
ಬದುಕು ಒಂದೇ ರೀತಿ ಇರುವುದಿಲ್ಲ, ಇಲ್ಲಿ ಎಲ್ಲರ ಬದುಕಿನಲ್ಲಿ ಏರಿಳಿತಗಳಿವೆ. ಆದರೆ ಶ್ರೀಮಂತರಿಗೆ ಹಾಗೂ ಬಡವರಿಗೆ ತುಂಬಾನೇ ವ್ಯತ್ಯಾಸವಿದೆ. ಶ್ರೀಮಂತನಿಗೆ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ಯೋಚನೆ. ಆದರೆ ಬಡವನಿಗೆ ಇವತ್ತಿನ ದಿನ ಮೂರು ಹೊತ್ತಿನ ಊಟದ ಏನು ಮಾಡುವುದು ಎನ್ನುವ ಯೋಚನೆ. ಮಧ್ಯಮ ವರ್ಗದ ಜನರಿಗೆ ಒಂದಲ್ಲ ಒಂದು ಯೋಚನೆಗಳು ಇದ್ದೆ ಇರುತ್ತದೆ.
ಆದರೆ ಎಲ್ಲವನ್ನು ಸರಿದೂಗಿಸಿಕೊಂಡು ನಾಳೆಯ ಬದುಕಿಗಾಗಿ ಕಷ್ಟ ಪಡುತ್ತಾರೆ. ಹೌದು, ಶ್ರೀಮಂತ ವ್ಯಕ್ತಿಯ ವಿಚಾರದಲ್ಲಿ ಆ ರೀತಿಯ ಯಾವುದೇ ಸಮಸ್ಯೆಗಳು ಇಲ್ಲ. ಇದ್ದ ಹಣವನ್ನು ಹೇಗೆ ಖರ್ಚು ಮಾಡುವುದು ಎಂದು ಯೋಚಿಸುತ್ತಾನೆ. ರಾಜಕಾರಣಿಗಳು ಇದೇ ಪಟ್ಟಿಗೆ ಸೇರುತ್ತಾನೆ ಎನ್ನಬಹುದು, ಆದರೆ ಎಲ್ಲಾ ರಾಜಕಾರಣಿಗಳೂ ಈ ಪಟ್ಟಿಗೆ ಬರುವುದಿಲ್ಲ. ಅಂದಹಾಗೆ, ಡಿಕೆ ಶಿವ ಕುಮಾರ್ ಯವರು ಒಬ್ಬ ರಾಜಕಾರಣಿ, ಅದರ ಜೊತೆಗೆ ಸಾಕಷ್ಟು ಆಸ್ತಿಯನ್ನು ಹೊಂದಿದ್ದಾರೆ.
ಡಿ. ಕೆ. ಶಿವಕುಮಾರ್ ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಹ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕನಕಪುರ ತಾಲೂಕು ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರ. ಸಹೋದರ ಡಿ. ಕೆ. ಸುರೇಶ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು.18ನೇ ವಯಸ್ಸಿನಲ್ಲಿಯೇ ಎನ್‌ಎಸ್‌ಯುಐ ಸೇರಿದ ಡಿ. ಕೆ. ಶಿವಕುಮಾರ್ 1981-83ರ ತನಕ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಹೀಗೆ ರಾಜಕೀಯರಂಗಕ್ಕೆ ಧುಮುಕಿ ಯಶಸ್ವಿಯಾದರು. ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಡಿ. ಕೆ. ಶಿವಕುಮಾರ್ ಪಕ್ಷ ವಹಿಸಿದ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. 2020 ಮಾರ್ಚ್ 11ರಂದು ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ರಾಜಕೀಯ ಸಾಧನೆಯ ಜೊತೆಗೆ ಇತ್ತೀಚೆಗಷ್ಟೇ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕೂಡ ಸೇರುತ್ತಾರೆ. ಅವರ ಬಳಿ ಕೋಟಿಗಟ್ಟಲೆ ಹಣ, ಆಸ್ತಿಯಿದೆ. ಇತ್ತೀಚೆಗಷ್ಟೆ ಮಾಜಿ ಸಚಿವ ಡಿಕೆಶಿ ಯವರು ಮೊದಲನೇ ಪುತ್ರಿ ಐಶ್ವರ್ಯ ಅವರ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮಗ ಅಮರ್ಥ್ಯ ಜೊತೆಯಲ್ಲಿ ಕೊರೋನದ ಸಮಯದಲ್ಲಿಯೂ ಶೆರಟಾನ್ ಹೋಟೆಲ್ ನಲ್ಲಿ ವಿಜೃಂಭಣೆಯಿಂದ ಮದುವೆ ಮಾಡಿಕೊಟ್ಟಿದ್ದರು.
ಆದರೆ ಇದೀಗ ಮಗಳಿಗಾಗಿ ದುಬಾರಿ ಬೆಲೆಯ ಮಾಲ್ ಕಟ್ಟಿಸಿದ್ದಾರೆ. ಹೌದು ಬೆಂಗಳೂರಿನ ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ಹೊಸದಾಗಿ ನಿರ್ಮಾಣ ಆಗಿರುವ ಈ ಮಾಲ್ ಗೆ ಲುಲು ಹೈಪರ್ ಮಾರುಕಟ್ಟೆ ಎಂದು ಹೆಸರಿಟ್ಟಿದ್ದಾರೆ. ಈ ಗ್ಲೋಬಲ್ ಮಾಲ್ ನಿರ್ಮಾಣವಾದ ಹೈಪರ್ ಮಾರ್ಕೆಟ್, ಒಟ್ಟು 14 ಎಕರೆಯಲ್ಲಿ ಇದ್ದು, 5 ಅಂತಸ್ತಿನ ಕಟ್ಟಡದ 8 ಲಕ್ಷ ಚದರಡಿ ವಿಸ್ತೀರ್ಣದಲ್ಲಿ 132 ಸ್ಟೋರ್ ಗಳು ಹಾಗೂ ವಿವಿಧ ರೀಟೇಲ್ ಬ್ರಾಂಡ್ ಗಳ 17 ಕಿಯೋಸ್ಕ್ ಗಳಿವೆ.ಒಟ್ತು 23 ಔಟ್ ಲೆಟ್’ಗಳಿವೆ. ಜೊತೆಗೆ ಇಂಡೋರ್ ಎಂಟರ್ ಟೈನ್ ಮೆಂಟ್ ಆದ ಫಂಟೂರಾ ಇದ್ದು, ಇದರ ವಿಸ್ತೀರ್ಣ 60 ಸಾವಿರ ಚದರಡಿ ವಿಸ್ತೀರ್ಣ. ಅಷ್ಟೇ ಅಲ್ಲದೇ, ಇಲ್ಲಿ ರೋಲರ್ ಗ್ಲೈಡರ್, ಟ್ಯಾಗ್ ಅರೆನಾ, ಅಡ್ವೆಂಚರ್ ಕೋರ್ಸ್, ಟ್ರ್ಯಾಂಪೋಲೈನ್, ವಿ ಆರ್ ರೈಡ್ಸ್ 9 ಡಿ ಥಿಯೇಟರ್, ಮತ್ತು ಬಂಪರ್ ಕಾರ್ ಗಳಂತಹ ಆಕರ್ಷಣೆಗಳಿವೆ.
ಈ ಯುಎಇ ಮೂಲದ ಲುಲು ಮಾರುಕಟ್ಟೆಯನ್ನು ಮಾಜಿ ಕೇಂದ್ರ ಸಚಿವ ಅಂದರೆ ಡಿಕೆಶಿ ಯವರ ಬೀಗರಾದ ಎಸ್ ಎಂ ಕೃಷ್ಣ ಅವರೇ ಉದ್ಘಾಟನೆ ಮಾಡಿದ್ದರು. ಈಗಾಗಲೇ ಬೆಂಗಳೂರಿನಲ್ಲಿ ಅತೀ ದೊಡ್ಡ ಮಾಲ್ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಮಗಳಿಗಾಗಿ ದುಬಾರಿ ಬೆಲೆಯ ಮಾಲ್ ಕಟ್ಟಿಸಿಕೊಡುವ ಮೂಲಕ ಸುದ್ದಿಯಾಗಿದ್ದಾರೆ.
Comments are closed.