ಅಪ್ಪು ಮಗಳು ದೃತಿ ಬರ್ತಡೇ ಗೆ ನಟ ದರ್ಶನ್ ಕೊಟ್ಟ ಗಿಫ್ಟ್ ಏನು ಗೊತ್ತಾ…

Today News / ಕನ್ನಡ ಸುದ್ದಿಗಳು

ಅಕ್ಟೋಬರ್ 29 ರಂದು ಕನ್ನಡ ಚಿತ್ರರಂಗ ಪುನೀತ್ ರಾಜಕುಮಾರ್ ಎಂಬ ಪವರ್ ಅನ್ನು ಕಳೆದುಕೊಂಡಿತು. ಹೌದು ಪುನೀತ್ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಎಲ್ಲರಿಗೂ ಗೊತ್ತಿದೆ. ಅವರ ಅಂತಿಮ ದರ್ಶನಕ್ಕೆ 25 ಲಕ್ಷಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋ ಆವರಣದಲ್ಲಿ ಸೇರಿದ್ದರು. ಅವರಿಲ್ಲದ ಅವರ ಕುಟುಂಬದವರ ಜೀವನ ಕಷ್ಟವೆ ಆದರೂ ಸಾಗಬೇಕಾಗಿದೆ. ನಿನ್ನೆ ಧೃತಿ ಅವರ ಹುಟ್ಟುಹಬ್ಬವಾಗಿದ್ದು ಅಪ್ಪು ಅವರ ಆಶೀರ್ವಾದ ಪಡೆದರು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ ಆದರೆ ಅವರು ಮಾಡಿರುವ ಒಳ್ಳೆಯ ಕೆಲಸ ಕಾರ್ಯಗಳು ನಮ್ಮೊಂದಿಗೆ ಜೀವಂತವಾಗಿದೆ. ಪುನೀತ್ ಅವರ ಹಿರಿಯ ಮಗಳು ಧೃತಿ ಅವರು ವಿದೇಶದಲ್ಲಿ ಓದುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಏಪ್ರಿಲ್ 22 ರಂದು ಧೃತಿ ಅವರ ಹುಟ್ಟು ಹಬ್ಬವಾಗಿದ್ದು, ಧೃತಿ ತಂದೆಯಿಲ್ಲದೆ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧೃತಿ ಅವರು ತಂದೆಯ ಆಶೀರ್ವಾದ ಪಡೆಯಲು ವಿದೇಶದಿಂದ ಭಾರತಕ್ಕೆ ಬಂದಿದ್ದಾರೆ. ಭಾರತದಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಸಂಜೆ ಮಗಳು ಧೃತಿ ಆಗಮನ: ಶನಿವಾರವೇ ಅಪ್ಪು ಅಂತ್ಯಸಂಸ್ಕಾರ | Puneeth Rajkumar death; Actor daughter Druthi to reach Bengaluru today - Kannada Filmibeat

ಧೃತಿ ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗದ ಹಲವು ನಟರು ಧೃತಿ ಅವರ ಹುಟ್ಟುಹಬ್ಬಕ್ಕೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟ , ಬಾಸ್ ಎಂದೆ ಖ್ಯಾತಿ ಪಡೆದ ದರ್ಶನ್ ಅವರಿಗೆ ಮೊದಲಿನಿಂದಲೂ ದೊಡ್ಮನೆ ಕುಟುಂಬದ ಬಗ್ಗೆ ಪ್ರೀತಿ. ಅಪ್ಪು ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೆ ದರ್ಶನ್ ಅವರು ಆಸ್ಪತ್ರೆಗೆ ಓಡೋಡಿ ಬಂದು ಅಂತಿಮ ದರ್ಶನ ಪಡೆದುಕೊಂಡರು. ಇದೀಗ ಪುನೀತ್ ಮಗಳು ಧೃತಿ ಅವರ ಹುಟ್ಟುಹಬ್ಬಕ್ಕೆ ದರ್ಶನ ಅವರು ಬಿಳಿ ಬಣ್ಣದ ಪುಟಾಣಿ ನಾಯಿಮರಿಯನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ದರ್ಶನ್ ಅವರು ಹ್ಯಾಪಿ ಬರ್ತಡೆ ಧೃತಿ ಪುಟ್ಟ, ನೀನು ಚೆನ್ನಾಗಿ ಓದಿ ನಿನ್ನ ತಂದೆಯ ಆಸೆ ಈಡೇರಿಸಬೇಕು. ನಾನು ಕಳುಹಿಸಿದ ಉಡುಗೊರೆ ಪುಟ್ಟ ಕಾಣಿಕೆ ಎಂದು ಹೇಳಿದ್ದಾರೆ.

Puneeth Rajkumar Daughters Recent Photos | Power Star Puneeth Rajkumar - YouTube

ದರ್ಶನ್ ಕೊಟ್ಟ ಉಡುಗೊರೆಯನ್ನು ನೋಡಿ ಧೃತಿ ಬಹಳ ಖುಷಿಯಾಗಿ ದರ್ಶನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ತಂದೆಯಂತೆ ಧೃತಿ ಅವರು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡಿದ್ದಾರೆ. ಧೃತಿ ಅವರು ತಮ್ಮ ಸ್ಕಾಲರ್ ಶಿಪ್ ಹಣದಿಂದ ಉನ್ನತ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಿದ್ದಾರೆ, ಇದು ಅವರ ಬಗ್ಗೆ ಹೆಮ್ಮೆ ತರುತ್ತದೆ. ಪುನೀತ್ ಅವರು ನಮ್ಮನೆಲ್ಲ ಬಿಟ್ಟು ಹೋದಾಗ ಧೃತಿ, ತಂಗಿ ವಂದಿತಾ ಹಾಗೂ ಅವರ ತಾಯಿ ಅಶ್ವಿನಿ ಅವರು ಒಬ್ಬರನ್ನೊಬ್ಬರು ತಬ್ಬಿಕೊಂಡು ಆಳುತ್ತಿರುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಧೃತಿ ಅವರು ಅಪ್ಪನ ಆಸೆಯನ್ನು ಈಡೇರಿಸಬೇಕೆಂದು ಅಪ್ಪು ಅವರು ಮರಣಹೊಂದಿದ ಕೆಲವು ದಿನಗಳಲ್ಲಿ ವಾಪಸ್ ವಿದೇಶಕ್ಕೆ ಹೋದರು. ಇದೀಗ ತಮ್ಮ ಹುಟ್ಟುಹಬ್ಬದ ಸಲುವಾಗಿ ಭಾರತಕ್ಕೆ ಬಂದಿರುವ ಧೃತಿ ಅವರು ಅಪ್ಪು ಅವರ ಆಶೀರ್ವಾದ ಪಡೆದುಕೊಂಡರು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.