ಸೋಶಿಯಲ್ ಮೀಡಿಯಾ ಎಂಬುದು ಒಂದು ಸಮುದ್ರ ಇದ್ದ ಹಾಗೇ, ಇಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ನೂರಾರು ನೈಜ ವಿಡಿಯೋಗಳು ಸಹ ಸೇರಿಸುತ್ತವೆ, ಅಂತಹ ನೈಜ ವಿಡಿಯೋಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿಡಿಯೋಗಳು ಅದರಲ್ಲಿಯೂ ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತವೆ. ಅಂದರೆ ಅಂತಹ ವಿಡಿಯೋಗಳು ಜನರ ಮನಸ್ಸು ಗೆದ್ದು ಸಾಕಷ್ಟು ಲೈಕ್ಸ್ ಹಾಗೂ ಶೇರ್ ಕಂಡು ವೈರಲ್ ಆಗುತ್ತವೆ.
ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ವಿಡಿಯೋಗಳಲ್ಲಿ ಕೆಲವು ಪ್ರಾಣಿಗಳ ನಡುವಿನ ಪ್ರೀತಿ, ಮಾತೃ ಹೃದಯ ಹಾಗೂ ಅವುಗಳ ತುಂಟಾಟಕ್ಕೆ ಸಂಬಂಧಿಸಿದರೆ ಮತ್ತಷ್ಟು ವಿಡಿಯೋಗಳಲ್ಲಿ ವನ್ಯ ಮೃಗಗಳ ಕ್ರೌರ್ಯ ಹಾಗೂ ಅವುಗಳ ಭೀಭತ್ಸ ವರ್ತನೆಯನ್ನು ಸಹ ತೋರಿಸುವಂತಿರುತ್ತವೆ, ಸಧ್ಯ ಅಂತಹುದೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಅದರಲ್ಲಿ ಒಂದು ಗಿಡುಗ (ಹದ್ದು) ತನಗಿಂತ ದೊಡ್ಡ ಗಾತ್ರದ ಬೃಹತ್ ನರಿಯೊಂದನ್ನು ಬೇಟೆಯಾಡಿ ಅದನ್ನು ಹೊತ್ತೊಯುತ್ತಿರುವ ದೃಶ್ಯ ಭಯ ಹುಟ್ಟಿಸುವಂತಿದೆ.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಜನಪ್ರಿಯ ಪ್ಲಾಟ್ಫಾರ್ಮ್ ಟ್ವಿಟ್ಟರ್ ನ TerrifyingNatur ಎಂಬುದರಲ್ಲಿ ಹಂಚಿಕೊಳ್ಳಲಾಗಿದ್ದು, ಪರಿಸರ ಸಾಕಷ್ಟು ಕ್ರೂರ ಎಂಬ ಕ್ಯಾಪ್ಶನ್ ಕೊಡಲಾಗಿದೆ, ಇದುವರೆಗೂ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು 31 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದು 400 ಕ್ಕೂ ಅಧಿಕ ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವದರ ಮೂಲಕ ಹಂಚಿಕೊಂಡಿದ್ದಾರೆ. ಅವರಲ್ಲಿ ಹಲವಾರು ಜನರು ಈ ದೃಶ್ಯದ ಬಗ್ಗೆ ಗಾಬರಿಯನ್ನು ಸಹ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ 18 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ನೀವು ನೋಡಬಹುದಾಗಿದ್ದು, ಅರಣ್ಯದ ಎತ್ತರದ ಪ್ರದೇಶದಲ್ಲಿ ಒಂದು ಗಿಡುಗ ನರಿಯನ್ನು ಹೊಡೆದು ಕೆಳಗೆ ಹಾಕಿ ಅದರ ಮೇಲೆ ಕುಳಿತಿದ್ದು ಇದ್ದಕ್ಕಿದ್ದಂತೆ ಆ ಭಾರೀ ಗಾತ್ರದ ನರಿಯನ್ನು ಎತ್ತಿಕೊಂಡು ಹಾರಿ ಹೋಗುತ್ತದೆ, ಆ ನರಿಯ ಗಾತ್ರ ನೋಡಿದರೆ ನಿಜಕ್ಕೂ ನಿಮಗೆ ಅಚ್ಚರಿಯಾಗದೇ ಇರದು, ಆದರೆ ಆ ಗಾತ್ರದ ನರಿಯನ್ನು ಆ ಗಿಡುಗ ಸರಾಗವಾಗಿ ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಿದರೆ ಆ ಗಿಡುಗನ ಶಕ್ತಿಯ ಪರಿಚಯವಾಗುತ್ತದೆ.
Nature is brutal 😲 pic.twitter.com/2qDjt15KaC
— Terrifying Nature (@TerrifyingNatur) May 22, 2023