ಶತ್ರು ದೇಶ ಚೀನಾವನ್ನು ಹಾಡಿ ಹೊಗಳಿದ ಡಾ. ಬ್ರೋ, ನೆಟ್ಟಿಗರಿಂದ ದೇಶ ದ್ರೋಹಿ ಪಟ್ಟ

ಕನ್ನಡದ ಯುಟ್ಯೂಬರ್ ಡಾಕ್ಟರ್ ಬ್ರೋ ದೇಶ-ವಿದೇಶ ಸುತ್ತಿ ಹೊಸ ಮಾಹಿತಿ ಕೊಡ್ತಾನೇ ಇದ್ದಾರೆ. ಮನೆಯಲ್ಲಿಯೇ ಕುಳಿತು ಬೇರೆ ಬೇರೆ ದೇಶದ ಚಿತ್ರ-ವಿಚಿತ್ರ ಮಾಹಿತಿಯನ್ನ ಕೂಡ ನೋಡಬಹುದು. ಆದರೆ ಕೆಲವೊಮ್ಮೆ ಯಡವಟ್ಟುಗಳನ್ನ ಮಾಡೋದು ಇದೆ. ಅದು ವೈರಲ್ ಕೂಡ ಆಗುತ್ತವೆ. ಆದರೆ ಈ ಸಲ ಡಾಕ್ಟರ್ ಬರೋ ಟೈಮ್ ನೆಟ್ಟಗಿಲ್ಲ ಅನಿಸುತ್ತದೆ.

ಯಾಕೆಂದ್ರೆ, ಸತ್ಯ ಹೇಳೋ ಭರದಲ್ಲಿಯೇ ಡಾಕ್ಟರ್ ಬ್ರೋ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅದೆಷ್ಟು ಅಂದ್ರೆ, ಡಾಕ್ಟರ್ ಬ್ರೋ ನೀನು ದೇಶದ್ರೋಹಿ ಅನ್ನುಮಟ್ಟಿಗೆ ಸಿಟ್ಟಾಗಿದ್ದಾರೆ. ಅಸಲಿಗೆ ಡಾಕ್ಟರ್ ಬ್ರೋ ಏನ್ ಮಾಡಿದ್ದಾರೆ ಅನ್ನುವ ಕುತೂಹಲ ನಿಮ್ಮಲ್ಲಿದ್ರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಡಾಕ್ಟರ್ ಬ್ರೋ ಇತೀಚಿಗೆ ಚೀನಾ ದೇಶಕ್ಕೆ ಹೋಗಿದ್ರು. ಅಲ್ಲಿಯ ಅಭಿವೃದ್ಧಿ ಕಂಡು ಬೆರಗಾಗಿದ್ದಾರೆ. ಅಷ್ಟೇ ಆಗಿದ್ರೆ ಎಲ್ಲರೂ ನೋಡಿ ಖುಷಿಪಡ್ತಿದರೋ ಏನೋ, ಆದರೆ ಡಾಕ್ಟರ್ ಬ್ರೋ ಮಿಸ್ಟರ್ ಗಗನ್ ಶ್ರೀನಿವಾಸ್ ಅಲ್ಲಿಯ ಅಭಿವೃದ್ಧಿಯನ್ನ ಕೊಂಡಾಡಿದ್ದಾರೆ. ಹೊಗಳಿದ್ರೂ ಇನ್ನೂ ಏನೋ ಆಗ್ತಿತ್ತೋ ಇಲ್ವೋ.

ಚೀನಾ ದೇಶದ ಅಭಿವೃದ್ಧಿಗೂ ಭಾರತದ ಅಭಿವೃದ್ಧಿಯನ್ನ ಹೋಲಿಕೆ ಮಾಡಿದ್ದಾರೆ. ಇದರಿಂದ ಸಹಜವಾಗಿಯೇ ಎಲ್ಲರಿಗೂ ಬೇಸರ ಆಗುತ್ತದೆ. ಅದರಲ್ಲೂ ಚೀನಾದ ಬೀಜಿಂಗ್‌ನ ಒಂದು ಗಲ್ಲಿ ಕೂಡ ತುಂಬಾ ಅಭಿವೃದ್ಧಿ ಆಗಿದೆ. ನಮ್ಮ ದೇಶ ಇಷ್ಟೊಂದು ಅಭಿವೃದ್ಧಿ ಆಗ್ಬೇಕು ಅಂದ್ರೆ, ಬರೋಬ್ಬರಿ 70 ವರ್ಷಗಳೇ ಬೇಕು ಅನ್ನೋದನ್ನ ಡಾಕ್ಟರ್ ಬ್ರೋ ಇಲ್ಲಿ ಹೇಳಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ರಾಜಕೀಯ ಜಾತಿ-ಧರ್ಮ ಹೀಗೆ ಇಂತಹ ವಿಷಯದಲ್ಲಿಯೇ ಎಲ್ಲರೂ ಕಳೆದು ಹೋಗುತ್ತಿದೆ. ಅಭಿವೃದ್ಧಿ ಅನ್ನೊದು ಇಲ್ವೇ ಇಲ್ಲ. ಆದರೆ ಚೀನಾ ದೇಶದ ರಾಜಕಾರಣಿಗಳು ದೇಶವನ್ನ ಅಭಿವೃದ್ಧಿ ಮಾಡೋದ್ರಲ್ಲಿಯೇ ಬ್ಯುಸಿ ಇರ್ತಾರೆ. ಹೊರತು ರಾಜಕೀಯ ಮಾಡೋದಿಲ್ಲ ಅಂತಲೂ ವಿಶ್ಲೇಷಣೆ ಮಾಡಿದ್ದಾರೆ.

ಇದ್ಹೋಗ್ಲಿ, ಚೀನಾ ದೇಶದ ಅಭಿವೃದ್ಧಿಯನ್ನ ಹೊಗಳೋಭರದಲ್ಲಿ ಇಲ್ಲಿಯ ಮಕ್ಕಳು ಸ್ಕಿಲ್‌ಗಳನ್ನು ಡಾಕ್ಟರ್ ಬ್ರೋ ಕೊಂಡಾಡಿದ್ದಾರೆ.ಮಕ್ಕಳಿಗೆ ಇಲ್ಲಿ ಶಾಲೆಯ ಹಂತದಲ್ಲಿಯೇ ಸ್ಕಿಲ್ಸ್ ಕಲಿಸಿಕೊಡ್ತಾರೆ. ಆದರೆ ನಮ್ಮಲ್ಲಿ ಇದು ಇಲ್ವೇ ಇಲ್ಲ ಅನ್ನುವ ಅರ್ಥದಲ್ಲಿಯೇ ಡಾಕ್ಟರ್ ಬ್ರೋ ಚುಚ್ಚಿದ್ದಾರೆ.ಆದರೆ, ತಮ್ಮ ಈ ಒಂದು ವಿಡಿಯೋ ನೋಡಿದ್ರೆ, ಕಂಡಿತವಾಗಿಯೂ ಜನ ಬೈಯುತ್ತಾರೆ ಅನ್ನುವ ಅಂದಾಜು ಗಗನ್ ಶ್ರೀನಿವಾಸ್‌ಗೆ ಇದ್ದೇ ಇದೆ.

ಆ ವಿಚಾರವನ್ನ ವಿಡಿಯೋದ ಆರಂಭದಲ್ಲಿಯೇ ಹೇಳ್ತಾರೆ. ಈ ಒಂದು ಮಾತು ತುಂಬಾನೆ ಬೇಸರದಲ್ಲಿ ಹೇಳುತ್ತೇನೆ. ನನ್ನ ಈ ಒಂದು ವಿಡಿಯೋ ನೋಡಿದ್ರೆ, ನೀವು ಸಿಟ್ಟಾಗುತ್ತೀರಾ, ಆದರೆ ಸತ್ಯ ಹೇಳಬೇಕಲ್ವೇ ಅಂತಲೂ ಡಾಕ್ಟರ್ ಬ್ರೋ ಹೇಳುತ್ತಾರೆ. ಡಾಕ್ಟರ್ ಬ್ರೋ ಈ ಒಂದು ವಿಡಿಯೋ ಮೂಲಕ ಇದೀಗ ಹೆಚ್ಚು ವೈರಲ್ ಆಗುತ್ತಿದ್ದಾರೆ. ದೇಶಪ್ರೇಮಿಗಳ ಕೆಂಗಣ್ಣಿಗೂ ಗುರಿ ಆಗಿದ್ದಾರೆ ಅಂತಲೂ ಹೇಳಬಹುದು.

You might also like

Comments are closed.