದರ, ಗರ್ಭಿಣಿ ತಂಗಿಗೆ 2000 ರೂಗಳ ಸೀರೆ ನೀಡಿದ್ದನು.ಈ ಸೀರೆ ಚೆನ್ನಾಗಿಲ್ಲ ಅಂಗಡಿಯಲ್ಲಿ ಬದಲಾಯಿಸೋಣ ಎಂದು ಅತ್ತೆಯ ಒತ್ತಾಯ .ಮಣಿದು ಅತ್ತೆಯ ಆಯ್ಕೆಯ ಯಾವುದೋ ಒಂದು ಸೀರೆ ಮನೆಗೆ ತಂದಾಯ್ತು. ಅಗ್ಗದ್ದಲ್ಲ ಆದರೂ ಒಂದೇ ಭಾರಿಗೆ ಸೀರೆ ಪಿಸಿಯಿತು.ಆದರೂ ಅಣ್ಣನ ಉಡುಗೊರೆ ತವರ ನೆನಪಿಗಾಗಿ ಜತೆಯಲ್ಲೇ ಇಟ್ಟುಕೊಂಡಳು.
ದಿನ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವಾಗ ಕಿವಿಯ ಓಲೆಗಳ ಹರಳು ಕಪ್ಪಾಗುತ್ತವೆ ಬೇರೆ ಹಾಕಿಕೊ ಎಂದಾಯ್ತು ಬೇರೆ ಅಂತ ಇರೋದು ತಾಯಿ ಮನೆಯಲ್ಲಿ ಕೊಟ್ಟ ಜುಮ್ಕಿ.ದಿನ ಹಾಕಿದರೆ ಅದೂ ಹಾಳಾಗುತ್ತದೆ ಕಳಚಿ ಇಟ್ಟಳು .ಅಂದೊಮ್ಮೆ “ ನೀವು ಬಡವರೆಂದು ಗೊತ್ತಾಗಿದ್ದರೆ ನನ್ನ ಅತ್ತೆ ಒಪ್ಪುತ್ತಿರಲಿಲ್ಲ .ಆದರೆ ನಾವೆ ಅದನ್ನೆಲ್ಲ ಹೇಳಲಿಲ್ಲ ” ಎಂಬ ಮಾತನ್ನು ಅತ್ತೆಯಿಂದ ನಿರೀಕ್ಷಿಸಿರಲಿಲ್ಲ.ಹಿಂದೆಯೇ ಒಮ್ಮೆ ಆಕೆಯ ಪತಿ ನಿನ್ನ ತಂದೆ ಮದುವೆಯ ಬಾಕಿ ಕೊಡಬೇಕಿದೆ ಎಂದು ಹೇಳಿ ಬರೆ ಎಳೆದಾಗಿತ್ತು .ಬಡತನದ ಮನೆಯೊಳಗ ಹೆಣ್ಣು ಹು ಟ್ಟ ಬಾರದು ಎಂದು ಮನಸ್ಸು ಹಾಡತೊಡಗಿತು. ಗ ರ್ಭಿಣಿಯ ಮನಸ್ಸಿನಲ್ಲಿ ವಾಸಿ ಆಗದ ಗಾಸಿ.ಎಂದೆಂದೂ ಮಾಸದ ಕಹಿಯಾಗಿ ಉಳಿದೇ ಬಿಟ್ಟಿತು.ಅದೆಷ್ಟು ಕಾಳಜಿ ತೋರಿದರೂ ಕೇವಲ ಅದು ಕರ್ತವ್ಯ ಪ್ರಜ್ಞೆ ಅನಿಸತೊಡಗಿತ್ತು.
ಗ ರ್ಭಿಣಿಯರು ಸಾಮಾನ್ಯವಾಗಿ ಆಧ್ಯಾತ್ಮಿಕವಾಗಿ ತೊಡಗಿಕೊಳ್ಳುವುದು ಭಾರತೀಯರ ರೂಢಿ.ಅಂತೆಯೇ ಆಕೆ ಅದ್ಯಾವುದೋ ಚರಿತ್ರೆ ಓದುತ್ತಿದ್ದ ಸಂದರ್ಭ ಗಂಡನ ಕಣ್ಣಿಗೆ ಬಿತ್ತು.ನೀನು ನಮ್ಮ ಮನೆಯನ್ನೊಂದು ಆಶ್ರಮ ಮಾಡ್ಬಿಡು ಎಂದು ತಮಾಷೆಯಾಗಿ ನಕ್ಕ .ಅಷ್ಟರಲ್ಲೇ ಧಾವಿಸಿದ ಅತ್ತೆ ” ಹ ಇನ್ನಾರದ್ದೊ ಆಸ್ತಿ ಮನೆ ಸಿಕ್ಕರೆ ಆಶ್ರಮ ಕಟ್ಟುತ್ತಾಳೆ” ಎಂದದ್ದು ಆಕೆಗೆ ಹಾಸ್ಯ ಎನಿಸಲಿಲ್ಲ. ಬದಲಿಗೆ ಅತ್ತೆ ಮಾವ ದಂಪತಿಗಳು ಹೊರ ಹೋಗುವಾಗ ಅವರ ಕೋಣೆಗೆ ಬೀಗ ಜಡಿದು ಹೋಗುತ್ತಿದ್ದದ್ದು ತಾನು ಕಳ್ಳಿ ಇರಬಹುದು ಎಂಬ ಅನುಮಾನದಿಂದ ಎಂಬುದು ಖಾತ್ರಿ ಆಯ್ತು.ತನ್ನ ತಾಯಿ ತನ್ನನ್ನು ಶ್ರೀಮಂತರ ಮನೆಗೆ ಕೊಡಬಾರದು ಎಂದು ಸಣ್ಣಂದಿನಿಂದ ಬಡಬಡಿಸಿದ್ದು ಆಕೆಯ ಕಣ್ಣ ಮುಂದೆ ಸರಿಯಿತು.
ಹೆಣ್ಣಿನ ಮನಸ್ಸು ಹೆಣ್ಣಿನಷ್ಟೇ ಸೂಕ್ಷ್ಮ.ಅದರಲ್ಲೂ ಗ ರ್ಭಿಣಿಯಾದಾಗ ದೇ ಹ ಮಾತ್ರ immunity ಕಳೆದುಕೊಂಡಿರಲ್ಲ, ಮನಸ್ಸು ಕೂಡ.ಇವೆಲ್ಲ ಆಕೆಯನ್ನು ಒಂದು ದಿನ ಚಂಡಿಯನ್ನಾಗಿಸಬಹುದು ಆ ಅತ್ತೆ ಮಗಳನ್ನು ಕಳೆದುಕೊಂಡಳು.ಸೊಸೆ ತಾಯಿಯನ್ನು ಕಳೆದುಕೊಳ್ಳಲಿಲ್ಲ ಬದಲಾಗಿ ಅತ್ತೆಯನ್ನು ಕಂಡುಕೊಂಡಳು.