ಇತ್ತೀಚಿನ ದಿನಗಳಲ್ಲಿ ಯಾರ ಪ್ರಾಣ ಪಕ್ಷಿ ಯಾವಾಗ ಹಾರಿ ಹೋಗುತ್ತದೆ ಎಂದು ಹೇಳುವುದಕ್ಕೆ ಅಸಾಧ್ಯವಾಗಿಬಿಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತಹ ಆರೋಗ್ಯವಂತ ಜೀವವು ಕೂಡ ಅಕಾಲಿಕವಾಗಿ ಹೋದ ನಂತರ ಆರೋಗ್ಯವಂತ ಜೀವನ ಕ್ರಮದ ಕುರಿತಂತೆ ಎಲ್ಲರಿಗೂ ಕೂಡ ನಂಬಿಕೆ ಹೋಗಿಬಿಟ್ಟಿದೆ. ಅದೇ ರೀತಿ ಇತ್ತೀಚಿಗಷ್ಟೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ನೀಲಿ ಶರ್ಟಿನ ವ್ಯಕ್ತಿ ಅರ್ಜುನ್ ಅದ್ನಾಯಕ್ ಎನ್ನುವ ಡಾಕ್ಟರ್ ಬಳಿ ತಮ್ಮ ಆರೋಗ್ಯ ತಪಾಸಣೆಗಾಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ರೋಗಿಯ ಹೆಲ್ತ್ ಫೈಲ್ ಸೇರಿದಂತೆ ಕೆಲವೊಂದು ವಿಚಾರಗಳ ಬಗ್ಗೆ ಡಾಕ್ಟರ್ ವಿಚಾರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿಯೇ ಈ ನೀಲಿ ಶರ್ಟಿನ ವ್ಯಕ್ತಿಗೆ ಹೃದಯದಲ್ಲಿ ಏರುಪೇರಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಆದರೆ ಅದನ್ನು ಬಾಯಿ ಬಿಟ್ಟು ಹೇಳಲು ಅವರಿಗೆ ಸಾಧ್ಯವಾಗುವುದಿಲ್ಲ.
ಈ ಸಂದರ್ಭದಲ್ಲಿ ಅವರು ಟೇಬಲ್ ಅನ್ನು ತಟ್ಟುವ ಮೂಲಕ ವೈದ್ಯರಿಗೆ ತಮ್ಮ ಹೃದಯದಲ್ಲಿ ಏರುಪೇರು ಆಗುತ್ತಿರುವ ಕುರಿತಂತೆ ಸೂಚನೆಯನ್ನು ಸನ್ನೆಯ ಮೂಲಕ ನೀಡುತ್ತಾರೆ. ಕೂಡಲೆ ಕಾರ್ಯಪ್ರವೃತ್ತರಾದ ಡಾ. ಅರ್ಜುನ್ ರೋಗಿಯ ಎದೆಗೆ ಸಿಪಿಆರ್ ಮಾಡುತ್ತಾರೆ. ಸಿಪಿಆರ್ ಎಂದರೆ ಹೃದಯಘಾತಕ್ಕೆ ಒಳಗಾದ ವ್ಯಕ್ತಿಗೆ ಕೂಡಲೇ ಸಿಗುವಂತಹ ಪ್ರಥಮ ಚಿಕಿತ್ಸೆಯಾಗಿದೆ. ಹೃದಯಕ್ಕೆ ಇಂತಹ ಏರುಪೇರಾದಾಗ ರೋಗಿಗಳಿಗೆ ಕೂಡಲೇ ಪ್ರಥಮ ಚಿಕಿತ್ಸೆ ಸಿಗದ ಕಾರಣ ಮರಣವನ್ನು ಹೊಂದುತ್ತಾರೆ.
ಇಂತಹ ಪ್ರಥಮ ಚಿಕಿತ್ಸೆ ಅಂದರೆ ಸಿ ಪಿ ಆರ್ ಮೂಲಕ ಹತ್ತರಲ್ಲಿ ಒಂಬತ್ತು ರೋಗಿಗಳನ್ನು ಕೂಡಲೇ ಉಳಿಸಬಹುದಾದ ಸಾಧ್ಯತೆ ಇದೆ ಸಿ ಪಿ ಆರ್ ಸಿಗದ ಕಾರಣದಿಂದಾಗಿ ಅವರು ಮರಣವನ್ನು ಹೊಂದುತ್ತಾರೆ. ಸಿಪಿಆರ್ ಎಂದರೆ ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಸಮಸ್ಯೆ ಅಥವಾ ನಾಡಿ ಮಿಡಿತ ಏರುಪೇರುಗೊಂಡಾಗ ಹೃದಯದ ಭಾಗಕ್ಕೆ ನಿಯಮಿತ ರೀತಿಯಲ್ಲಿ ಒತ್ತುವುದಾಗಿದೆ. ಹಲವಾರು ಬಾರಿ ಇದರ ಸಹಾಯದಿಂದಾಗಿ ಪ್ರಾಣವನ್ನು ಕಳೆದುಕೊಳ್ಳಬೇಕಾಗಿರುವ ರೋಗಿಗಳು ಕೂಡ ಜೀವವನ್ನು ಪಡೆದುಕೊಂಡಿರುವುದು ತಿಳಿದು ಬಂದಿದೆ ಅದರಲ್ಲಿ ಈ ವೈರಲ್ ಆಗುತ್ತಿರುವ ವಿಡಿಯೋ ಕೂಡ ಒಂದಾಗಿದೆ. ಸದ್ಯಕ್ಕೆ ಡಾಕ್ಟರ್ ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದಾರೆ ಎಂದರೆ ತಪ್ಪಾಗಲಾರದು.