ಕಡಿಮೆ ಬೆಲೆಯಲ್ಲಿ ದೊಡ್ಡ ಫ್ಯಾಮಿಲಿ ಕಾರು ಕೊಳ್ಳುವವರಿಗಾಗಿ ಇಲ್ಲಿದೆ ಜಬರ್ದಸ್ತ್ ಕಾರ್ : ಮಸ್ತ್ ಲುಕ್ ಮತ್ತು ಅದ್ಭುತ ಫೀಚರ್ಸ್ ನೊಂದಿಗೆ ಬರುತ್ತಿದೆ ಮಾರುತಿ ಎರ್ಟಿಗಾ 2023!

ಭಾರತದ ರಸ್ತೆಗಳನ್ನು ಆಳುತ್ತಿರುವ 7 ಸೀಟರ್ MPV ಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಹೊಸ ಫೇಸ್ಲಿಫ್ಟ್ ಮಾಡೆಲ್ ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ, ಅಕಸ್ಮಾತ್ ನೀವು ಹೊಸ ಫ್ಯಾಮಿಲಿ ಕಾರಿಗಾಗಿ ಹುಡುಕಾಟ ನಡೆಸಿದ್ದರೆ ಕಡಿಮೆ ಬೆಲೆ ಹಾಗೂ ಅದ್ಭುತ ಮೇಲೆಜ್ ಕೊಡುವ ಜಬರ್ದಸ್ತ್ ಲುಕ್ ಹಾಗೂ ಅದ್ಭುತ ಆಧುನಿಕ ಫೀಚರ್ಸ್ ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಎರ್ಟಿಗಾ ಒಂದು ಬೆಸ್ಟ್ ಆಪ್ಷನ್ ಆಗಿದೆ.

ಈ ಕಾರಿನ ವಿಶೇಷತೆ ಎಂದರೆ, ಶಕ್ತಿಶಾಲಿ ಎಂಜಿನ್ ನೊಂದಿಗೆ ಬರುವ ಈ ವಾಹನ ಆಲಾಯ್ ವೀಲ್ ಡ್ರೈವ್ ಆಪ್ಷನ್ ನೊಂದಿಗೆ ಲಗ್ಗೆ ಇಡುತ್ತಿದೆ, ಬನ್ನಿ ಹಾಗಾದರೆ ಈ ಕಡಿಮೆ ಬೆಲೆಯ ಅತ್ಯುತ್ತಮ ಕಾರಿನ ಫೀಚರ್ಸ್, ವಿಶೇಷತೆಗಳು, ಬೆಲೆ ಹಾಗೂ ಬಿಡುಗಡೆ ಮಾಡುವ ದಿನಾಂಕ ಇತ್ಯಾದಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ…

ಪವರ್ಫುಲ್ ಎಂಜಿನ್ : ಮಾರುತಿ ಎರ್ಟಿಗಾದ ಫೇಸ್ಲಿಫ್ಟ್ ವರ್ಷನ್ ನಲ್ಲಿ ಹೊಸ 1.5 ಲೀಟರ್ K15C ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ನಲ್ಲಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ನಂತಹ ಬದಲಾವಣೆ ಮಾಡಲಾಗಿದ್ದು, ಇದು ಒಂದು ಇಂಟಿಗ್ರೇಟೆಡ್ ಸ್ಟಾರ್ಟರ್ ಜೆನರೇಟರ್ ಮತ್ತು ಆಟೋ ಸ್ಟಾರ್ಟ್ ಸ್ಟಾಪ್ ಸಿಸ್ಟಮ್ ನೊಂದಿಗೆ ಬರುತ್ತಿದೆ. ಈ ಹೊಸ ಎರ್ಟಿಗಾದ CNG ವರ್ಷನ್ ಕೂಡ ಸಿಗಲಿದೆ.

2023 Maruti Ertiga To Get New Features - 360 Camera, Bigger Touchscreen

CNG ವೆರಿಯಂಟ್ ಸಧ್ಯ ಕೇವಲ VXi ವೆರಿಯಂಟ್ ನಲ್ಲಿ ಮಾತ್ರ ಲಭ್ಯವಿದೆ, ಆದರೆ ಇದೀಗ ಅಪ್ಡೇಟ್ ನೊಂದಿಗೆ ZXi ವೆರಿಯಂಟ್ ನಲ್ಲಿಯೂ ಸಹ CNG ವರ್ಷನ್ ಅನ್ನು ಕಂಪನಿ ಪರಿಚಯಿಸುತ್ತಿದೆ. ಈ ಹಿಂದಿನ ಮಾಧ್ಯಮ ವರದಿಗಳ ಪ್ರಕಾರ, ಹೊಸ 1.5 ಲೀಟರ್ K15C ಪೆಟ್ರೋಲ್ ಎಂಜಿನ್ 115 bh ಪವರ್ ಉತ್ಪಾದನೆ ಮಾಡುತ್ತದೆ ಎಂಬ ಮಾಹಿತಿ ಇದ್ದು ಅದು ಸಧ್ಯ ಇರುವ K15B ಯೂನಿಟ್ ಗಿಂತ 10 bh ಅಧಿಕ ಪವರ್ ಜೇನರೇಟ್ ಮಾಡುವ ಸಾಮರ್ಥ್ಯ ಹೊಂದಿದೆ.

ಈ ಎಂಜಿನ್ ಗೆ 5 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗುತ್ತಿದೆ, ಆದರೆ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಗೆ ಬದಲಾಗಿ ಹೊಸ ಎರ್ಟಿಗಾ ಪೆಟ್ರೋಲ್ ಎಂಜಿನ್ ನಲ್ಲಿ ಪೆಡಲ್ ಶಿಫ್ಟರ್ಸ್ ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಲಾಗುತ್ತಿದೆ! ಹೀಗಾಗಿ ಇದು ಮೊದಲಿಗಿಂತ ಪವರ್ಫುಲ್ ಆಗಲಿದೆ.

ಅದ್ಭುತ ಮೈಲೇಜ್ : ಶಕ್ತಿಶಾಲಿ ಎಂಜಿನ್ ನೊಂದಿಗೆ ಬರುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಪೆಟ್ರೋಲ್ ವೆರಿಯಂಟ್ 20.1 kmpl ಮೈಲೇಜ್ ನೀಡಿದರೆ, CNG ವೆರಿಯಂಟ್ 26.11 km/kg ಮೈಲೇಜ್ ಕೊಡುತ್ತದೆ. ಹಾಗೇನೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರುವ ವೆರಿಯಂಟ್ 20.3 kmpl ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಫೀಚರ್ಸ್ : ಈ ಕಾರಿನಲ್ಲಿ ಸೇಫ್ಟಿಗಾಗಿ ಡುಯಲ್ ಏರ್ ಬ್ಯಾಗ್ಸ್, EBD ಯೊಂದಿಗೆ ABS ಮತ್ತು ಬ್ರೇಕ್ ಅಸ್ಸಿಸ್ಟ್, ಗೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು IDOFIX ಚೈಲ್ಡ್ ಸೀಟ್ ಅಂಕರೇಜ್ ನೀಡಲಾಗಿದೆ. ಉನ್ನತ ಶ್ರೇಣಿಗಳಲ್ಲಿ ಹಿಲ್ ಹೋಲ್ಡ್ ಅಸ್ಸಿಸ್ಟ್ ನೊಂದಿಗೆ ನಾಲ್ಕು ಏರ್ ಬ್ಯಾಗ್ಸ್ ಮತ್ತು ESP ಸೌಲಭ್ಯ ಸಿಗುತ್ತದೆ.

ಕಾರಿನ ಬೆಲೆ : ಇಷ್ಟೆಲ್ಲ ಅದ್ಭುತ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಈ ಮಾರುತಿ ಸುಜುಕಿ ಎರ್ಟಿಗಾ ಫೇಸ್ಲಿಫ್ಟ್, 2023 ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಭಾರತದ ಮಾರುಕಟ್ಟೆಗಳಲ್ಲಿ ಈ ಕಾರಿನ ಎಕ್ಸ್-ಶೋ ರೂಮ್ ಬೆಲೆ 8.41 ಲಕ್ಷ ರೂಪಾಯಿಗಳಿಂದ 12.79 ಲಕ್ಷ ರೂಪಾಯಿಗಳವರೆಗೂ ಇರಲಿದ್ದು, ಈ ಕಾರು ಅದ್ಭುತ ಫೀಚರ್ಸ್ ಹಾಗೂ ಅತ್ಯಂತ ಕಡಿಮೆ ಬೆಲೆಯ ಕಾರಣ ಟೊಯೋಟಾ ಇನೋವಾ ಕಾರಿಗೆ ಟಫ್ ಕಾಂಪಿಟೇಷನ್ ಕೊಡುವ ನಿರೀಕ್ಷೆ ಇದೆ.

You might also like

Comments are closed.