ಆಟೋದಲ್ಲಿ ಪ್ರಯಾಣ ಮಾಡಿ,ಆಟೋಚಾಲಕ ಬೇಡ ಅಂದರೂ ಜೇಬಲ್ಲಿದ್ದ ಹಣದ ಕಟ್ಟನ್ನು ಆಟೋ ಡ್ರೈವರ್ ಗೆ ಕೊಟ್ಟ ದುನಿಯಾ ವಿಜಯ್! ಕಟ್ಟಿನಲ್ಲಿ ಇದ್ದ ಹಣ ಅದೆಷ್ಟು ನೋಡಿ ಶಾಕ್ ಆಗ್ತೀರಾ!!

Entertainment/ಮನರಂಜನೆ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸ್ಟಾರ್ ನಟರು ಇದ್ದಾರೆ. ಅವರಲ್ಲಿ ಕೆಲವರು ಕೇವಲ ನಟರು ಮಾತ್ರವಲ್ಲ ಅಥವಾ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುವುದು ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ನಿಜವಾದ ಹೀರೋ ಎನಿಸಿಕೊಂಡವರು ಅಂತವರಲ್ಲಿ ನಟ ದುನಿಯಾ ವಿಜಯ್ ಕೂಡ ಒಬ್ಬರು. ದುನಿಯಾ ಸಿನಿಮಾದ ಮೂಲಕವೇ ವಿಜಯ್ ಅವರ ಹೆಸರಿನ ಹಿಂದೆ ದುನಿಯಾ ಎನ್ನುವ ನಾಮದೇಯ ಅಂಟಿಕೊಂಡಿದ್ದು. ಅದರಿಂದಲೇ ಅವರು ಫೇಮಸ್.

ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಕೋಬ್ರಾ ಎಂದೇ ಕರೆಸಿಕೊಳ್ಳುವ ದುನಿಯಾ ವಿಜಯ್ ಅವರು ನೋಡುವುದಕ್ಕೆ ರಫ್ ಅಂಡ್ ಟಫ್ ಆದರೆ ಅವರಲ್ಲೂ ಮಗುವಿನಂಥ ಮನಸ್ಸಿದೆ. ಬೇರೆಯವರಿಗೆ ಸಹಾಯ ಮಾಡುವ ಮನೋಭಾವ ಇದೆ ಅನ್ನುವುದು ಅವರೊಂದಿಗೆ ಒಡನಾಡಿದವರಿಗೆ ಮಾತ್ರ ಗೊತ್ತು. ದೂರದಿಂದ ನೋಡಿದ್ರೆ ದುನಿಯಾ ವಿಜಯ್ ಸೊಕ್ಕಿನ ಮನುಷ್ಯ ಎನ್ನಿಸಬಹುದು. ಆದರೆ ಅವರು ನಿಜಕ್ಕೂ ಬಹಳ ಸರಳ ವ್ಯಕ್ತಿ.

ತಮ್ಮಲ್ಲಿ ಎಷ್ಟೇ ಹಣ ಐಶ್ವರ್ಯ ಇದ್ದರೂ ಅದ್ಯಾವುದನ್ನು ತೋರಿಸಿಕೊಳ್ಳುವುದಿಲ್ಲ. ತಾನು ಬಂದು ಹಿನ್ನೆಲೆ ಏನು? ಎಷ್ಟು ಕಷ್ಟದಿಂದ ಸಿನಿಮಾದಲ್ಲಿ ಮುಂದೆ ಬಂದಿದ್ದೇನೆ ಎಂಬುದನ್ನು ಎಂದಿಗೂ ಮರೆತವರಲ್ಲ. ತಾನು ಬೆಳೆಯಬೇಕು ತನ್ನೊಂದಿಗೆ ಇತರರು ಬೆಳೆಯಬೇಕು ಎನ್ನುವಂತಹ ಮನಸ್ಥಿತಿ ಉಳ್ಳ ದುನಿಯಾ ವಿಜಯ್ ಇಂದು ಹಲವಾರು ಹೊಸ ನಟರಿಗೆ ಮಾದರಿಯಾಗಿದ್ದಾರೆ ಜೊತೆಗೆ ಮಾರ್ಗದರ್ಶನವನ್ನು ಕೂಡ ನೀಡುತ್ತಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಯಾರಿಗಾದರೂ ತೊಂದರೆ ಆದರೆ ಆ ಸ್ಥಳಕ್ಕೆ ಕೂಡಲೇ ಧಾವಿಸಿ ಅವರ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವವರು ದುನಿಯಾ ವಿಜಯ್. ಬುಲೆಟ್ ಪ್ರಕಾಶ್ ತೀರಿಕೊಂಡಾಗ ಅವರ ಎಲ್ಲಾ ಕಾರ್ಯದಲ್ಲಿಯೂ ಜೊತೆಗೆ ದುನಿಯಾ ವಿಜಯ್ ಇದ್ರೂ ಎನ್ನುವುದನ್ನು ಬುಲೆಟ್ ಪ್ರಕಾಶ್ ಅವರ ಮಗನೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಬ್ಲಾಕ್ ಕೋಬ್ರಾ ಇಂದು ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ ಇರುವುದು ಮಾತ್ರವಲ್ಲ ನಿರ್ದೇಶಕನಾಗಿಯೂ ಕೂಡ ಯಶಸ್ಸನ್ನ ಗಳಿಸುತ್ತಿದ್ದಾರೆ.ಹೌದು ದುನಿಯಾ ವಿಜಯ್ ಅವರು ಸಿನಿಮಾದ ನಿರ್ದೇಶನದ ನಂತರ ಅವರನ್ನು ಒಬ್ಬ ಅತ್ಯುತ್ತಮ ನಿರ್ದೇಶಕ ಇದ್ದಾನೆ ಎನ್ನುವುದನ್ನು ದುನಿಯಾಕ್ಕೇ ತೋರಿಸಿದ್ದಾರೆ. ಹೌದು ದುನಿಯಾ ವಿಜಯ್ ಇದೀಗ ನಿರ್ದೇಶಕನಾಗಿಯೂ ಕೂಡ ಕೆಲವು ಸಿನಿಮಾಗಳನ್ನ ಮಾಡುತ್ತಿದ್ದಾರೆ. ನಟ ದುನಿಯಾ ವಿಜಯ್ ರಿಯಲ್ ಲೈಫ್ ನಲ್ಲಿ ತುಂಬಾನೇ ಸಿಂಪಲ್ ಆಗಿರುವಂತಹ ವ್ಯಕ್ತಿ. ಅವರ ಬಳಿ ಅದೆಷ್ಟೋ ಐಷಾರಾಮಿ ಕಾರುಗಳು ಇರಬಹುದು

ಓಡಾಡುವುದಕ್ಕೆ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸುವ ಅಗತ್ಯ ಅವರಿಗೆ ಇಲ್ಲವೇ ಇಲ್ಲ. ಆದರೆ ಅವರಲ್ಲಿ ಸಿಂಪ್ಲಿಸಿಟಿ ಎಷ್ಟಿದೆ ಗೊತ್ತಾ? ಇತ್ತೀಚಿಗೆ ಯಾವುದೋ ಸ್ಥಳಕ್ಕೆ ಹೋಗಬೇಕಾದರೆ, ಸಾಮಾನ್ಯರಂತೆ ಒಂದು ಆಟೋ ಹತ್ತಿ ಆ ಸ್ಥಳಕ್ಕೆ ಹೋಗಿದ್ದಾರೆ. ಅಷ್ಟೇ ಅಲ್ಲ ಆಟೋ ಚಾಲಕ ದುನಿಯಾ ವಿಜಯ್ ಅವರ ಅಭಿಮಾನಿ. ಆತ ದುನಿಯಾ ವಿಜಯ್ ಅವರಿಗೆ ಡ್ರಾಪ್ ಕೊಟ್ಟ ಮೇಲೆ ಹಣ ಬೇಡ ಬೇಡ ಅಂತ ದೂರ ಸರಿಯುತ್ತಾನೆ.

ಆದ್ರೆ ವಿಜಯ್ ಮಾತ್ರ ಅವರಿಗೆ ಮೀಟರ್ ಬಿಲ್ ಕೊಡದೆ ಸುಮ್ಮನಾಗುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ರಿಕ್ಷಾದಿಂದ ಇಳಿದು ಹಣವನ್ನು ಕೊಟ್ಟು ತಾನು ಹೋಗಬೇಕಿದ್ದ ಕೆಲಸಕ್ಕೆ ತೆರಳುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದುನಿಯಾ ವಿಜಯ್ ಅವರ ಈ ಸಿಂಪಲ್ ವ್ಯಕ್ತಿತ್ವ ನೋಡಿದ ಜನ ವಾವ್ ಗ್ರೇಟ್ ಎಂದು ಉದ್ಘಾರವೆತ್ತಿದ್ದಾರೆ. ನೀವೇ ನಿಜವಾದ ಹೀರೋ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನೀವು ಕೂಡ ದುನಿಯಾ ವಿಜಯ್ ಅವರ ಸರಳತೆಗೆ ಸಾಕ್ಷಿಯಾಗಿರುವ ಈ ವಿಡಿಯೋವನ್ನು ಇಲ್ಲಿ ನೋಡಬಹುದು. ಈಗಾಗಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಮಾತ್ರವಲ್ಲದೆ ಲಕ್ಷಾಂತರ ಲೈಕ್ ಹಾಗೂ ಕಮೆಂಟ್ ಗಿಟ್ಟಿಸಿಕೊಂಡಿದೆ. ದುನಿಯಾ ವಿಜಯ್ ಅವರ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿ ತಮ್ಮ ನಾಯಕನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.