ಇವರು ರೇಖಾ ಹಾಗೂ ರವಿ ಅಂತಾ, ರೇಖಾಳ ಗಂಡ ದೀಪಕ್ ಡಾಕ್ಟರ್ ಇದ್ದರೆ, ರವಿ ಆತನ ಆಸ್ಪತ್ರೆಯಲ್ಲಿ ಕಾಂಪೌಂಡರ್ ಕೆಲಸ ಮಾಡುತ್ತಿರುತ್ತಾನೆ. ಇನ್ನು ಇವರಿಬ್ಬರ ನಡುವೆ ಅಫೇರ್ ಇದ್ದರೆ ರೇಖಾ, ನೀನು ನನ್ನ ಹತ್ತಿರವಿದ್ದಾಗ ನನಗೆ ಬೇರೆ ಇನ್ನೇನು ನೆನಪೆ ಆಗುವುದಿಲ್ಲ ಅಂತ ರವಿಗೆ ಹೇಳುತ್ತಾಳೆ ಆಗ ರವಿ ನನಗೂ ಕೂಡ ಹಾಗೇನೆ, ಆದರೆ ನಿನ್ನ ಗಂಡ ನನ್ನನ್ನು ತುಂಬಾ ಕಾಡುತ್ತಾನೆ ಅಂತ ಹೇಳುತ್ತಾನೆ. ಅದೇ ಸಮಯಕ್ಕೆ ದೀಪಕ್ ರವಿಗೆ ಕಾಲ್ ಮಾಡಿದರೆ, ರವಿ ಈಗ ತುಂಬಾ ಲೇಟಾಗಿದೆ, ನಾನೀಗಲೇ ಹೋಗಲೇಬೇಕು ಅಂತ ಹೇಳುತ್ತಾನೆ. ಅವಾಗ ರೇಖಾ ಇನ್ನು ಸ್ವಲ್ಪ ಹೊತ್ತು ಇರು ಅಂತ ಹೇಳಿದರೆ ರವಿ ಬೇಡ ದೀಪಕ್ ಬಯ್ಯುತ್ತಾನೆ ಅಂತಾ ಓಡೋಡಿ ಆಸ್ಪತ್ರೆಗೆ ಹೋಗುತ್ತಾನೆ.
ಅವಾಗ ದೀಪಕ್, ನೀನು ಡೈಲಿ ಲೇಟಾಗಿ ಬಂದು ಪ್ರತಿದಿನ ಹೊಸ ಹೊಸ ನೆಪ ಹೇಳುತ್ತೀಯ ಇವತ್ತೇನು ಕಾರಣವಿದೆ ಅಂತ ಕೇಳುತ್ತಾನೆ. ಅವಾಗ ರವಿ ತುಂಬಾ ಟ್ರಾಫಿಕ್ ಇತ್ತು ಸರ್ ಅಂತ ಹೇಳುತ್ತಾನೆ. ಅವಾಗ ದೀಪಕ್ ಅದೇ ಟಾಪಿಕ್ ನಲ್ಲಿ ನಾನು ಕೂಡ ಬಂದಿದ್ದೇನೆ ನಾಳೆ ಏನಾದರೂ ನೀನು ಲೇಟಾಗಿ ಬಂದರೆ ಕೆಲಸದಿಂದ ಕಿತ್ತು ಹಾಕುತ್ತೇನೆ ಅಂತ ಬಯ್ಯುತ್ತಾನೆ. ನಂತರ ರೇಖಾ, ಊಟದ ಬುತ್ತಿ ಕಟ್ಟಿ ಇಟ್ಟಿದ್ದೇನೆ ತೆಗೆದುಕೊಂಡು ಹೋಗಲು ರವಿಯನ್ನು ಕಳುಹಿಸಿ ಅಂತ ದೀಪಕ್ ಗೆ ಕಾಲ್ ಮಾಡಿ ಹೇಳುತ್ತಾಳೆ. ಅವಾಗ ದೀಪಕ್ ರವಿಯನ್ನು ತನ್ನ ಮನೆಗೆ ಕಳುಹಿಸಿದರೆ, ರೇಖಾ ಅವಾಗಲೂ ರವಿಯ ಕೈ ಹಿಡಿದು ಒಳಗೆ ಕರೆಯುತ್ತಾಳೆ. ಅವಾಗ ರವಿ ನಿನ್ನಿಂದಾಗಿ ನಾನು ಡೈಲಿ ಬೈಯಿಸಿಕೊಳ್ಳಬೇಕಾಗಿದೆ ನನ್ನನ್ನು ಬಿಡು ಅಂತ ಬೈಯುತ್ತಾನೆ.
ಅವಾಗ ರೇಖಾ, ನಾನು ನಿನ್ನ ಕೋಪ ಈಗಲೇ ದೂರ ಮಾಡುತ್ತೇನೆ ಅಂತ ಹೇಳಿ ಅವನ ಜೊತೆ ರೋಮ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ಅದೇ ಸಮಯಕ್ಕೆ ದೀಪಕ್ ನ ಸಹೋದರಿ ಜಯಾ ಅಲ್ಲಿಗೆ ಬಂದರೆ ಇವರಿಬ್ಬರು ಅಲರ್ಟ್ ಆಗುತ್ತಾರೆ. ಇನ್ನು ಜಯಾಳ ಗಂಡ ತೀರಿ ಹೋಗಿದ್ದು, ದೀಪಕ್ ನೇ ಅವಳಿಗೆ ಪ್ರತಿ ತಿಂಗಳು ಖರ್ಚಿಗೆ ಹಣ ಕೊಡುತ್ತಿರುತ್ತಾನೆ ಹಾಗಾಗಿ ಜಯಾ ಹಣ ತೆಗೆದುಕೊಂಡು ಹೋಗಲು ಅಲ್ಲಿಗೆ ಬಂದರೆ, ರೇಖಾ ಈತ ದೀಪಕ್ ನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಊಟ ತೆಗೆದುಕೊಂಡು ಹೋಗಲು ಬಂದಿದ್ದ ಅಂತ ರವಿಯ ಬಗ್ಗೆ ಜಯಾಗೆ ಹೇಳುತ್ತಾಳೆ. ಅವಾಗ ಜಯಾ ಅಣ್ಣ ಹಣ ಕೊಟ್ಟು ಹೋಗಿದ್ದಾರಾ ಅಂತ ಕೇಳುತ್ತಾಳೆ.
ಅವಾಗ ರೇಖಾ, ಈ ತಿಂಗಳು ಇನ್ನು ಕೊಟ್ಟಿಲ್ಲ, ನೀನು ಈ ರೀತಿ ಪ್ರತಿ ತಿಂಗಳು ನಮ್ಮ ಹತ್ತಿರ ಹಣ ತೆಗೆದುಕೊಂಡು ಹೋಗಿ ನಮಗೆ ತೊಂದರೆ ಮಾಡುತ್ತಿದ್ದೀಯ ಅದರ ಬದಲಾಗಿ ಬೇರೆ ಎಲ್ಲಾದರೂ ಕೆಲಸ ನೋಡಿಕೋ ನಿನಗೆ ನಿನ್ನ ಖರ್ಚು ನೋಡಿಕೊಳ್ಳಲಾಗುವುದಿಲ್ಲವೇ ಅಂತ ಜಯಾಳನ್ನು ಬೈದು ಕಳಿಸುತ್ತಾಳೆ. ನಂತರ ದೀಪಕ್ ಮನೆಗೆ ಬಂದರೆ ರೇಖಾ, ನನಗೆ ಮನೆಯಲ್ಲಿ ಬೋರಾಗುತ್ತಿದೆ 4 ದಿನ ಎಲ್ಲಾದರೂ ಸುತ್ತಾಡಲು ಹೋಗೋಣವೇ ಅಂತ ಕೇಳುತ್ತಾಳೆ. ಅವಾಗ ದೀಪಕ್, ಸದ್ಯಕ್ಕೆ ನನ್ನ ಹತ್ತಿರ ಹಣವಿಲ್ಲ ಬೇಡ ಅಂತ ಹೇಳುತ್ತಾನೆ. ಅವಾಗ ರೇಖಾ, ನಾನು ಹಣ ಕೊಡುತ್ತೇನೆ ಬನ್ನಿ ಹೋಗೋಣ ಅಂತ ಹೇಳುತ್ತಾಳೆ. ಅವಾಗ ದೀಪಕ್ ನಿನ್ನ ಹತ್ತಿರ ಹಣ ಎಲ್ಲಿಂದ ಬಂತು ಅಂತ ಕೇಳುತ್ತಾನೆ.
ಅವಾಗ ರೇಖಾ, ಬೆಳಿಗ್ಗೆ ಜಯಾ ಹಣಕ್ಕಾಗಿ ಬಂದಿದ್ದಳು. ನಾನು ಈ ತಿಂಗಳು ನೀವು ಹಣ ಕೊಟ್ಟಿಲ್ಲ ಅಂತ ಅವಳಿಗೆ ಸುಳ್ಳು ಹೇಳಿ ಕಳಿಸಿದ್ದೇನೆ ಅಂತಾ ಹೇಳುತ್ತಾಳೆ. ಅವಾಗ ದೀಪಕ್ ಹೀಗೇಕೆ ಮಾಡಿದೆ ಅವಳಿಗೆ ಆ ಹಣ ಕೊಡು ಅಂತ ಹೇಳುತ್ತಾನೆ. ಅವಾಗ ರೇಖಾ, ನಿಮಗೆ ಬೇರೆಯವರಿಗೆ ಖರ್ಚು ಮಾಡಲು ಹಣವಿದೆ ನನಗೆ ಖರ್ಚು ಮಾಡಲು ಹಣ ಇಲ್ಲವೇ, ಜಯಾಳ ಗಂಡನ ಜೊತೆ ಇವಳು ಕೂಡ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಅಂತ ಬೈಯುತ್ತಾಳೆ. ಅವಾಗ ಕೋಪಗೊಂಡ ದೀಪಕ್ ರೇಖಾಳನ್ನು ಹೊಡೆಯಲು ಹೋದರೆ, ರೇಖಾ ನಮ್ಮ ಮನೆಯವರು ನಾನು ಅರೆಂಜ್ ಮ್ಯಾರೇಜ್ ಬೇಡವೆಂದರೂ ನಿಮ್ಮ ಜೊತೆ ಮದುವೆ ಮಾಡಿಬಿಟ್ಟರು ನನ್ನನ್ನು ಕೊಂದುಬಿಡಿ ಅಂತ ಹೇಳುತ್ತಾಳೆ.
ಅವಾಗ ದೀಪಕ್ ಒಳಗಡೆ ಹೋದರೆ ರೇಖಾ, ಸುಸೈಡ್ ಮಾಡಿಕೊಳ್ಳಲು ಹೋಗಿ, ನಾನೇಕೆ ಸಾಯಬೇಕು ಸತ್ತರೆ ದೀಪಕ್ ನೆ ಸಾಯಲಿ ಅಂತ ಮುನಿಸಿಕೊಂಡು ಮಲಗುತ್ತಾಳೆ. ಮರುದಿನ ದೀಪಕ್ ರೇಖಾ ಹತ್ತಿರ ಸಾರಿ ಕೇಳಿದರೆ, ರೇಖಾ ರವಿಗೆ ಕಾಲ್ ಮಾಡಿ ಕರೆಯಿಸಿ ನನಗೆ ತುಂಬಾ ಬೋರಾಗಿದೆ 4 ದಿನ ಹೊರಗಡೆ ಸುತ್ತಾಡಲು ಹೋಗೋಣ ಬಾ ಅಂತ ಹೇಳುತ್ತಾಳೆ. ಅವಾಗ ಖುಷಿಯಾದ ರವಿ ಆಯ್ತು ಅಂತ ಹೇಳಿ ದೀಪಕ್ ಹತ್ತಿರ ಹೋಗಿ ನನಗೆ 4 ದಿನ ರಜೆ ಬೇಕು ಅಂತ ಕೇಳುತ್ತಾನೆ. ಅವಾಗ ಕೋಪಗೊಂಡ ದೀಪಕ್ ರವಿಯನ್ನು ಕೆಲಸದಿಂದ ಕಿತ್ತು ಹಾಕಿ, ಮನೆಗೆ ಹೋದ ನಂತರ ಆ ವಿಷಯ ರೇಖಾಗೆ ಹೇಳಿದರೆ, ಅವಾಗಲೇ ಜಯಾ ದೀಪಕ್ ಗೆ ಕಾಲ್ ಮಾಡಿ ನನಗೆ ಅತ್ತಿಗೆ ಹಣ ಕೊಡಲಿಲ್ಲ ಅಂತ ಹೇಳುತ್ತಾಳೆ.
ಅವಾಗ ದೀಪಕ್, ನಾನು ಜಯಾಗೆ ಸಾಯುವವರೆಗೆ ಹಣ ಕೊಡುತ್ತೇನೆ ನೀನು ನಾಳೆ ಜಯಾಳ ಮನೆಗೆ ಹೋಗಿ ನಾನು ಕೊಟ್ಟ ಹಣ ಕೊಟ್ಟು ಬಾ ಅಂತ ಹೇಳುತ್ತಾನೆ. ಅವಾಗ ರೇಖಾ, ಪ್ರತಿ ತಿಂಗಳು ಹೀಗೆ ಹಣ ಯಾರು ಕೊಡುತ್ತಾರೆ ನಾನಂತೂ ಕೊಡಲ್ಲ ಅಂತ ಹೇಳುತ್ತಾಳೆ. ಅವಾಗ ದೀಪಕ್ ನೀನು ನಮ್ಮ ಮಧ್ಯೆ ಬರಬೇಡ ಅಂತ ಬೈದು ಕೋಪಿಸಿಕೊಂಡು ಹೋಗುತ್ತಾನೆ. ಮರುದಿನ ರವಿ ನಿನ್ನಿಂದಾಗಿ ನನ್ನ ಕೆಲಸ ಹೋಯಿತು, ಈ ದೀಪಕ್ ಗೆ ಅದೆಷ್ಟು ಸೊಕ್ಕಿದೆ ಅವನು ಇಲ್ಲದಿದ್ದರೆ ಅದೆಷ್ಟೋ ಚೆನ್ನಾಗಿರುತ್ತಿತ್ತು ಅಂತ ರೇಖಾಗೆ ಹೇಳುತ್ತಾನೆ. ಅವಾಗ ರೇಖಾ, ಅವನಿಂದ ನನಗೂ ಕೂಡ ಸಾಕಾಗಿ ಹೋಗಿದೆ ನಿನಗೆ ಯಾರಾದರೂ ರೌಡಿಗಳು ಪರಿಚಯವಿದ್ದರೆ ಹೇಳು ನಾನು ಹಣ ಕೊಡುತ್ತೇನೆ ಅವನನ್ನು ಸುಪಾರಿ ಕೊಟ್ಟು ಕೊಲ್ಲಿಸೋಣ, ಆಮೇಲೆ ಈ ಆಸ್ತಿಯಲ್ಲ ನಮ್ಮದಾಗುತ್ತದೆ ಅಂತ ಹೇಳುತ್ತಾಳೆ.
ಅವಾಗ ಖುಷಿಯಾದ ರವಿ, ಸಿಟಿಯ ರೌಡಿಗಳಿಗೆ ದೀಪಕ್ ನ ಸುಪಾರಿ ಕೊಡುತ್ತಾನೆ. ನಂತರ ಅವರು 5 ಲಕ್ಷಕ್ಕೆ ಡೀಲ್ ಒಪ್ಪಿಕೊಂಡು ದೀಪಕನನ್ನು ಕಿಡ್ನ್ಯಾಪ್ ಮಾಡಿಕೊಂಡು ತಮ್ಮ ಬಾಸ್ ಸನ್ನಿ ಹತ್ರ ಕರೆದುಕೊಂಡು ಹೋಗುತ್ತಾರೆ. ಅವಾಗ ದೀಪಕ್ ನನ್ನನ್ನು ಕೊಲ್ಲಬೇಡಿ ಅಂತ ಸನ್ನಿ ಹತ್ರ ಬೇಡಿಕೊಳ್ಳುತ್ತಾನೆ, ಆದರೆ ಕೇಳದ ಸನ್ನಿ ಫೈರ್ ಮಾಡುತ್ತಾನೆ. ಇನ್ನು ಈಕಡೆ ರವಿ ಹಾಗು ರೇಖಾ, ಇನ್ನು ನಮ್ಮ ಮದ್ಯೆ ಯಾರೂ ಬರಲ್ಲ ಅಂತ ಖುಷಿಯಿಂದ ಸ್ವರ್ಗಸುಖ ಕಾಣುತ್ತಾರೆ. ಅವಾಗ ಆ ರೌಡಿಗಳು ದೀಪಕ್ ನ ಶವದ ಫೋಟೋ ರವಿಗೆ ಸೆಂಡ್ ಮಾಡಿದರೆ ಅವರಿಬ್ಬರು ಖುಷಿಯಿಂದ ಕುಣಿದಾಡುತ್ತಾರೆ. ಅದೇ ಸಮಯಕ್ಕೆ ಜಯಾ ಅಲ್ಲಿಗೆ ಬಂದರೆ ರವಿ ಅಡಗಿಕೊಳ್ಳುತ್ತಾನೆ.
ಅವಾಗ ರೇಖಾ ಏಕೆ ಬಂದಿದ್ದು ಹೇಳು ಅಂತಾ ಜಯಾಳನ್ನು ಕೇಳುತ್ತಾಳೆ. ಅವಾಗ ಜಯಾ ಅಣ್ಣನ ಫೋನ್ ಆಫ್ ಬರುತ್ತಿದೆ, ಎಲ್ಲಿಗೆ ಹೋಗಿದ್ದಾರೆ ಅಂತಾ ಕೇಳುತ್ತಾಳೆ. ಅವಾಗ ರೇಖಾ ಅವರು ನಿನ್ನೇಯೇ ಡೆಲ್ಲಿಗೆ ಹೋಗಿದ್ದಾರೆ, ನೀನಿನ್ನು ಹೊರಡು ಅಂತಾ ಹೇಳಿ ಜಯಾಳನ್ನು ಕಳುಹಿಸುತ್ತಾಳೆ. ಅವಾಗ ಜಯಾ ಅವಳನ್ನು ಡೌಟ್ ನಿಂದ ನೋಡುತ್ತಾ ಹೋಗುತ್ತಾಳೆ. ನಂತರ ಸನ್ನಿ ರವಿಗೆ ಕಾಲ್ ಮಾಡಿ ಇಷ್ಟು ದೊಡ್ಡ ಡಾಕ್ಟರ್ ನ ಸುಪಾರಿ ಕೊಟ್ಟು ಕೇವಲ 5 ಲಕ್ಷ ಹಣ ಮಾತ್ರ ಕೊಟ್ಟಿದ್ದೀಯಾ, ನನಗೆ ಇನ್ನು10 ಲಕ್ಷ ಹಣ ಬೇಕು ನಾಳೆಯ ಒಳಗಾಗಿ ಹಣ ರೆಡಿ ಮಾಡು ಇಲ್ಲದಿದ್ದರೆ ನಿನ್ನನ್ನು ಕೂಡ ಕೊಲ್ಲುತ್ತೇನೆ ಅಂತಾ ಹೇಳಿ ಕಾಲ್ ಕಟ್ ಮಾಡುತ್ತಾನೆ. ಅವಾಗ ಹೆದರಿದ ರವಿ ರೇಖಾಗೆ ವಿಷಯ ತಿಳಿಸುತ್ತಾನೆ.
ಅವಾಗ ರೇಖಾ ಹೇಗೂ ದೀಪಕ್ 1 ಕೋಟಿ ಹಣದ ಇನ್ಶೂರೆನ್ಸ್ ಮಾಡಿಸಿದ್ದರು ನೀನು ಸನ್ನಿ ಹತ್ತಿರ 1 ವಾರ ಟೈಮ್ ತೆಗೆದುಕೋ ನಾನು ಇನ್ಶೂರೆನ್ಸ್ ಹಣ ತೆಗೆಯಲು ಏನಾದರೂ ಪ್ಲಾನ್ ಮಾಡುತ್ತೇನೆ ಅಂತಾ ಹೇಳುತ್ತಾಳೆ. ನಂತರ ರವಿ ಸನ್ನಿ ಹತ್ತಿರ ಹೋಗಿ 1 ವಾರ ಟೈಮ್ ಕೇಳಿದರೆ ಸನ್ನಿ ಕೇವಲ 2 ದಿನ ಮಾತ್ರ ಟೈಮ್ ಕೊಡುತ್ತಾನೆ. ಇನ್ನು ಈಕಡೆ ರೇಖಾ ಇನ್ಸೂರೆನ್ಸ್ ಕಂಪನಿಯವರನ್ನು ಕಾಂಟಾಕ್ಟ್ ಮಾಡಿ ದೀಪಕ್ ನ ಹಣ ತೆಗೆಯಲು ನೋಡುತ್ತಾಳೆ ಅವಾಗ ಅಲ್ಲಿ ದೀಪಕ್ ನಾಮಿನಿಯಾಗಿ ಜಯಾಳ ಹೆಸರು ಹಾಕಿದ್ದು, ಇನ್ಶೂರೆನ್ಸ್ ಕಂಪನಿಯವರು ಈ ಹಣ ನಿಮಗೆ ಸಿಗಬೇಕಾದರೆ ಜಯಾವರ ಸಿಗ್ನೇಚರ್ ಬೇಕೇ ಬೇಕು ಅಂತ ಹೇಳುತ್ತಾರೆ. ಅವಾಗ ರೇಖಾ ಹೋಗಿ ಆ ವಿಷಯವನ್ನು ರವಿಗೆ ತಿಳಿಸಿದರೆ ರವಿ, ದೀಪಕ್ ಸತ್ತ ಮೇಲೆಯೂ ನಮಗೆ ಕಾಟ ಕೊಡುವುದನ್ನು ಬಿಡುತ್ತಿಲ್ಲ ಅಂತ ಹೇಳುತ್ತಾನೆ.
ಅವಾಗ ರೇಖಾ, ಈಗ ನಾವು ಜಯಾ ಹತ್ತಿರ ಹೇಗಾದರೂ ಮಾಡಿ ಸಿಗ್ನೇಚರ್ ಮಾಡಿಸಿಕೊಳ್ಳಲೇ ಬೇಕು ಅಂತ ಹೇಳಿ ಜಯಾಗೆ ಕಾಲ್ ಮಾಡಿ ಅರ್ಜೆಂಟಾಗಿ ಮನೆಗೆ ಬಾ ಅಂತ ಅಳುತ್ತ ಹೇಳುತ್ತಾಳೆ. ನಂತರ ಜಯಾ ಅಲ್ಲಿಗೆ ಹೋಗಿ ಏಕೆ ಏನಾಯ್ತು ಅಂತಾ ಕೇಳುತ್ತಾಳೆ. ಅವಾಗ ರೇಖಾ ದೀಪಕ್ ಅವರು ಕಾರ್ ಆಕ್ಸಿಡೆಂಟ್ ನಲ್ಲಿ ತೀರಿ ಹೋದರು, ನಾನು ನಿನಗೆ ಇದುವರೆಗೆ ತುಂಬಾ ನೋವು ಕೊಟ್ಟಿದ್ದೇನೆ ನೀನು ಅದನ್ನೇನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ, ಈ ಇನ್ಶೂರೆನ್ಸ್ ಪೇಪರ್ಸ್ ಮೇಲೆ ಸೈನ್ ಮಾಡು. ಇದರಿಂದ ಉಳಿದ ನನ್ನ ಜೀವನ ಕೂಡ ಆರಾಮಾಗಿ ಕಳಿಯುತ್ತದೆ ಅಂತಾ ಹೇಳುತ್ತಾಳೆ. ಅವಾಗ ಜಯಾ ಅಲ್ಲಿ ಅಣ್ಣ ಸತ್ತಿದ್ದರೆ ನಿಮಗೆ ಅವನ ಹಣ ಬೇಕಾಗಿದೆಯಾ ನಾನು ಈ ಸೈನ್ ಮಾಡಲ್ಲ ಅಂತಾ ಹೇಳುತ್ತಾಳೆ.
ಅವಾಗ ಕೋಪಗೊಂಡ ರೇಖಾ ಹಾಗಾದರೆ ನಿನ್ನನ್ನು ಕೊಲ್ಲದೆ ಬಿಡಲ್ಲ ಅಂತಾ ಹೇಳಿ ರವಿಯನ್ನು ಕರೆದು ಇಬ್ಬರು ಸೇರಿ ಜಯಾಳನ್ನು ಕೊಲ್ಲಲು ನೋಡುತ್ತಾರೆ. ಅವಾಗ ದೀಪಕ್ ಅಲ್ಲಿಗೆ ಬಂದು ಅವರಿಬ್ಬರನ್ನು ತಡೆಯುತ್ತಾನೆ. ಅವಾಗ ಅವರಿಗೆ ಶಾಕ್ ಆದರೆ, ಈ ಹಿಂದೆ ಸನ್ನಿ ದೀಪಕ್ ನನ್ನು ನೋಡಿ, ಅವನನ್ನು ಕೊಲ್ಲದೇ ನಾನು ನಿಮಗೆ ಗುರುತು ಸಿಗಲಿಲ್ಲವೇ, ನಾನು 1 ವರ್ಷದ ಹಿಂದೆ ಗುoಡಿನಿಂದ ಗಾಯಗೊಂಡು ನಿಮ್ಮ ಹತ್ರ ಬಂದಾಗ ನೀವು ಫ್ರೀಯಾಗಿ ನನಗೆ ಟ್ರೀಟ್ಮೆಂಟ್ ಮಾಡಿದ್ರಿ, ನಾನು ನಿಮ್ಮ ಉಪ್ಕಾರ ಇನ್ನು ಮರೆತಿಲ್ಲ ಹಾಗಾಗಿ ನಿಮ್ಮನ್ನು ಜಿವಂತವಾಗಿ ಬಿಡುತ್ತಿದ್ದೇನೆ. ಅಂತಾ ಹೇಳಿದರೆ ದೀಪಕ್ ಅವನಿಗೆ ಥ್ಯಾಂಕ್ಸ್ ಹೇಳಿ ನನ್ನ ಸುಪಾರಿ ಯಾರು ಕೊಟ್ಟಿದ್ದು ಅಂತಾ ಕೇಳಿರುತ್ತಾನೆ.
ಅವಾಗ ಸನ್ನಿ ರವಿಯ ಹೆಸರು ಹೇಳಿ ಅವನೊಬ್ಬನೆ ಹೀಗೆ ಮಾಡಲು ಸಾಧ್ಯವಿಲ್ಲ, ನೀವು ಸತ್ತ ಹಾಗೆ ಆಕ್ಟ್ ಮಾಡಿ ನಾವು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅವನ ಹಿಂದೆ ಯಾರಿದ್ದಾರೆ ನೋಡೋಣ ಅಂತಾ ಹೇಳಿ ದೀಪಕ್ ಸತ್ತ ಹಾಗೆ ರವಿಗೆ ಫೇಕ್ ಫೋಟೋ ಕಳುಹಿಸಿ ಜಾಸ್ತಿ ಹಣಕ್ಕಾಗಿ ಕೇಳಿರುತ್ತಾರೆ, ಅವಾಗ ಜಯಾ ದೀಪಕ್ ಗೆ ಕಾಲ್ ಮಾಡಿದರೆ ದೀಪಕ್ ನಡೆದ ವಿಷಯ ಅವಳಿಗೆ ತಿಳಿಸಿ ಒಮ್ಮೆ ಮನೆಯ ಕಡೆಗೆ ಹೋಗಿ ಅಲ್ಲಿ ಏನು ನಡೆಯುತ್ತಿದೆ ನೋಡಿಕೊಂಡು ಬರಲು ಹೇಳಿರುತ್ತಾನೆ, ಹಾಗಾಗಿ ಜಯಾ ಇಲ್ಲಿಗೆ ಬಂದಿರುತ್ತಾಳೆ. ನಂತರ ದೀಪಕ್ ಹೀಗೇಕೆ ಮಾಡಿದೆ ಅಂತಾ ರೇಖಾಳ ಕೆನ್ನೆಗೆ ಹೊಡೆಯುತ್ತಾನೆ.
ಅವಾಗ ರೇಖಾ ನನಗೆ ಅರೇಂಜ್ ಮ್ಯಾರೇಜ್ ಇಷ್ಟವಿರಲಿಲ್ಲ ಅದಕ್ಕೆ ಅಂತಾ ಹೇಳಿದರೆ ದೀಪಕ್ ರವಿ ಹಾಗು ರೇಖಾ ಇಬ್ಬರನ್ನು ಪೊಲೀಸರಿಗೆ ಒಪ್ಪಿಸುತ್ತಾನೆ. ಕಥೆ ಇಲ್ಲಿಗೆ ಮುಗಿಯುತ್ತದೆ. ಈ ವಿಡಿಯೋವನ್ನು ಪೂರ್ತಿ ನೋಡಲು ” ಶಿಮಾರು ಟಿವಿ ” ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ” ಕಿಲ್ ದಿಲ್ ” ಎಂದು ಹುಡುಕಿ ನೋಡಬಹುದು.