divya

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ ಕಿರುತೆರೆ ನಟಿ ದಿವ್ಯಾ,ತುಂಬು ಗರ್ಭಿಣಿ ಆದರೂ ನಿಲ್ಲುತ್ತಿಲ್ಲ ಕಷ್ಟ! ಹೆಣ್ಣು ಮಗು ಆದರೆ ಆತನಿಗೆ ಬುದ್ದಿ ಕಲಿಸುತ್ತೇನೆ ಅಂದಿದ್ಯಾಕೆ ನೋಡಿ!!

Entertainment/ಮನರಂಜನೆ

ಕನ್ನಡದ ಆಕಾಶ ದೀಪ, ಸೇವಂತಿ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ ನಟಿ ದಿವ್ಯ ಇದೀಗ ನೋವಿನಲ್ಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ದಿವ್ಯ ತಾನು ಮದುವೆಯಾದ ಹುಡುಗ ಹೇಗೆ ಮೋಸ ಮಾಡಿದ ಎಂಬುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ದಿವ್ಯ ಮೂಲತಃ ಬೆಂಗಳೂರಿನವರು.

ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ ಈಗಲೂ ತಮಿಳು ಧಾರಾವಾಹಿಯಲ್ಲಿ ಸಕ್ರಿಯ ರಾಗಿರುವ ನಟಿ ದಿವ್ಯ ಅಲ್ಲಿಯೇ ಅಭಿನಯಿಸುತ್ತಿದ್ದ ಕಲಾವಿದ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ಮೊಹಮ್ಮದ್, ನನ್ನು ಪ್ರೀತಿಸಿ ಐದು ವರ್ಷ ಆತನ ಜೊತೆಗೆ ಡೇಟಿಂಗ್ ಮಾಡಿಕೊಂಡು ನಂತರ ವಿವಾಹವಾಗಿದ್ದರು. ದಿವ್ಯ ಹಾಗೂ ಅಮ್ಜದ್ ಖಾನ್ ಮುಸ್ಲಿಂ ಸ-ಮುದಾಯದ ರೀತಿಯಲ್ಲಿಯೇ ವಿವಾಹವಾಗಿದ್ದಾರೆ.

ಅಮ್ಜದ್ ಖಾನ್ ಆಕೆಯನ್ನು ಮುಸ್ಲಿಂ ಧರ್ಮಕ್ಕೂ ಮತಾಂತರಗೊಳಿಸಿದ್ದನು. ಇನ್ನು ಮುಸ್ಲಿಂ ಮದುವೆಯ ನಂತರ ಹಿಂದೂ ಧ-ರ್ಮದ ಪ್ರಕಾರವು ಮದುವೆ ಆಗಬೇಕು ಎಂದು ದಿವ್ಯ ಹಠ ಹಿಡಿದಿದ್ದಕ್ಕೆ ಕಾಂಚಿಪುರಂನಲ್ಲಿರುವ ದೇವಾಲಯದಲ್ಲಿಯೂ ಕೂಡ ಸರಳವಾಗಿ ಮದುವೆ ಆಗಿದ್ದರು. ಆದರೆ ಈ ವಿಷಯ ಎಲ್ಲಿಯೂ ಯಾರಿಗೂ ಗೊತ್ತಾಗದ ಹಾಗೆ ಮುಚ್ಚಿಟ್ಟಿದ್ದರು. ನಾವು ಮದುವೆಯಾದ ವಿಚಾರ ಹೇಳಿದರೆ ವೃತ್ತಿ ಜೀವನಕ್ಕೆ ತೊಂದರೆ ಆಗುತ್ತೆ ಎಂದು ಅಮ್ಜದ್ ಖಾನ್ ದಿವ್ಯಾಳ ಬಾಯಿ ಮುಚ್ಚಿಸಿದ್ದಾನೆ.

ಗರ್ಭಿಣಿ ಅನ್ನೋದನ್ನು ನೋಡದೆ ಹೊಟ್ಟೆಗೆ ಒದ್ದ ಗಂಡ ನಟಿ ದಿವ್ಯ ಶ್ರೀಧರ್ ಆಸ್ಪತ್ರೆಗೆ ದಾಖಲು – Global kannada

ದಿನಗಳು ಕಳೆದ ಹಾಗೆ ಅಮ್ಜದ್ ಖಾನ್ ಮತ್ತೊಬ್ಬ ಕೋ ಆರ್ಟಿಸ್ಟ್ ಜೊತೆಗೆ ಅ-ನೈ-ತಿ-ಕ ಸಂಬಂಧ ಕೂಡ ಇಟ್ಟುಕೊಂಡಿದ್ದ ಎಂಬುದಾಗಿ ದಿವ್ಯ ತಿಳಿಸಿದ್ದಾರೆ. ಅಲ್ಲದೆ ನಾನು ಯಾವಾಗ ಗರ್ಭಿಣಿ ಎಂಬುದು ಗೊತ್ತಾಯ್ತೊ ಆಗ ನನ್ನಿಂದ ದೂರ ಸರಿಯಲು ಆರಂಭಿಸಿದ ಎಂದು ಹೇಳಿದ್ದಾರೆ. ಇನ್ನು ನಮ್ಮ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡ ಎಂದು ನನಗೆ ಬೆದರಿಕೆ ಒಡ್ಡಿದ್ದಾನೆ ಜೊತೆಗೆ ಇದೇ ವಿಷಯಕ್ಕೆ ನನ್ನ ಮೇಲೆ ಹ-ಲ್ಲೆ ಕೂಡ ಮಾಡಿದ್ದಾನೆ.

ಆತನ ಕೈಯಲ್ಲಿ ಒಂದು ರೂಪಾಯಿ ಇಲ್ಲದೆ ಇರುವಾಗ ನಾನೆ ದುಡಿದು ಮಗುವಿನಂತೆ ಆತನನ್ನ ನೋಡಿಕೊಂಡಿದ್ದೇನೆ. 30 ಲಕ್ಷ ಸಾಲ ಮಾಡಿ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ನಾನೇ ಈ ಎಂ ಐ ಭರಿಸಿ ಆತನಿಗೆ ಮನೆ ತೆಗೆಸಿ ಕೊಟ್ಟಿದ್ದೇನೆ. ಕರೋನಾ ಸಮಯದಲ್ಲಿ ಆತನಿಗೆ ಕೆಲಸ ಇಲ್ಲದೆ ಇದ್ದಾಗ ಆತ ಮನೆಯಲ್ಲಿ ಇದ್ದರೂ ನಾನು ದುಡಿದು ಆತನಿಗೆ ಹಣ ನೀಡುತ್ತಿದ್ದೆ.

ಈಗ ನನ್ನ ಬಳಿ ಇರುವ ಹಣವಿಲ್ಲ ಖಾಲಿಯಾಗಿದೆ ನಾನು ತುಂಬ ಗರ್ಭಿಣಿ ಹಣವಿಲ್ಲ ಅವನಿಗೆ ಕೊಟ್ಟಿದ್ದೇನೆ ಹಾಗಾಗಿ ಈ ಪರಿಸ್ಥಿತಿಯಲ್ಲಿಯೂ ಕೂಡ ಇನ್ನು ಕೆಲಸ ಮಾಡುತ್ತಿದ್ದೇನೆ. ನನಗಾಗಿ ಧಾರಾವಾಹಿಯವರು ಕಥೆಯನ್ನು ಕೂಡ ಬದಲಾಯಿಸಿದರು ಎಂದು ನಟಿ ದಿವ್ಯ ಹೇಳಿಕೊಂಡಿದ್ದರು. ಇನ್ನು ಹತ್ತು 12 ದಿನದಲ್ಲಿ ನನಗೆ ಹೆರಿಗೆ ಆಗುತ್ತೆ ನನಗೆ ಗಂಡು ಮಗು ಹುಟ್ಟಿದರೆ ಆತನಿಗೆ ಹೆಣ್ಣು ಮಕ್ಕಳಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ಕಲಿಸುತ್ತೇನೆ. ಎಂಬುದಾಗಿ ದಿವ್ಯ ತನ್ನ ದುಃಖವನ್ನು ಹೇಳಿಕೊಂಡಿದ್ದಾರೆ.

ಇಂಥ ಘಟನೆಗಳು ದಿನ ಬೆಳಗಾದರೆ ನಡೆಯುತ್ತದೆ ಆದರೂ ಕೂಡ ಹೆಣ್ಣು ಮಕ್ಕಳಿಗೆ ಬುದ್ಧಿ ಬಂದಂತೆ ಕಾಣಿಸುತ್ತಿಲ್ಲ. ಇಷ್ಟು ವರ್ಷವಾದರೂ ದಿವ್ಯಾಳಿಗೆ ಆಕೆಯ ಪತಿಯ ನಿಜವಾದ ಹೆಸರು ಅಮ್ಜದ್ ಖಾನ್ ಎಂಬುದೇ ಗೊತ್ತಿರಲಿಲ್ಲವಂತೆ ಅಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿಯನ್ನು ನಂಬುತ್ತಾರೆ ಅಂದ್ರೆ ಎಷ್ಟು ಸುಲಭವಾಗಿ ನಂಬಿಕೆ ದ್ರೋಹ ಮಾಡಬಹುದು ಎನ್ನುವುದಕ್ಕೆ ಈ ಸ್ಟೋರಿ ಸಾಕ್ಷಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.