
ರಾಮನಗರ: ಕೆಎಸ್‌ಆರ್‌ಟಿಸಿ ಬಸ್ ಎದುರಿಗೆ ಬಂದ ಒಂಟಿ ಸಲಗವೊಂದು ಸುಮಾರು ಸಮಯ ಬಸ್ ಅನ್ನು ಮುಂದೆ ಬಿಡದಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಾಡು ಶಿವನಹಳ್ಳಿ ಗ್ರಾಮದ ಬಳಿ ನಡೆದಿದೆ. ಕಾಡು ಶಿವನಹಳ್ಳಿಯಿಂದ ಕನಕಪುರಕ್ಕೆ ಬರುತ್ತಿದ್ದ ಬಸ್ ಮುಂದೆ ಹಠಾತ್ ಆಗಿ ಬಂದ ಆನೆ ಬಸ್ ಅನ್ನು ಮುಂದೆ ಬಿಡಲಿಲ್ಲ. ಇದರಿಂದ ಒಂದಿಷ್ಟು ಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು.
ಬಸ್ ಎದುರಿಗೆ ಬಂದ ಆನೆ ಸುಮಾರು ಸಮಯ ಬಸ್ ಮುಂದೆಯೇ ನಿಂತಿತ್ತು. ಇದರಿಂದ ಬಸ್‌ನಲ್ಲಿದ್ದ ಜನ ಆತಂಕಕ್ಕೀಡಾಗಿದ್ದರು. ಅದಲ್ಲದೇ ಆನೆ ಕಂಡು ಬಸ್‌ನಲ್ಲಿದ್ದ ಜನರು ಕಿರುಚಾಡಿದರು. ಹಾರನ್ ಮಾಡಿದರೂ ಬಸ್ ಅನ್ನು ಮುಂದೆ ಬಿಡದೇ ಕಾಡಾನೆ ನಿಂತಿತ್ತು. ಒಂದಿಷ್ಟು ಸಮಯದ ಬಳಿಕ ಆನೆ ದಾರಿ ಬಿಟ್ಟಿದ್ದು, ಬಸ್‌ನಲ್ಲಿದ್ದ ಜನರು ಬದುಕಿತು ಬಡಜೀವ ಅಂತಾ ನಿಟ್ಟುಸಿರು ಬಿಟ್ಟಿದ್ದಾರೆ.
Comments are closed.