ವಂಶವೃಕ್ಷ ಪ್ರಮಾಣ ಪತ್ರ ಯಾವ ಕೆಲಸಕ್ಕೆ ಬೇಕಾಗುತ್ತೆ,ಇದರ ಉಪಯೋಗ ತಿಳಿದುಕೊಳ್ಳಿ.

ವಂಶಾವಳಿ ಪ್ರಮಾಣ ಪತ್ರ ಅಥವಾ ವಂಶವೃಕ್ಷ ಪ್ರಮಾಣ ಪತ್ರ ಅನೇಕ ಕೆಲಸಗಳಿಗೆ ಬೇಕಾಗುತ್ತದೆ. ವಂಶಾವಳಿ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳುವುದು ಉತ್ತಮ ಹಾಗಾದರೆ ವಂಶಾವಳಿ ಪ್ರಮಾಣ ಪತ್ರದಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸರ್ಕಾರಿ ನೌಕರರು ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಬಹುದು. ನೌಕರಿ ಪಡೆಯಲು ಮುಖ್ಯವಾಗಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ಕುಟುಂಬದಲ್ಲಿ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಗಳು ನಡೆಯುತ್ತಿದ್ದರೆ ವಿವಾದವನ್ನು ನ್ಯಾಯಾಲಯದ ಗಮನಕ್ಕೆ ತಂದಲ್ಲಿ ವಂಶಾವಳಿ ಪ್ರಮಾಣ ಪತ್ರ ಅವಶ್ಯವಾಗಿ ಬೇಕಾಗುತ್ತದೆ. ಜಮೀನಿನ ಮಾಲೀಕ ಮರಣ ಹೊಂದಿದಲ್ಲಿ ಅವನ ಉತ್ತರಾಧಿಕಾರಿಗಳಿಗೆ ಹಕ್ಕು ವರ್ಗಾವಣೆ ಮಾಡುವ ಸಮಯದಲ್ಲಿ ಪೌತಿಖಾತೆಯನ್ನು ತೆರೆಯಬೇಕು ಪೌತಿ ಖಾತೆಯನ್ನು ತೆರೆಯಲು ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.

ಕೆಲವು ಸಮಯದಲ್ಲಿ ಇನ್ಸೂರೆನ್ಸ್ ಕಂಪನಿಯಿಂದ ಹಣ ಕ್ಲೇಮ್ ಮಾಡಿಕೊಳ್ಳಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ವಂಶಾವಳಿ ಪ್ರಮಾಣ ಪತ್ರ ಮಾಡಿಸಬೇಕಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಸಾಲ ಪಡೆಯಲು ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕುಟುಂಬದ ಗುರುತಿಗಾಗಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ಪ್ರಕೃತಿ ವಿಕೋಪಗಳಾದ ಜಲಪ್ರಳಯ, ಭೂಕಂಪದ ಸಂದರ್ಭದಲ್ಲಿ ಮರಣ ಹೊಂದಿದಲ್ಲಿ ಡಿಎನ್ಎ ಟೆಸ್ಟ್ ಮಾಡುವ ಸಂದರ್ಭ ಒದಗಿ ಬಂದಾಗ ವಂಶಾವಳಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ. ಕುಟುಂಬದ ಆಸ್ತಿ ವಿಭಜನೆಯ ಸಂದರ್ಭದಲ್ಲಿ ವಂಶಾವಳಿ ಪ್ರಮಾಣ ಪತ್ರ ಕೆಲವೊಮ್ಮೆ ಬೇಕಾಗುತ್ತದೆ.

ಯಾವುದೆ ಒಂದು ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗ ನಾಮಿನಿ ಆಗಿ ಮನೆಯವರ ಹೆಸರನ್ನು ಕೊಟ್ಟಿರುತ್ತಾರೆ, ಕಾರ್ಮಿಕ ಮರಣ ಹೊಂದಿದಲ್ಲಿ ಸಂಸ್ಥೆಯಿಂದ ಸಿಗುವ ಅನುದಾನಗಳನ್ನು ಪಡೆಯಲು ವಂಶಾವಳಿ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ.

ಸರ್ಕಾರದ ಪೆನ್ಷನ್ ಯೋಜನೆಗಳಲ್ಲಿ ಸುಮಾರು ಜನರು ಹಣ ಹಾಕಿರುತ್ತಾರೆ. ಪೆನ್ಶನ್ ಮಾಡಿದ ವ್ಯಕ್ತಿ ಸತ್ತರೆ ಮನೆಯವರು ಹಣ ಪಡೆಯಲು ವಂಶಾವಳಿ ಪ್ರಮಾಣ ಪತ್ರವನ್ನು ಪಡೆಯಬೇಕು. ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ ವ್ಯಕ್ತಿ ಸತ್ತರೆ ನಾಮಿನಿ ಹೊಂದಿರುವ ಕುಟುಂಬದ ಸದಸ್ಯರು ಬ್ಯಾಂಕ್ ಅಕೌಂಟ್ ನಲ್ಲಿರುವ ಹಣವನ್ನು ಮತ್ತು ಬ್ಯಾಂಕ್ ಇನ್ಸೂರೆನ್ಸ್ ಕ್ಲೇಮ್ ಮಾಡಿಕೊಳ್ಳಬೇಕೆಂದರೆ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ.

ಒಟ್ಟು ಕುಟುಂಬದಲ್ಲಿ ಇದ್ದರೆ ಒಟ್ಟಿಗೆ ಸೈಟ್ ಅಥವಾ ಫ್ಲಾಟ್ ಗಳನ್ನು ಖರೀದಿಸಿದರೆ ನಂತರ ಕುಟುಂಬ ವಿಭಜನೆಯಾಗುವ ಸಂದರ್ಭ ಒದಗಿ ಬಂದರೆ ಅಂತಹ ಸಮಯದಲ್ಲಿ ವಂಶಾವಳಿ ಪ್ರಮಾಣ ಪತ್ರ ಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

You might also like

Comments are closed.