ಬಾಯಲ್ಲಿ ಚಮಚ ಮತ್ತು ನಿಂಬೆ ಹಿಡಿದು ಸ್ಪರ್ದೆಯಲ್ಲಿ ಈ ಬಾಲಕ ತೋರಿದ ಚಾಣಾಕ್ಷತನ: ಮತ್ತೆ ಮತ್ತೆ ವೀಡಿಯೋ ನೋಡಿದ ನೆಟ್ಟಿಗರು!

ನಾವೆಲ್ಲರೂ ಕೂಡಾ ಮೊಲ ಮತ್ತು ಆಮೆಯ ಓಟದ ಕಥೆಯನ್ನು ಕೇಳಿಯೇ ಇದ್ದೇವೆ. ಅದರಲ್ಲಿ ಒಂದು ಸಲ ಆಮೆ ಮತ್ತು ಮೊಲದ ನಡುವೆ ಓಟದ ಸ್ಪರ್ಧೆ ನಡೆದಾಗ ಅದರಲ್ಲಿ ಹೇಗೂ ನಾನೇ ಗೆಲ್ಲೋದು ಅಂತ ಮೊಲ ಬೇಗ ಬೇಗ ಓಡಿ ವಿಶ್ರಾಂತಿ ಪಡೆಯೋಕೆ ಅಂತ ಮಲಗಿ ಚೆನ್ನಾಗಿ ನಿದ್ರೆ ಮಾಡುತ್ತೆ. ಆದರೆ ನಿಧಾನಕ್ಕೆ ಹೊರಟ ಆಮೆ ಗುರಿಯನ್ನು ತಲುಪೋವರೆಗೆ ವಿಶ್ರಾಂತಿ ಪಡೆಯದೆ ಆಟದಲ್ಲಿ ಗೆದ್ದು ಬಿಡುತ್ತದೆ. ಈಗ ಈ ಕಥೆನಾ ಯಾಕೆ ನೆನಪಿಸಿಕೊಳ್ತಾ ಇದ್ದೀವಿ ಅನ್ನೋದಾದ್ರೆ ನಿಜಕ್ಕೂ ಇಲ್ಲಿ ಒಂದು ಕಾರಣ ಇದೆ. ಅದು ಕೂಡಾ ಬಹುತೇಕ ಈ ಆಮೆ ಮತ್ತು ಮೊಲದ ಕಥೆಗೆ ತೀರಾ ಹತ್ತಿರ ಅನ್ನೋ ಹಾಗೆ ಇರೋದೇ ಪ್ರಮುಖ ಕಾರಣ‌. ಇಷ್ಟಕ್ಕೂ ಆ ಘಟನೆ ಏನು ಅಂತ ತಿಳಿಯೋಣ ಬನ್ನಿ.

ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಮಕ್ಕಳಿಗೆ ಚಮಚದಲ್ಲಿ ನಿಂಬೆ ಹಣ್ಣನ್ನು ಇಟ್ಟು, ಆ ಚಮಚವನ್ನು ಬಾಯಿಯಲ್ಲಿ ಕಚ್ಚಿಕೊಂಡು ನಡೆಯುವ ರೇಸ್ ಅನ್ನು ಮಾಡಲಾಗಿದ್ದು, ಇದರಲ್ಲಿ ಬಾಲಕನೊಬ್ಬ ನಿಧಾನವಾಗಿ ನಡೆಯುವ ಮೂಲಕ ರೇಸ್ ಗೆದ್ದಿದ್ದು ಈ ವೀಡಿಯೋವನ್ನು ಇಂಡಿಯನ್ ಫಾರೆಸ್ಟ್ ಆಫಿಸರ್ ಸುಧಾ ರಮನ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ಚಮಚ ಬಾಯಲ್ಲಿ ಹಿಡಿದು ನಿಂಬೆ ಹಣ್ಣನ್ನು ಅದರಲ್ಲಿ ಇಟ್ಟು ಸಮತೋಲನ ಸಾಧಿಸುತ್ತಾ ಗುರಿ ತಲುಪು ಸ್ಪರ್ಧೆಯನ್ನು ನಾಲ್ಕು ಮಕ್ಕಳು ನಡುವೆ ಏರ್ಪಡಿಸಲಾಗಿದೆ.

ರೇಸ್ ಆರಂಭವಾದ ಕೂಡಲೇ ನಾಲ್ಕು ಜನರಲ್ಲಿ ಮೂವರು ಗುರಿ ತಲುಪಬೇಕು ಎನ್ನುವ ಆತುರದಲ್ಲಿ ಬೇಗ ಬೇಗನೆ ಮುಂದೆ ಹೋಗಲು ಆರಂಭಿಸಿದ್ದಾರೆ. ಆದರೆ ಒಬ್ಬ ಮಾತ್ರ ಯಾವುದೇ ರೀತಿಯ ಆತುರ ವನ್ನು ತೋರದೆ ನಿಂಬೆ ಹಣ್ಣನ್ನು ಕೆಳಗೆ ಬೀಳದ ಹಾಗೆ ಎಚ್ಚರಿಕೆಯಿಂದ ಸಮತೋಲನ ಸಾಧಿಸುತ್ತಾ ನಿಧಾನವಾದ ಹೆಜ್ಜೆಯನ್ನು ಹಾಕುತ್ತಾ ಮುಂದೆ ಮುಂದೆ ನಡೆದಿದ್ದಾನೆ. ಮುಂದೆ ಬೇಗ ಬೇಗ ಹೋದ ಮೂರು ಜನರ ಚಮಚೆಯಲ್ಲಿದ್ದ ನಿಂಬೆ ಹಣ್ಣುಗಳು ಅವರು ಗುರಿ ತಲುಪುವ ಮುನ್ನವೇ ಕೆಳಗೆ ಬಿದ್ದಿವೆ. ಆದರೆ ನಿಧಾನವಾಗಿ ನಡೆಯುತ್ತ ಸಾಗಿದ ಬಾಲಕ ನಿಂಬೆಹಣ್ಣು ಕೆಳಗೆ ಬೀಳದಂತೆ ಜಾಗ್ತತೆ ವಹಿಸಿ ಸಾಗಿದ್ದು, ಗುರಿ ತಲುಪಿದ್ದು ಮಾತ್ರವಲ್ಲದೇ ಸ್ಪರ್ಧೇಯನ್ನು ಗೆದ್ದಿದ್ದಾನೆ.

ಇಂತಹ ಓಟದ ಆಟದಲ್ಲಿ ಭಾಗವಹಿಸಬೇಕಾದರೆ ಮೊದಲು ವ್ಯಕ್ತಿಯು ಸಮತೋಲನದ ಬಗ್ಗೆ ಗಮನ ನೀಡಬೇಕು. ಏಕೆಂದರೆ ಇದರಲ್ಲಿ ಚಮಚವನ್ನು ಬಾಯಲ್ಲಿ ಹಿಡಿದು ಅದರಲ್ಲಿ ನಿಂಬೆ ಹಣ್ಣನ್ನು ಇಟ್ಟು ಮುಂದೆ ನಡೆಯಬೇಕು. ಸ್ವಲ್ಪ ಸಮತೋಲನ ತಪ್ಪಿದರೂ ನಿಂಬೆಹಣ್ಣು ಬಿದ್ದು ಹೋಗುವುದು ಖಚಿತ. ಹಾಗಾಗದೇ ಸಮತೋಲನ ಸಾಧಿಸಿ ಕೊನೆಯ ಗೆರೆಯ ಬಳಿ ತಲುಪಿದರೆ ಆಟವನ್ನು ಗೆದ್ದಂತೆಯೇ ಅರ್ಥ. ಆತುರವಾಗಿ ನಡೆದರೆ ನಿಂಬೆಹಣ್ಣಿನ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವ ಅವಕಾಶಗಳೇ ಹೆಚ್ಚು ಎನ್ನುವುದು ಕೂಡಾ ವಾಸ್ತವ. ವೀಡಿಯೋ ಜೊತೆಗೆ ಸುಧಾ ರಮನ್ ಅವರು ಶೀರ್ಷಿಕೆಯಲ್ಲಿ ಒಂದು ಅರ್ಥಪೂರ್ಣ ಸಾಲನ್ನು ಬರಿದ್ದಾರೆ.

ವಿಡಿಯೋ ನೋಡಿ

ನಿಧಾನವಾಗಿ ಹಾಗೂ ಸ್ಥಿರವಾಗಿ ಓಡುವುದರಿಂದ ಓಟದ ಆಟವನ್ನು ಗೆಲ್ಲಬಹುದು ಎನ್ನುವುದು ಚಿರಕಾಲದ ಸತ್ಯ ಎಂದು ಅವರು ವೀಡಿಯೋ ಜೊತೆಗೆ ಬರೆದುಕೊಂಡಿದ್ದಾರೆ. ಈಗಾಗಲೇ ಈ ವೀಡಿಯೋವನ್ನು 21 ಸಾವಿಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 2 ಸಾವಿರಕ್ಕಿಂತ ಅಧಿಕ ಲೈಕ್ಸ್ ಹಾಗೂ 200 ಕ್ಕಿಂತ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಮೆಚ್ಚಿಕೊಂಡಿದ್ದು, slow and steady wins the race ಎನ್ನುವ ಮಾತು ಸತ್ಯ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ಇತರರಂತೆ ಆ ಬಾಲಕ ಆಸೆಯಿಂದ ಓಡಲಿಲ್ಲ, ಆಸಕ್ತಿಯಿಟ್ಟು ಸಾವಧಾನವಾಗಿ ಓಡಿದ ಎಂದಿದ್ದಾರೆ.

You might also like

Comments are closed.