ಡ್ರೋನ್ ಪ್ರತಾಪ್ ಎಷ್ಟು ಅದ್ಭುತ ವ್ಯಕ್ತಿ ಗೊತ್ತಾ,ಬಿಗ್ ಬಾಸ್ ಗೆ ಬರುವ ಮುಂಚೆ ತನ್ನ ಹಳ್ಳಿಯ ಬಡ ಕುಟುಂಬಗಳಿಗೆ,ರೈತನ ಮಗನಾಗಿ ಮಾಡುತ್ತಿರುವ ಕೆಲಸ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ವಾರದಲ್ಲೇ ಜಗಳಗಳು ಆರಂಭ ಆಗಿವೆ. ಅನೇಕರು ಕಿತ್ತಾಡಿಕೊಂಡಿದ್ದಾರೆ. ಅಸಮರ್ಥರು ಹಾಗೂ ಸಮರ್ಥರ ನಡುವೆ ಮನಸ್ತಾಪ ಉಂಟಾಗುತ್ತಿದೆ. ನಿಯಮ ಪಾಲನೆ ವಿಚಾರದಲ್ಲಿ ಕಿರಿಕ್​ಗಳು ಆಗುತ್ತಿವೆ. ಈ ಎಲ್ಲಾ ವಿಚಾರಗಳು ವೀಕೆಂಡ್​ನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ ಡ್ರೋನ್ ಪ್ರತಾಪ್ ಅವರು ಕೂಡ ಹೈಲೈಟ್ ಆಗುತ್ತಿದ್ದಾರೆ.

ಅಚ್ಚರಿಯ ವಿಚಾರ ಎಂದರೆ ಅವರು ರಾತ್ರೋರಾತ್ರಿ ಬದಲಾಗಿದ್ದಾರೆ. ಡ್ರೋನ್ ಕಂಡು ಹಿಡಿದಿದ್ದೇನೆ ಎಂದು ಖ್ಯಾತಿ ಪಡೆದವರು ಪ್ರತಾಪ್. ಆ ಬಳಿಕ ಅವರು ಡ್ರೋನ್ ಕಂಡು ಹಿಡಿದೇ ಇರಲಿಲ್ಲ ಎನ್ನುವ ವಿಚಾರ ತಿಳಿಯಿತು. ಇದಾದ ಬಳಿಕ ಅವರನ್ನು ಜನರು ಟ್ರೋಲ್ ಮಾಡೋಕೆ ಆರಂಭಿಸಿದರು. ಅವರಿಗೆ ಬಿಗ್ ಬಾಸ್​ಗೆ ಹೋಗೋಕೆ ಈ ಟ್ರೋಲ್ ಕೂಡ ಕಾರಣ ಎಂದರೂ ತಪ್ಪಾಗಲಾರದು.

ಈಗ ಅವರು ಬಿಗ್ ಬಾಸ್ ಮನೆಯಲ್ಲಿ ರಾತ್ರೋರಾತ್ರಿ ಬದಲಾಗಿದ್ದಾರೆ. ‘ನಾನು ಒಂದು ವಾರ ಇರಬಹುದು ಅಷ್ಟೇ, ಆ ಬಳಿಕ ಮನೆಯಿಂದ ಹೋಗ್ತೀನಿ’ ಎಂದು ಪ್ರತಾಪ್ ಹೇಳಿದ್ದರು. ನಾಮಿನೇಷನ್ ವೇಳೆ ಈ ವಿಚಾರ ಚರ್ಚೆಗೆ ಬಂತು. ಅನೇಕರು ಇದೇ ಕಾರಣ ನೀಡಿ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು. ನಾಮಿನೇಷನ್​ಗೆ ಈ ಕಾರಣ ನೀಡಿದ್ದನ್ನು ನೋಡಿ ಪ್ರತಾಪ್​ಗೆ ಸರಿ ಎನಿಸಲಿಲ್ಲ.

ಹೀಗಾಗಿ ಅವರು ಬೇಸರ ಮಾಡಿಕೊಂಡರು. ಅಲ್ಲದೆ, ಬದಲಾಗಲು ನಿರ್ಧರಿಸಿದರು. ನಾನು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೀನಿ. ಇಷ್ಟು ದಿನ ಒಂದು ವಾರ ಇದ್ರೆ ಸಾಕು ಎಂದುಕೊಂಡಿದ್ದೆ. ಆದರೆ, ಈಗ ಹಾಗಲ್ಲ. ಕೊನೆಯವರೆಗೂ ಇರ್ತೀನಿ. ಒಂದೊಮ್ಮೆ ಇರೋಕೆ ಆಗಿಲ್ಲ ಎಂದರೆ ಕೊನೆಯವರೆಗೂ ಫೈಟ್ ಮಾಡ್ತೀನಿ ಎಂದು ಎಲ್ಲರ ಎದುರು ಓಪನ್ ಆಗಿ ಹೇಳಿದರು ಪ್ರತಾಪ್.

ರಾತ್ರೋರಾತ್ರಿ ಬದಲಾಗಿಬಿಟ್ಟೆಯಲ್ಲ ಎಂದು ಪ್ರತಾಪ್ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸಿದರು. ಡ್ರೋನ್ ವಿಚಾರ ಇಟ್ಟುಕೊಂಡು ಕೆಲವರು ಪ್ರತಾಪ್ ಅವರನ್ನು ಟೀಕಿಸಿದ್ದಾರೆ. ಈ ವಿಚಾರ ದೊಡ್ಮನೆಯಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇನ್ನು ಬಿಗ್ಬಾಸ್ ಬರುವ ಮುಂಚೆಯೂ ಸರಳವಾಗಿ ಒಂದಿಷ್ಟು ಜನರಿಗೆ ಆಹಾರವನ್ನು ಉಣಬಡಿಸಿ ಜನರ ಮೇಲೆ ಮನ ಗೆದ್ದಿರುವ ಡ್ರೋನ್ ಪ್ರತಾಪ್ ತಾನು ಒಳ್ಳೆಯ ವ್ಯಕ್ತಿ ಎಂಬ ಭಾವನೆಯನ್ನು ಮನದಲ್ಲಿ ಹುಟ್ಟುಹಾಕತೊಡಗಿದ್ದಾನೆ.

You might also like

Comments are closed.