ಡಾ.ಬ್ರೋ.. ಈ ಹೆಸರನ್ನು ಕೇಳಿದರೆ ಕೆಲವರಿಗೆ ಯಾರಪ್ಪಾ ಹೀಗೆಲ್ಲಾ ಹೆಸರಿಟ್ಟುಕೊಂಡಿದ್ದಾರೆ ಎನಿಸಬಹುದು. ಆದರೆ ಯೂಟ್ಯೂಬ್ ನೋಡುವವರಿಗೆ ಈ ಹೆಸರು ಕೊಂಚ ಚಿರಪರಿಚಿತವಾಗಿರುತ್ತದೆ. ಯಾಕೆಂದರೆ, ಡಾ. ಬ್ರೋ ಎಂಬ ಕನ್ನಡ ವ್ಲೊಗ್ ಒಂದು ಇದೆ. ಒಮ್ಮೆ ಈ ಬ್ಲಾಗ್ ಗೆ ಭೇಟಿ ಕೊಡಿ. ನಿಮಗೆ ಆಶ್ಚರ್ಯವಾಗದೇ ಇರದು. ಈತ ಚಿಕ್ಕ ವಯಸ್ಸಿಗೆ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾನೆ. ಸ್ವಂತ ಹಣದಲ್ಲಿ ದೇಶ ಮಾತ್ರವಲ್ಲದೇ, ಹಲವು ದೇಶಗಳನ್ನು ಕೂಡ ಸುತ್ತಿದ್ದಾನೆ. ಯಾರು ಆ ಹುಡುಗ..? ಹೇಗೆ ಫೇಮಸ್ ಆದ..? ಹೀಗೆ ದೇಶ-ವಿದೇಶ ಸುತ್ತಲು ಕಾರಣವೇಣು ಎಂಬುದನ್ನು ನೋಡೋಣ ಬನ್ನಿ..

ಯೂ ಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ. ಚಿಕ್ಕ ವಯಸ್ದಸಿಗೆ ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಅಸಲಿಗೆ ಈ ಡಾಕ್ಟರ್ ಬ್ರೋ ಯಾರು? ಎಲ್ಲಿಯವನು? ದೇಶ ವಿದೇಶ ಸುತ್ತಲು ಇವನಿಗೆ ಹಣ ಎಲ್ಲಿಂದ ಬರುತ್ತೆ? ಈತನ ತಿಂಗಳ ಆದಾಯವಾದರೂ ಎಷ್ಟು? ಅಂತ ನಿಮಗೆ ಪ್ರಶ್ನೆ ಮೂಡಿರಬಹುದು. ಈ ರೀತಿ ಊರೂರು, ದೇಶ ವಿದೇಶ ಸುತ್ತುವುದು ಅಂದರೆ ಅದು ಸಾಮಾನ್ಯದ ವಿಷಯ ಅಲ್ಲ. ಈತನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
2016ರಲ್ಲಿ ಯುಟ್ಯೂಬ್ ಚಾನೆಲ್ ಆರಂಭಿಸಿದ್ದ ಡಾ ಬ್ರೋ!
ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ಕಾರು ಓಡಿಸಲು ಶುರು ಮಾಡಿದ್ದ. ಭರತನಾಟ್ಯ ಕಲಿತು ಅದರ ಕ್ಲಾಸ್ ನಡೆಸಿದ್ದ, ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿತ. 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್ ಚಾನೆಲ್ ಶುರು ಮಾಡಿದ್ದ. ಅದುವೇ ಡಿ ಆರ್ ಬ್ರೋ ಅಂದರೆ ಡಾ ಬ್ರೋ. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದ. ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ ವಿವರ ಕೊಡಲು ಶುರುಮಾಡಿದ್ದ, ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತಿದ್ದ.
ತಿಂಗಳಿಗೆ 22 ಲಕ್ಷ ದುಡಿತಾರಾ ಡಾ ಬ್ರೋ!
ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ ಖ್ಯಾತಿ ಗಗನ್ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್ ಒಂದೇ ಒಂದು ರೂಪಾಯಿ ತನ್ನ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ 27500 ಡಾಲರ್ ಅಂದರೆ 22 ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ.
ನೀವು ಕೂಡ ಈ ಮಾಹಿತಿಯನ್ನು ನೋಡಬಹುವು…