ಸ್ನೇಹಿತರೆ, ಮಂಗಳಮುಖಿಯರು ಸತ್ತಾಗ ಅವರ ಶವಯಾತ್ರೆಯನ್ನು ಯಾಕೆ ರಾತ್ರಿ ಹೊತ್ತು ಮಾಡ್ತಾರೆ? ಅಲ್ಲದೆ ಅವರನ್ನು ಯಾಕೆ ಯಾರಿಗೂ ತೋರಿಸಿಲ್ಲ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನಾವಿವತ್ತು ಕೊಡುತ್ತಿದ್ದೆವೆ. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರೆ ನಿಮ್ಮ ಸುತ್ತಮುತ್ತ ಯಾರಾದರೂ ತೀರಿ ಹೋದರೆ ನಿಮಗೆ ನಿಮಿಷಗಳಲ್ಲೇ ವಿಷಯ ಗೊತ್ತಾಗುತ್ತೆ,ಖ ನಿಮ್ಮ ಸ್ನೇಹಿತರು ಅಥವಾ ಅಕ್ಕಪಕ್ಕದವರು ನಿಮಗೆ ವಿಷ ಮುಟ್ಟಿಸುತ್ತಾರೆ.
ಆದರೆ ಈ ಮಂಗಳಮುಖಿಯರು ಮಾತ್ರ ಯಾರಾದರೂ ಅವರ ಸಮುದಾಯದಲ್ಲಿ ತೀರಿ ಹೋದಾಗ ಅವರ ಶವನ್ನು ಮುಚ್ಚಿಡುತ್ತಾರೆ ಯಾರಿಗೂ ಕೂಡ ತೋರಿಸುವುದಿಲ್ಲ..ಯಾಕೆ ಅನ್ನೋದಕ್ಕೆ ಕಾರಣಗಳು ಇಲ್ಲಿವೆ ನೋಡಿ.. ಓರ್ವ ಮಂಗಳಮುಖಿ ತೀರಿಹೋದಾಗ ಆ ಮಂಗಳಮುಖಿಯ ಸಮುದಾಯದವರು ಮಾತ್ರ ಭಾಗವಹಿಸುತ್ತಾರೆ. ಅಲ್ಲದೆ ಬೇರೆ ಸಮುದಾಯದ ಮಂಗಳಮುಖಿಯರು ಶವಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇನ್ನು ಈ ಶವಯಾತ್ರೆಯನ್ನು ಮಧ್ಯರಾತ್ರಿನೇ ಯಾಕೆ ಮಾಡ್ತಾರೆ ಅಂದ್ರೆ, ಮಂಗಳಮುಖಿಯ ಶವವನ್ನು ಬೇರೆ ಸಮುದಾಯದವರು ಗಂಡಾಗಲೀ ಅಥವಾ ಹೆಣ್ಣಾಗಲೀ ಯಾವುದೇ ಕಾರಣಕ್ಕೂ ಮಂಗಳಮುಖಿ ಅಂಶವನ್ನು ನೋಡಬಾರದು ಎಂಬುದೇ ಇದರ ಮುಖ್ಯ ಉದ್ದೇಶ.
ಇನ್ನು ಯಾರಾದರೂ ಶವಯಾತ್ರೆಯಲ್ಲಿ ಗಂಡು ಅಥವಾ ಹೆಣ್ಣು ಮಂಗಳಮುಖಿ ಯಶವನ್ನು ನೋಡಿದಾಗ ಅವರು ಮತ್ತೆ ಮುಂದಿನ ಜನ್ಮದಲ್ಲೂ ಕೂಡ ಮಂಗಳಮುಖಿಯಾಗಿ ಹುಟ್ಟುತ್ತಾರೆ ಎಂಬ ನಂಬಿಕೆ ಕೂಡ ಹೊಂದಿದ್ದಾರೆ. ಈ ಕಾರಣಗಳಿಗೋಸ್ಕರ ಮಂಗಳಮುಖಿಯರ ಶವವನ್ನು ಯಾರಿಗೂ ಕೂಡ ತೋರಿಸುವುದಿಲ್ಲ. ಇನ್ನು ಮಂಗಳಮುಖಿಯರು ಸತ್ತಾಗ ಕೂಡ ಅವರ ಸಮುದಾಯದಲ್ಲಿ ಯಾರು ಕೂಡ ಕಣ್ಣೀರು ಹಾಕುವುದಿಲ್ಲ. ಅವರ ಮನಸ್ಸಿನಲ್ಲಿ ಎಷ್ಟೇ ದೂರವಿದ್ದರೂ ಕೂಡ ಹೊರಗಡೆ ತೋರಿಸುವುದಿಲ್ಲ.
ಇನ್ನು ಹಿಂದೂ ಧರ್ಮದ ಮಂಗಳಮುಖಿಯರಲ್ಲಿ ಶವಯಾತ್ರೆಯಲ್ಲಿ ಶವಕ್ಕೆ ಚಪ್ಪಲಿಯಲ್ಲಿ ಹೊಡೆಯುವ ಪದ್ಧತಿ ಇದೆ. ಕಾರಣ ಏನೆಂದರೆ ಮತ್ತೆ ನೀನು ಯಾವತ್ತಿಗೂ ಕೂಡ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟ ಬೇಡ ಎಂದು ಹೇಳ್ತಾ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಮುಖ್ಯವಾಗಿ ಮಂಗಳಮುಖಿಯರು ಸತ್ತಾಗ ಯಾವುದೇ ಕಾರಣಕ್ಕೂ ಅವರನ್ನು ಸುಡುವುದಿಲ್ಲ ಬದಲಿಗೆ ಮಣ್ಣು ಮಾಡುತ್ತಾರೆ. ಇದಿಷ್ಟು ಮಂಗಳಮುಖಿಯರ ಬಗೆಗಿನ ಕೆಲವೊಂದಷ್ಟು ರೋಚಕವಾದ ಮಾಹಿತಿ.