ನಿಮ್ಮ ಜಗಳದಲ್ಲಿ ನನ್ನ ಮಗನ ಹೆಸರು ತರಬೇಡ,ಅವರಿಬ್ಬರೂ ಮದುವೆ ಆಗಬಹುದಿತ್ತು,ಡಿಕೆ ರವಿ ಅವರ ತಾಯಿ ಗೌರಮ್ಮ.

DK Ravi Mother: ಕುಸುಮಾ ನನ್ನ ಮಗ ಮತ್ತು ಇಲ್ಲದ ನನ್ನ ಸೊಸೆ. ಕುಸುಮಾ ಹನುಮಂತರಾಯಪ್ಪ ಹೊಟ್ಟೆಪಾಡಿಗಾಗಿ ಏನೇನೋ ಮಾಡಿದ್ದಾರೆ. ನಾನು ಇಂದು ಅವಳ ಬಗ್ಗೆ ಮಾತನಾಡಲಿಲ್ಲ. ಆದರೆ ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ನಡುವೆ ಕೆಲ ವಿಚಾರಗಳಿಗೆ ಜಗಳ ನಡೆದಿದೆ. ನಿಮ್ಮ ಹೋರಾಟದಲ್ಲಿ ನನ್ನ ಮಗನ ಹೆಸರನ್ನು ಎಳೆದು ತರಬೇಡಿ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಮನವಿ ಮಾಡಿದರು.

ವೈದ್ಯರಾದ ಶಿವಪ್ಪ ಮತ್ತು ರಮೇಶ್ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾವು ನಿಮ್ಮ ಮಕ್ಕಳು. ನನ್ನ ಮಗನನ್ನೂ ಅವರೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಇವರೆಲ್ಲ ತಮ್ಮ ಜಗಳದಲ್ಲಿ ಮಗನ ಹೆಸರನ್ನು ಏಕೆ ಎಳೆದು ತರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನನ್ನ ಮಗನ ಹೆಸರು ಬೀದಿಗೆ ಬರಬಾರದು.

ಮಗನ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ “ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು,‌ ಅವರು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೂ ಸ್ನೇಹಿತರಾಗಿದ್ದರು. ಹಾಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ “ಆ” ಸಮಯದಲ್ಲೇ ಇಬ್ಬರು ಮದುವೆ ಅಗಬಹುದಿತ್ತು.‌‌ ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹಾಗಾಗಿ ಅವರ ಮೇಲೆ ಎನೂ ಹೇಳುವುದಿಲ್ಲ‌‌,” ಎಂದು ಡಿ.ಕೆ.ರವಿ ತಾಯಿ ಗೌರಮ್ಮ‌ ತಿಳಿಸಿದರು.

ಡಿ.ಕೆ ರವಿಯ ನೆನೆದು ಗಳ ಗಳನೆ ಅತ್ತ ತಾಯಿ ಗೌರಮ್ಮ | D.K Ravi Mother | Kusuma | Daughter in Law | NewsFirst - YouTube

“ನಮ್ಮ ಮನೆಗೆ ರೋಹಿಣಿ ಸಿಂಧೂರಿ ಮೂರು ಬಾರಿ ಬಂದಿದ್ದಾರೆ. ಡಿ.ಕೆ. ರವಿಯ ಸಾಮಾಜಿಕ ಕಳಕಳಿ ಕಂಡು ನನಗೂ ಮಾರ್ಗದರ್ಶನ ಮಾಡು ಎಂದು ರೋಹಿಣಿ ನನ್ನ ಮುಂದೆಯೇ ಕೇಳಿದ್ದಾಳೆ. ರೋಹಿಣಿ ಸಿಂಧೂರಿ ಮೇಲೆ ಅಪರಾಧ ಹೊರಿಸಲು ರೂಪ‌ ಅವರು ನನ್ನ ಮಗನ ಹೆಸರನ್ನು ತಂದಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರು ತರಬೇಡಿ, ನೀವೆ ಆಗಲಿ, ರಾಜಕಾರಣಿಗಳೇ ಆಗಲಿ ಯಾವುದೆ ವಿಚಾರಕ್ಕೆ ನನ್ನ ಮಗನ ಹೆಸರು ತರಬೇಡಿ,” ಎಂದು ಗೌರಮ್ಮ ಎಚ್ಚರಿಕೆ ನೀಡಿದರು.

ಡಿ ರೂಪಾ ಮಾಡಿದ್ದು ತಪ್ಪು. ಇವತ್ತು ಎಲ್ಲರೂ ನನಗೆ ಫೋನ್ ಮಾಡಿ ನನ್ನ ಮಗನ ಸಾವಿನ ಬಗ್ಗೆ ಕೇಳುತ್ತಿದ್ದಾರೆ ನೀನು ಮಾಡಿದ್ದಕ್ಕೆ. ನಿಮ್ಮ ಜಗಳದಲ್ಲಿ ನಿಮ್ಮ ಮಗನ ಹೆಸರನ್ನು ಏಕೆ ಬಳಸುತ್ತಿದ್ದೀರಿ? ಎಂಟು ವರ್ಷಗಳ ನಂತರ ಮಗನ ಹೆಸರನ್ನು ಮುನ್ನೆಲೆಗೆ ತರುತ್ತಿದ್ದೀಯಾ ಎಂದು ಗೌರಮ್ಮ ದೇ ರೂಪಾ ಅವರನ್ನು ಕೇಳಿದರು.

ನನ್ನ ಮಗನಿಗೆ ಇದ್ದಷ್ಟು ಅಧಿಕಾರ ನಿಮಗೂ ಇದೆ. ನಿಮ್ಮ‌ಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಮೂಲ‌ಕ ಜೀವನ ರೂಪಿಸಿ. ನನ್ನ ಮಗ ನಡೆದ ದಾರಿಯಲ್ಲಿ ನಡೆಯಿರಿ‌. ಅದರೆ ನಿಮ್ಮ ಜಗಳದಲ್ಲಿ, ಸಿಂಧೂರಿ ಅವರ ಮೇಲೆ ಅಪವಾದ ಹೊರಿಸಿದ್ದೀರಿ. ಹಾಗೆಯೇ ನನ್ನ ಮಗನ ಹೆಸರು ತಂದು ಅವನ ಹೆಸರಿಗೆ ಮಸಿ ಹಚ್ವುವ ಕೆಲಸ ಮಾಡಬೇಡಿ ರೂಪಾ ಅವರೇ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದರು. ನಾನು ಮುಖ್ಯಮಂತ್ರಿ ಯಾಗುತ್ತೇನೆ, ಮನೆಗೊಬ್ಬರಿಗೆ ಕೆಲಸ ಕೊಡುತ್ತೇನೆ ಎಂದು ಹೇಳುತ್ತಿದ್ದ ನನ್ನ ಮಗ ಅಪರಂಜಿ.
ಅವನ ನಡೆ, ನುಡಿಗಳನ್ನು ಜನರು ಕೊಂಡಾಡುತ್ತಿದ್ದಾರೆ. ಇದೀಗ ನಿಮ್ಮಿಬ್ಬರ ರಂಪಾಟ ನೋಡಿ ಜನರು ನನಗೆ ರಾಜ್ಯದ ವಿವಿಧ ಭಾಗದಿಂದ ಫೋನ್ ಮಾಡಿ ಡಿ.ಕೆ.ರವಿಯ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದರು. ನಿಮ್ಮ ನಡೆಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಡಿ.ಕೆ.ರವಿ ತಾಯಿ ಡಿ. ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

You might also like

Comments are closed.