ರಾಘವೇಂದ್ರ ಹುಣಸೂರು ಈ ಒಂದು ಹೆಸರನ್ನು ನಿಮ್ಮಲ್ಲಿ ಎಷ್ಟು ಜನ ಕೇಳಿದ್ದಿರೋ ಗೊತ್ತಿಲ್ಲ. ಈ ಹೆಸರು ಗೊತ್ತಿಲ್ಲದವರಿಗು ಇವತ್ತು ಡಾಕ್ಟರ್ ಬ್ರೋ ಎನ್ನುವ ಹೆಸರು ಗೊತ್ತಿರುತ್ತದೆ. ರಾಘವೇಂದ್ರ ಹುಣಸೂರು ಜೀ ಕನ್ನಡದ ರೂವಾರಿಗಳಲ್ಲಿ ಒಬ್ಬರು ಇತ್ತೀಚಿಗೆ ನಿರ್ದೇಶಕರಾಗಿರುವಂತಹ ಯೋಗರಾಜ್ ಭಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇವರನ್ನು ಯಾವುದೋ ವಿಷಯಕ್ಕಾಗಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಂತಹ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಮೊನ್ನೆ ಡಾಕ್ಟರ್ ಬ್ರೋ ಅಲಿಯಾಸ್ ಈ ಗಗನ್ ಅವರನ್ನು ಯಾಕೆ ನಿಮ್ಮ ವೀಕೆಂಡ್ ವಿತ್ ರಮೇಶ್ ಗೆ ಕರೆಸಬಾರದು ಎಂದು ಒಬ್ಬ ನಿರೂಪಕ ಕೇಳಿದಾಗ ಅವರು ನಿಮ್ಮ ತಾಯಿಗೆ ಗೊತ್ತಾ. ಅವರು ನಿಮ್ಮ ಅಜ್ಜಿಗೆ ಗೊತ್ತಾ. ಅವರನ್ನು ಈ ಒಂದು ಕಾರ್ಯಕ್ರಮಕ್ಕೆ ಸದ್ಯಕ್ಕೆ ಕರೆಸುವುದಕ್ಕೆ ಯಾವುದೇ ರೀತಿಯ ಆಲೋಚನೆ ಮಾಡಿಲ್ಲ ಹೀಗೆ ಕೊಟ್ಟಂತಹ ಈ ಒಂದು ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಮುಖ್ಯವಾದoತಹ ವಿಷಯವಾಗಿದೆ.
ಈ ಒಂದು ವಿಷಯವಾಗಿ ಅನೇಕರು ಡಾಕ್ಟರ್ ಬ್ರೋ ಅವರನ್ನು ಬೆಂಬಲಿಸಿ ಕಡೆಗಣಿಸಿದಂತಹ ರಾಘವೇಂದ್ರ ಅವರನ್ನು ನಾನಾ ತರಹದಲ್ಲಿ ಕೆಣಕಿ ಟೀಕೆ ಮಾಡುತ್ತಿ ದ್ದಾರೆ. ಇತ್ತೀಚಿಗಷ್ಟೇ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 5ನೇ ಸೀಸನ್ ಪ್ರಾರಂಭವಾಗಿದೆ. ಇದರ ಮೊದಲ ಸ್ಪರ್ಧಿಯಾಗಿ ಕನ್ನಡದ ನಟಿ ರಮ್ಯಾ ಅವರು ಮೊನ್ನೆಯಷ್ಟೇ ಆಹ್ವಾನಿತರಾಗಿದ್ದರು. ನಟಿ ರಮ್ಯಾ ಅವರು ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದಂತಹ ಯಶಸ್ವಿ ಬಹುಭಾಷಾ ನಟಿ.
ಈ ಒಂದು ಕಾರ್ಯಕ್ರಮಕ್ಕೆ ಅವರು ಬರಬೇಕು ಎಂದು ಬಹಳ ಜನ ಆಸೆ ಪಟ್ಟಿದ್ದರು. ಆದರೆ ಈ ಒಂದು ಶೋ ನಲ್ಲಿ ರಮ್ಯ ಅವರು ಮಾತ್ರ ತಮ್ಮ ಮಾತೃಭಾಷೆ ಆದಂತಹ ಕನ್ನಡವನ್ನು ಮಾತನಾಡುವುದಕ್ಕಿಂತಲೂ ಹೆಚ್ಚು ಇಂಗ್ಲಿಷ್ ನಲ್ಲಿಯೇ ಮಾತನಾಡಿದ್ದು ಜಾಸ್ತಿ ಸಣ್ಣವರಿದ್ದಾಗಿನಿಂದಲೂ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದಿದವರು ಅಲ್ಲಿ ಅವರ ಮಾತೃ ಭಾಷೆ ಇರಲಿಲ್ಲ ಅಲ್ಲಿ ಅವರು ಹೆಚ್ಚು ಮಾತನಾಡುತ್ತಿದ್ದೆ ಇಂಗ್ಲಿಷ್ ಭಾಷೆಯಲ್ಲಿ.
ಆದರೆ ಇಂತಹ ಕಾರ್ಯಕ್ರಮಗಳಿಗೆ ಬಂದಾಗ ಇದು ಕರ್ನಾಟಕದ ಮೂಲೆ ಮೂಲೆ ಯಲ್ಲಿಯೂ ಜನ ನೋಡುವಂತಹ ಕಾರ್ಯಕ್ರಮ. ಇಲ್ಲಿ ಅವರು ಕನ್ನಡವನ್ನು ಹೆಚ್ಚು ಬಳಸಬಹುದಿತ್ತು ಅವರು ಕನ್ನಡತಿಯಾಗಿ ಕನ್ನಡವನ್ನು ಹೆಚ್ಚು ಬಳಸದೆ ಹೋದರೆ ಹೇಗೆ ಎಂದು ನಿಂದಿಸಿದ್ದು ಕೂಡ ನಿಜ. ಕನ್ನಡ ಮಾತನಾಡುವುದಕ್ಕೆ ಬಂದರು ಇಲ್ಲಿ ಹಿಂಜರಿಯುವವರನ್ನು ಇಲ್ಲಿಗೆ ಕರೆಯುವುದರ ಬದಲು ಡಾ. ಬ್ರೋ ಅವರು ಇಲ್ಲಿಗೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಎಷ್ಟೋ ಜನರ ಅಭಿಪ್ರಾಯವಾಗಿದೆ.
ವಿಶ್ವದ ಯಾವುದೇ ಮೂಲೆಗೆ ಹೋದರು ಕೂಡ ಅಲ್ಲಿಯ ಸ್ವಾರಸ್ಯ ಗಳನ್ನು ಅಪ್ಪಟ ಶುದ್ಧ ದೇಸಿ ಹಾಗೂ ಕನ್ನಡದಲ್ಲಿಯೇ ವಿವರಿಸುವಂತಹ ಇವರ ಕನ್ನಡದತನ ನಿಜಕ್ಕೂ ಶ್ಲಾಘನೀಯ. ಈ ಅರೆಬರೆ ಕಂಗ್ಲಿಷ್ ಶೋಗಳ ಬದಲು ಈ ಗಗನ್ ಅವರ ವರ್ಚಸ್ಸೇ ಎಷ್ಟೋ ಮೇಲು. ಡಾಕ್ಟರ್ ಬ್ರೋ ಇವತ್ತು ಇಡೀ ಕರುನಾಡಿಗೆ ಚಿರಪರಿಚಿತ ಕಳೆದ ವರ್ಷ ಇವರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿದ್ದೆವು.
ಇವತ್ತು ಈತನಿಗೆ ಯೂಟ್ಯೂಬ್, ಫೇಸ್ ಬುಕ್, ಹಾಗೂ ಇನ್ಸ್ಟಾಗ್ರಾಮ್ ಮುಂತಾದವು ಕಡೆ ಲಕ್ಷಾಂತರ ಜನ ಅನುಯಾಯಿಗಳು ಇದ್ದಾರೆ. ಅವರು ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದರೆ ಸಾಕು. ಲಕ್ಷಾಂತರ ವಿಕ್ಷಣೆಯನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.