ಒಂದು ಕಾಲದಲ್ಲಿ ಲೆಕ್ಕವಿಲ್ಲದಷ್ಟು ಜನಕ್ಕೆ ಅನ್ನ ನೀಡಿದ ದ್ವಾರಕೀಶ್ ಅವರಿಗೆ ಎಂಥಹ ಪರಿಸ್ಥಿತಿ ಬಂದಿದೆ ನೋಡಿ..

ಪ್ರಿಯ ವೀಕ್ಷಕರೆ ಜಗತ್ತೆ ಹಾಗೆ ಎಲ್ಲವು ಸಮಯದ ಸೂತ್ರಧಾರಿಗಳು. ಕಾಲಯ ತಸ್ಮೈ ನಮಃ, ಇವತ್ತು ನಮ್ಮ ಜೊತೆಗೆ ಇದ್ದಿದ್ದು ನಾಳೆ ಇರುತ್ತೊ ಇಲ್ವೊ ಎನ್ನುವ ಗ್ಯಾರೆಂಟಿ ಇಲ್ಲ. ಇನ್ನು ಸಿನೆಮಾ ಇಂಡಸ್ಟ್ರಿಗಳು ಕಥೆಯಂತೂ ಇನ್ನು ವಿಚಿತ್ರ. ಇಂದು ನಟ ನಾಯಕ ನಿರ್ದೇಶಕನಾಗಿ ಜನಪ್ರಿಯನಾಗಿದ್ದರೆ ಮುಂದೊಂದು ದಿನ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗುತ್ತದೆ‌. ಸಂಪಾದಿಸಿದ ಹಣವನ್ನೆಲ್ಲ‌ ಕಳೆದುಕೊಂಡು ಊರು ಬಿಟ್ಟವರವನ್ನು, ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರನ್ನು ಕಂಡಿರ್ತಿವಿ.‌ ಇಂದು ಅಂತಹದ್ದೆ ಸಾಲಿನಲ್ಲಿದ್ದಾರೆ ಕನ್ನಡದ ಟಾಪ್ ನಟ, ನಿರ್ದೇಶಕ ದ್ವಾರಕೀಶ್. ಆ ಕಥೆ ಏನು ಅಂತೀರಾ ಇಲ್ಲಿದೆ ನೋಡಿ ಸ್ಟೋರಿ..

ಸಿಂಗಾಪುರದಲ್ಲಿ ರಾಜಾ ಕುಳ್ಳ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಸಿನೆಮಾ‌ ಇಂಡಸ್ಟ್ರೀಯ ಕುಳ್ಳ ಎಂದೆ ಗುರುತಿಸಿಕೊಂಡಿರುವ ದ್ವಾರಕೀಶ ನಟರಾಗಿ ಮಾತ್ರವಲ್ಲದೆ ಹಲವು ಚಿತ್ರಗಳ ಕಥೆ,‌ ನಿರ್ಮಾಣ, ನಿರ್ದೇಶಕ ಮಾಡಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಕಾಲಿಟ್ಟು ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿ ಹಣ ಗಳಿಸಿದ್ದಾರೆ. ಸಿನಿಮಾ ನಿರ್ಮಾಣದ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕರಿಗೆ ಉದ್ಯೋಗ ನೀಡಿದ್ದರು.

ಇನ್ನು ಕಾಲ ನಾವು ಅಂದುಕೊಂಡ ಹಾಗೆ ಯಾವತ್ತು ಇರುವುದಿಲ್ಲ‌. ಒಂದು ಕಾಲದಲ್ಲಿ ಹಣ ಸಂಪಾದಿಸಿದ ದ್ವಾರಕೀಶ್ ಇಂದು ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಡಾ. ವಿಷ್ಣುವರ್ಧನ್ ಅವರ ಆತ್ಮೀಯ ಗೆಳೆಯ ದ್ವಾರಕೀಶ್. ವಿಷ್ಣುವರ್ಧನ್ ನಟನೆಯ ಅನೇಕ ಸಿನಿಮಾಗಳನ್ನು ದ್ವಾರಕೀಶ್ ಅವರೆ ನಿರ್ಮಾಣ‌ ಮಾಡಿದ್ದು ನಂತರ ಇವರಿಬ್ಬರಲ್ಲಿ ಮನಸ್ತಾಪಗಳಿದ್ದು ಎಂಬುದು ಗಾಂಧಿನಗರದ‌ ಸುದ್ದಿ.

ನಾನು ಆರೋಗ್ಯವಾಗಿದ್ದೇನೆ: ನಟ ದ್ವಾರಕೀಶ್‌ | Prajavani

ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಸೋತ ದ್ವಾರಕೀಶ್ ಅವರು ಒಂದಲ್ಲಾ ಎರಡಲ್ಲಾ ಸಾಲ ತೀರಿಸುವ ಸಲುವಾಗಿ ಬರೋಬ್ಬರಿ ಹದಿಮೂರು ಮನೆಗಳನ್ನ ಮಾರಿದ್ದಾರೆ.. ದ್ವಾರಕೀಶ್ ಪರಿಸ್ಥಿತಿ ತಿಳಿದ ವಿಷ್ಣುವರ್ಧನ್ ಅವರು ಆಪ್ತಮಿತ್ರ ‌ಸಿನಿಮಾ ನಿರ್ಮಾಣ ಮಾಡುವಂತೆ ಹೇಳಿ ಸಂಬಾವನೆ ಪಡೆಯದೆ ಚಿತ್ರದಲ್ಲಿ ನಟಿಸಿದರು ಆ ಚಿತ್ರ ಸುಪರ್ ಹಿಟ್ ಕೂಡ ಆಯಿತು. ಆದರೂ ಕೆಲವು ಸಮಯದ ನಂತರ ದ್ವಾರಕೀಶ್ ಡಾ.‌ವಿಷ್ಣುವರ್ಧನ್ ಅವರೊಂದಿಗೆ ಮನಸ್ಥಾಪ ಮಾಡಿಕೊಂಡಿದ್ದರು ಎಂಬ ಸುದ್ದಿಯು ಕೆಲ ಕಾಲ ಹರಿದಾಡಿತು.

ಇದಾದ ಬಳಿಕ‌ ಮತ್ತೆ ಸಿನಿಮಾ ನಿರ್ಮಣಕ್ಕೆ ಕೈ ಹಾಕಿ‌ ಸೋತು ಗಾಂಧಿ ನಗರದ ತುಂಬಾ ಸಾಲ ಮಾಡಿಕೊಂಡರು. ಪಡೆದ ಹಣ ವಾಪಾಸ್ ನೀಡಲಲ್ಲ‌ ಎಂದು ಜನ ಮಾತನಾಡಿಕೊಂಡರು. ಸಾಲವನ್ನು ತೀರಿಸಲು ಬೆಂಗಳೂರಿನಲ್ಲಿನ ತಮ್ಮ ಬಂಗಲೆಯನ್ನಯ ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ 11 ಕೋಟಿ ರೂಪಾಯಿಗೆ ಮಾರಿದ್ದರು.

ಆಯುಷ್ಮಾನ್ ಸಿನೆಮಾದ ಕಲಾವಿದರಿಗೆ, ‌ನಟ ಶಿವಣ್ಣ ಅವರಿಗೆ ಹಣ ನೀಡದೆ ಹಾಗೂ ನಿರ್ದೇಶಕ ಜಯಣ್ಣ ಬಳಿ ಲಕ್ಷಾಂತರ ರೂಪಾಯಿ ಹಣ ಪಡದಿದ್ದು ಹಿಂದಿರುಗಿಸಿಲ್ಲ ಎಂದು ಗಲಾಟೆ ಮಾಡಿದ್ದು‌ ಅಂದು ಸಯದ್ದಿಯಾಗಿತ್ತು. 2013 ರಲ್ಲಿ ಚಾರುಲತಾ ಸಿನೆಮಾ ನಿರ್ಮಾಣದ ಸಂದರ್ಭದಲ್ಲಿ ಕೆ ಸಿ ಎನ್ ಚಂದ್ರಶೇಖರ್ ಬಳಿ 50 ಲಕ್ಷ ರೂಪಾಯಿ ಸಾಲ ಪಡೆದಿದ್ದರು ದ್ವಾರಕೀಶ್. ಹಣ ಮರಳಿ ಕೇಳಲು ಹೋದಾಗ ಚಂದ್ರಶೇಖರ ಮೇಲೆಯೆ ದೂರು ನೀಡಿದ್ದರು ದ್ವಾರಕೀಶ್.

ಹಣ ಪಡೆಯುವಾಗ ಸಹಿ ಹಾಕಿ ಚೆಕ್ ನೀಡಿದ್ದನು ಆಧಾರವನ್ನಾಗಿಟ್ಟುಕೊಂಡು ಚಂದ್ರಶೇಖರ್ ಕೋರ್ಟಗೆ ಕೇ’ಸ್ ಹಾಕಿದ್ದಾರೆ, ಸಹಿ‌ ನನ್ನದಲ್ಲ ಎಂದು ವಾದಿಸಿದರೂ ಆರೇಳು ವರ್ಷದ ಬಳಿಕ ಸಹಿ ದ್ವಾರಕೀಶ್ ಅವರದ್ದೆ ಎಂದು ಸಾಬೀತಾಗಿದ್ದು ಕೋರ್ಟ ಒಟ್ಟು 52 ಲಕ್ಷ ಮೊತ್ತ ನೀಡಬೇಕೆಂದು ಆದೇಶಿಸಿದೆ. ಇಷ್ಟೆಲ್ಲ ದೊಡ್ಡ ಸಿನೆಮಾ ನಿರ್ಮಾಣ ಮಾಡಿ ಸಾಕಷ್ಟು ಸಂಪತ್ತನ್ನು ಗಳಿಸಿದ್ದ ದ್ವಾರಕೀಶ್ ಎಲ್ಲಿ ಎಡವಿದರು ಎಂಬುವುದೆ ಪ್ರಶ್ನೆ..

You might also like

Comments are closed.