ರೆಸ್ಟೋರೆಂಟ್ ಗಳಲ್ಲಿ ಆಹಾರ ಸೇವಿಸಲು ಹೋಗುವ ಜನರು ಎಚ್ಚರದಿಂದ ಇರಬೇಕಾಗಿದೆ ಯಾಕೆಂದರೆ ನೀವು ಆಹಾರ ಸೇವಿಸಲು ಹೋಗುವ ರೆಸ್ಟೋರೆಂಟ್ ನಲ್ಲು ಬೌ ಬೌ ಬಿರಿಯಾನಿ ಇರಬಹುದು ಹೌದು ಗೆಳೆಯರೇ ಕಾಲ ಬದಲಾದಂತೆ ಜನರ ಮನಸ್ಥಿತಿ ಬದಲಾಗುತ್ತಿದೆ ಹಣ ಮಾಡಬೇಕೆಂದು ಇಲ್ಲಸಲ್ಲದ ಕೃತ್ಯ ದಂಧೆಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಆಹಾರ ದಂಧೆ ಕೂಡ ಸೇರಿಕೊಂಡಿದೆ ಮೈಸೂರಿನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಬೌ ಬೌ ಬಿರಿಯಾನಿ ದಂಧೆ ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ಈ ದಂಧೆ ನಡೆಯುತ್ತಿರುವುದನ್ನು ಕೇಳಿ ಅರಮನೆ ನಗರಿ ಮೈಸೂರಿನ ಜನರು ಬೆಚ್ಚಿಬಿದ್ದಿದ್ದಾರೆ. ಮೈಸೂರು ಎಂದರೆ ಎಲ್ಲರಿಗೂ ಒಂದು ಗೌರವವಿದೆ ಅಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ ಮೈಸೂರು ಜಿಲ್ಲೆಯ ಕೆ ಆರ್ ನಗರದ ಕೆ ಆರ್ ರವಿ ರವರ ಗಣೇಶ್ ರೆಸ್ಟೋರೆಂಟ್ ಮೇಲೆ ಆಹಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ರೆಸ್ಟೋರೆಂಟ್ ನಲ್ಲಿ ನಾಯಿ ಮಾಂಸದ ದಂಧೆ ಪ್ರಕರಣ ಬೆಳಕಿಗೆ ಬಂದಿದೆ
ದಾಳಿ ವೇಳೆ ರೆಸ್ಟೋರೆಂಟ್ ನಲ್ಲಿ ನಾಯಿ ಮಾಂಸ ಹಾಗೂ ಕೊಳೆತ ಕೋಳಿ ಮಾಂಸ ಪತ್ತೆಯಾಗಿದೆ ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು ರೆಸ್ಟೋರೆಂಟ್ಗೆ ಬೀಗ ಹಾಕಿದ್ದಾರೆ. ಪ್ರತಿಷ್ಠಿತ ಹೋಟೆಲ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಕೊಳೆತ ಮಾಂಸ, ಕಲ್ಲು ಕಟ್ಟಿದ ಮೀನು, ಬೂಸ್ಟ್ ಹಿಡಿದ ಮಸಾಲೆ ಇವುಗಳನ್ನೆಲ್ಲ ನೋಡಿ ಶಾಕ್ ಆಗಿದ್ದಾರೆ. ಮಾಲೀಕರಿಗೆ ದಂಡ ವಿಧಿಸಿ ರೆಸ್ಟೋರೆಂಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ತಾಲೂಕಿನ ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ತಾಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿ ಡಾಕ್ಟರ್ ಮಹೇಂದ್ರಪ್ಪ ಪುರಸಭೆಯ ಆರೋಗ್ಯ ಅಧಿಕಾರಿಗಳು ಈ ದಂಧೆಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ