ಮೊಟ್ಟೆಯು ಉತ್ತಮವಾದ ಒಂದು ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗಿದೆ. ಒಂದು ಮೊಟ್ಟೆ 200 ಎಂಜಿ ಕೊಲೆಸ್ಟ್ರಾಲ್ ಹಾಗೂ 6 ಗ್ರಾಂ ಫ್ಯಾಟ್ ಹೊಂದಿರುತ್ತದೆ. ಆದರೆ ಹೃದಯ ತಜ್ಞರು ಹೇಳುವಂತೆ ಮನುಷ್ಯ ದಿನಕ್ಕೆ 300 ಎಂಜಿ ಕೊಲೆಸ್ಟರಾಲ್ ತಿನ್ನಬಹುದು.ಮೊಟ್ಟೆಯ ಬಿಳಿ ಭಾಗದಲ್ಲಿ 7 ಗ್ರಾಂ ಪ್ರೋಟಿನ್ ಇರುತ್ತದೆ. ಆದರೆ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದು, ಮೆದುಳು ಆರೋಗ್ಯವನ್ನು ಕಾಪಾಡುವ ಕೊಲಿನ್ ಅಂಶ ಹೆಚ್ಚಿದೆ. ಅಲ್ಲದೇ ವಿಟಮಿನ್ A,B-12 ಹಾಗೂ B6 ಅಧಿಕವಾಗಿದೆ.ಒಟ್ಟಾರೆ ಒಂದು ಮೊಟ್ಟೆ ಸೇವಿಸುವುದರಿಂದ ಪ್ರೋಟಿನ್ ಹಾಗು ವಿಟಮಿನ್ ಸೂಕ್ತ ಪ್ರಮಾಣದಲ್ಲಿ ಸಿಗುತ್ತದೆ. ಆದರೆ, ದೇಹಕ್ಕೆ ಅಗತ್ಯದಷ್ಟು ಮಾತ್ರ ಕೊಲೆಸ್ಟರಾಲ್ ಹೋಗಬೇಕೆಂದರೆ ಬಿಳಿ ಭಾಗ ಬೆಸ್ಟ್ ಎಂಬುವುದು ತಜ್ಞನರ ಅಭಿಪ್ರಯ.
