ಫೋಟೊ

ಮದುವೆಯಾಗಿ ಒಳ್ಳೆ ಗಂಡ ಇದ್ರು,ಈಕೆ ತನ್ನ ತೇವಲಿಗಾಗಿ ಅಪರಿಚಿತ ಯುವಕರೊಂದಿಗೆ ಎಂತ ನಾಚಿಗೇಡು ಕೆಲಸ ಮಾಡ್ತಿದ್ದಳು ಗೊತ್ತಾ

Today News / ಕನ್ನಡ ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೊ, ವಿಡಿಯೋಗಳನ್ನು ಹಾಕಿಕೊಳ್ಳುವುದು, ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ತಮ್ಮ ಖಾತೆಯನ್ನು ತೆರೆಯುವುದು ಸಾಮಾನ್ಯವಾಗಿದೆ. ಸುಂದರವಾದ ಯುವತಿಯೊಬ್ಬಳು ತನ್ನ ನಿರ್ಲಜ್ಜ ಕಾಮಾಂಧತೆಯಿಂದ ಫೇಸ್ ಬುಕ್ ನಲ್ಲಿ ತನ್ನ ಜೀವನವನ್ನು ನಾಶಮಾಡಿಕೊಂಡಿದ್ದಲ್ಲದೆ ಯುವಕರ ಜೀವನವನ್ನು ಹಾಳು ಮಾಡಿದ ಘಟನೆಯನ್ನು ಈ ಲೇಖನದಲ್ಲಿ ನೋಡೋಣ.

ಶ್ವೇತಾ ಎಂಬ ಹುಡುಗಿ ತನ್ನ ಗಂಡನಿಗೆ ತಿಳಿಯದಂತೆ ಫೇಸ್ಬುಕ್ ಖಾತೆಯನ್ನು ತೆರೆದು ಅಪರಿಚಿತ ಯುವಕರೊಂದಿಗೆ ಆನ್ಲೈನ್ ಚಾಟಿಂಗ್ ಮಾಡಿ ಸಿಕ್ಕ ಸಿಕ್ಕವರೊಂದಿಗೆ ನಗ್ನ ವಿಡಿಯೊ ಕಾಲ್ ಮಾಡುತ್ತಾ ಸ್ವೆಚ್ಛಾಚಾರ ಮಾಡುತ್ತಿದ್ದಳು. ಇಬ್ಬರು ಯುವಕರನ್ನು ಒಂದೆ ಬಾರಿಗೆ ಅಕ್ರಮವಾಗಿ ಮೆಂಟೇನ್ ಮಾಡುವ ಹಂತಕ್ಕೆ ಹೋಗಿದ್ದಳು. ವರದಿಯ ಪ್ರಕಾರ ಯಶ್ನ ಕುಮಾರ್ ಎಂಬ ಹೈದರಾಬಾದಿನ ನಿವಾಸಿಯಾದ ಯುವಕನ ಮೇಲೆ ಅಲ್ಲಿನ ಸ್ಥಳವೊಂದರಲ್ಲಿ ಮೆ 4 ರಂದು ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಸುತ್ತಿಗೆಯಿಂದ ಬಲವಾಗಿ ಏಟು ಬಿದ್ದಿರುವುದರಿಂದ ರಕ್ತಸ್ರಾವವಾಗಿ ರಸ್ತೆಯಲ್ಲಿ ಬಿದ್ದಿರುತ್ತಾನೆ, ಈ ಪ್ರಕರಣದ ಬಗ್ಗೆ ಗಾಬರಿಯಾದ ಜನ ತಕ್ಷಣ ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸುತ್ತಾರೆ.

ಆ ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಮೆ 6 ರಂದು ಸಾವನ್ನಪ್ಪುತ್ತಾನೆ. ಈ ಯುವಕನ ವಯಸ್ಸು ಸುಮಾರು 32 ವರ್ಷ, ಈತನು ಪ್ರೊಫೆಷನಲ್ ಫೋಟೋಗ್ರಾಫರ್. ಈ ಕೊಲೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹದು ಎಂದು ಪೊಲೀಸರು ಹುಡುಕಾಡಿದರು. ಯುವಕನ ಪಾಲಕರ ಅನುಮತಿಯ ಮೇರೆಗೆ ಅವನ ಮೊಬೈಲ್ ಅನ್ನು ಪೊಲೀಸರು ಪರಿಶೀಲನೆ ಮಾಡಿದರು ಇದರಿಂದ ಶ್ವೇತಾ ರೆಡ್ಡಿ ಎಂಬ ದುರುಳ ಹೆಣ್ಣಿನ ಬಗ್ಗೆ ತಿಳಿಯುತ್ತದೆ.

ಶ್ವೇತಾ ರೆಡ್ಡಿ ಹಾಗೂ ವಿಕ್ರಂ ರೆಡ್ಡಿ ಎಂಬ ದಂಪತಿ ಹೈದರಾಬಾದಿನಲ್ಲಿ ವಾಸವಿದ್ದ ಯಂಗ್ ಕಪಲ್. ವಿಕ್ರಂ ರೆಡ್ಡಿ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜನಿಯರ್ ಹುದ್ದೆಯಲ್ಲಿ ಇದ್ದವರು. ಸದಾ ಕೆಲಸದ ಒತ್ತಡದಲ್ಲಿ ಇರುವ ವಿಕ್ರಂ ರೆಡ್ಡಿ ಇವರಿಗೆ ಹೆಂಡತಿಯೆಂದರೆ ಜೀವ. ವಿಕ್ರಂ ತನ್ನ ಹೆಂಡತಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಆಕೆಯು ಅಷ್ಟೇ ಪ್ರೀತಿಸುತ್ತಾಳೆ ಎಂಬ ಭ್ರಮೆಯಲ್ಲಿದ್ದನು, ಶ್ವೇತಾ ಒಳ್ಳೆಯವಳು ಎಂದು ನಂಬಿದ್ದನು ಆದರೆ ಶ್ವೇತಾ ಅವನಂದುಕೊಂಡಷ್ಟು ಒಳ್ಳೆಯವಳಲ್ಲ. ಪ್ರೀತಿಸುವ ಗಂಡ ಇದ್ದರು ಬೇರೆಯವರೊಂದಿಗೆ ನಂಟು ಬೆಳೆಸಿಕೊಳ್ಳುವ ಕೆಟ್ಟ ಛಟ ಇತ್ತು. ಶ್ವೇತಾ ವಿಕ್ರಂ ಅವರಿಗೆ ಗೊತ್ತಿಲ್ಲದಂತೆ ಫೇಸ್ಬುಕ್ ನಲ್ಲಿ ಸಿಕ್ಕ ಸಿಕ್ಕವರೊಂದಿಗೆ ವಿಡಿಯೊ ಚಾಟ್ ಮಾಡುತ್ತಿದ್ದಳು.

ಹೀಗಿರುವಾಗ ಯಶ್ನ ಕುಮಾರ್ ಎಂಬಾತ 2018ರಲ್ಲಿ ಪರಿಚಯವಾದನು. ಈತನು ನೋಡಲು ಸುಂದರವಾಗಿದ್ದ, ಅವನ ಆಕರ್ಷಕ ಡಿಪಿ ನೋಡಿ ಶ್ವೇತಾಳಿಗೆ ಮನಸ್ಸಾಯಿತು. ಬೇಗನೆ ಇಬ್ಬರು ಆತ್ಮೀಯರಾದರು ನಂತರ ಪ್ರೀತಿಗೆ ಬೀಳುವ ನವ ಜೋಡಿಗಳಂತೆ ಚಾಟ್ ಮಾಡುತ್ತಿದ್ದರು. 4 ವರ್ಷಗಳು ಹೀಗೆಯೆ ನಂಟು ಬೆಳೆಸಿಕೊಂಡರು. ಈ ಸಮಯದಲ್ಲಿ ಶ್ವೇತಾ ಅಲ್ಲಿನ ಅಶೋಕ ಎಂಬ ಇನ್ನೊಬ್ಬ ಯುವಕನನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ಅವನೊಂದಿಗೆ ಶ್ವೇತಾ ತನ್ನ ಕಳ್ಳತನವನ್ನು ಮುಂದುವರೆಸಿದಳು.

ಇದನ್ನೂ ಓದಿ >>>  ಮುಸ್ಲಿಂ ಸಮುದಾಯದ ರಾಜು ತಾಳಿಕೋಟೆ,ಮದುವೆಯಾಗಿದ್ದು ಹಿಂದೂ ಮಹಿಳೆಯರನ್ನ! ಇವರ ಇಬ್ಬರು ಪತ್ನಿಯರು ಹೇಗಿದ್ದಾರೆ ಗೊತ್ತಾ?

ಶ್ವೇತಾ ಕಾಳಜಿಯಿಂದ ನೋಡಿಕೊಳ್ಳುವ ಗಂಡನಿದ್ದರೂ ಛಟಕ್ಕಾಗಿ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು ಆದರೆ ಯಶ್ನ ಕುಮಾರ್ ಶ್ವೇತಾಳನ್ನು ಸೀರಿಯಸ್ಸಾಗಿ ಪ್ರೀತಿಸುತ್ತಾನೆ. ಶ್ವೇತಾ ತಾನು ವಿವಾಹಿತಳು ಎನ್ನುವುದನ್ನು ಮರೆತು ಅವನೊಂದಿಗೆ ಚಾಟ್ ಮಾಡುತ್ತಿದ್ದಳು. ಯಶ್ನ ಕುಮಾರ್ ಶ್ವೇತಾ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದುಕೊಂಡು ಮದುವೆಯಾಗು ಎಂದು ನಿವೇದಿಸಿಕೊಂಡನು. ಅವನ ಈ ಮಾತನ್ನು ನಿರೀಕ್ಷಿಸದ ಶ್ವೇತಾ ತನಗೆ ಮದುವೆಯಾಗಿದೆ ತಾನು ಮತ್ತೊಮ್ಮೆ ಮದುವೆಯಾಗುವುದಿಲ್ಲ ಎಂದು ಹೇಳುತ್ತಾಳೆ.

ಅವನು ಸೀರಿಯಸ್ಸಾಗಿ ಇದ್ದಾನೆ ಎಂದು ತಿಳಿದ ಶ್ವೇತಾ ಅವನೊಂದಿಗೆ ತನ್ನ ವರ್ತನೆಗೆ ಬ್ರೇಕ್ ಹಾಕಿದಳು, ಅವನನ್ನು ಅವಾಯ್ಡ್ ಮಾಡುತ್ತಾ ಅಶೋಕ್ ಎಂಬ ಯುವಕನನ್ನು ಹೈದರಾಬಾದಿಗೆ ಕರೆಸಿಕೊಂಡು ಸಮಯ ಸಿಕ್ಕಾಗ ಅವನೊಂದಿಗೆ ಸಮಯ ಕಳೆಯುತ್ತಿದ್ದಳು. ಯಶ್ನ ಕುಮಾರ್ ಮದುವೆಯಾಗು ಎಂದು ಶ್ವೇತಾಳನ್ನು ಪೀಡಿಸುತ್ತಿದ್ದನು ಆದರೆ ಶ್ವೇತಾ ಅವನ ಮಾತನ್ನು ಒಪ್ಪುತ್ತಿರಲಿಲ್ಲ ಅವಳಿಗೆ ಮದುವೆ ಸಂಸಾರ ಇಂತಹ ಜವಾಬ್ದಾರಿ ಬೇಕಿರಲಿಲ್ಲ. ಯಶ್ನ ಕುಮಾರ್ ಬರು ಬರುತ್ತಾ ಶ್ವೇತಾಳಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ.

ಯಶ್ನ ಕುಮಾರ್ ಶ್ವೇತಾಳಿಗೆ ನನ್ನ ಮಾತು ಕೇಳದೆ ಇದ್ದರೆ ಆನಲೈನ್ ಚಾಟಿಂಗ್ ಮಾಡಿರುವ ಅಸಹ್ಯ ವಿಡಿಯೋಗಳನ್ನು ಬಹಿರಂಗ ಪಡಿಸುತ್ತೇನೆ, ನಿನ್ನ ಕುಟುಂಬದವರಿಗೆ ಕಳುಹಿಸಿ ನಿನ್ನ ನಿಜ ಬಣ್ಣ ಏನು ಎನ್ನುವುದನ್ನು ತೋರಿಸುತ್ತೇನೆ ಎಂದು ಹೇಳುತ್ತಾನೆ. ಯಶ್ನ ಕುಮಾರ್ ಮಾತನ್ನು ಕೇಳಿ ಹೆದರಿದ ಶ್ವೇತಾ ಮೈಮರೆತು ಅವನೊಂದಿಗೆ ಮಾಡಿದ ವಿಡಿಯೊ ಕಾಲ್ ನಿಂದ ತಾನು ಸಿಕ್ಕಿಹಾಕಿಕೊಳ್ಳಬಹುದು ಎಂಬ ಕಲ್ಪನೆ ಇರಲಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗಿತ್ತು ಹಾಗಂತ ಯಶ್ನ ಕುಮಾರನನ್ನು ಮದುವೆಯಾಗಲು ಸಾಧ್ಯವಿಲ್ಲ ಆದರೆ ಅವನಿಂದ ವಿಡಿಯೊ ಲೀಕ್ ಆದರೆ ತನ್ನ ಮರ್ಯಾದೆ ಹೋಗುತ್ತದೆ ಹೇಗಾದರೂ ಯಶ್ನ ಕುಮಾರನನ್ನು ನಿಯಂತ್ರಣದಲ್ಲಿಡಬೇಕು ಎಂದು ಯೋಚಿಸಿದ ಶ್ವೇತಾ ಅವನನ್ನು ಕೊಲ್ಲುವ ನಿರ್ಧಾರ ಮಾಡುತ್ತಾಳೆ.

ಯಶ್ನ ಕುಮಾರ್ ನನ್ನು ಕೊಲ್ಲಲು ತನ್ನ ಎರಡನೆ ಪ್ರಿಯಕರ ಅಶೋಕನ ಸಹಾಯವನ್ನು ಕೇಳುತ್ತಾಳೆ. ಶ್ವೇತಾ ಅಶೋಕನ ಬಳಿ ಯಶ್ನ ಕುಮಾರ್ ಎಂಬಾತ ತನಗೆ ಬೆದರಿಕೆ ಒಡ್ಡುತ್ತಿದ್ದಾನೆ, ನನಗಾಗಿ ಅವನನ್ನು ಕೊಲ್ಲುತ್ತೀಯ, ಇದೊಂದು ಸಹಾಯವನ್ನು ಮಾಡು ಎಂದು ಬೇಡಿಕೊಳ್ಳುತ್ತಾಳೆ. ಶ್ವೇತಾಳ ಮೋಹಕ್ಕೆ ಒಳಗಾದ ಅಶೋಕ ಈ ಕೆಲಸವನ್ನು ಮಾಡಲು ಒಪ್ಪುತ್ತಾನೆ. ಈ ಕೆಲಸಕ್ಕಾಗಿ ಅಶೋಕ ತನ್ನ ಊರಿನ ಕಾರ್ತಿಕ್ ಎಂಬ ಗೆಳೆಯನನ್ನು ಸೇರಿಸಿಕೊಳ್ಳುತ್ತಾನೆ. ಶ್ವೇತಾಳಿಂದ ಯಶ್ನ ಕುಮಾರ್ ಬಗ್ಗೆ ಮಾಹಿತಿ ಪಡೆದು ನಾವು ಅವನನ್ನು ಸಾಯಿಸಲು ಸಿದ್ಧರಿದ್ದೇವೆ, ನೀನು ಒಂದು ಜಾಗಕ್ಕೆ ಅವನನ್ನು ಕರೆಸು ಎಂದು ಶ್ವೇತಾಳಿಗೆ ಅಶೋಕ್ ಹೇಳುತ್ತಾನೆ.

ನಂತರ ಶ್ವೇತಾ ಯಶ್ನ ಕುಮಾರನಿಗೆ ಒಂದು ನಿರ್ಜನ ಪ್ರದೇಶಕ್ಕೆ ಬರಲು ಹೇಳುತ್ತಾಳೆ. ಅವಳ ಸಂಚನ್ನು ಅರಿಯದ ಯಶ್ನ ಕುಮಾರ್ ಏಕಾಂಗಿಯಾಗಿ ನಿರ್ಜನ ಪ್ರದೇಶಕ್ಕೆ ಬೈಕ್ ನಲ್ಲಿ ಬಂದಿದ್ದನು ಮೊದಲೆ ಪ್ಲಾನ್ ಮಾಡಿದ ಅಶೋಕ ಹಾಗೂ ಕಾರ್ತಿಕ್ ಮುಸುಕು ಧಾರಿಯಾಗಿ ತಮ್ಮ ಕೈಯಲ್ಲಿರುವ ಸುತ್ತಿಗೆಯಿಂದ ಯಶ್ನ ಕುಮಾರನ ತಲೆಗೆ ಬಲವಾಗಿ ಹೊಡೆಯುತ್ತಾರೆ. ಯಶ್ನ ಕುಮಾರನ ಮೊಬೈಲ್ ಅನ್ನು ತೆಗೆದುಕೊಂಡು ಪರಾರಿಯಾಗಬೇಕು ಎಂದು ಅಶೋಕ ಹಾಗೂ ಕಾರ್ತಿಕ್ ಅಂದುಕೊಂಡಿರುತ್ತಾರೆ. ಯಶ್ನ ಕುಮಾರ್ ತನ್ನ ಮೊಬೈಲ್ ಅನ್ನು ಎಸೆದು ಓಡಲು ಪ್ರಾರಂಭಿಸುತ್ತಾನೆ ಅವನ ಹಿಂದೆ ಓಡಿದ ಅಶೋಕ್ ಹಾಗೂ ಕಾರ್ತಿಕ್ ಅವರಿಗೆ ವಾಹನದ ಓಡಾಟದ ಸದ್ದು ಕೇಳಿಸುತ್ತದೆ, ಜನರ ಕೈಗೆ ಸಿಗುವ ಭಯದಿಂದ ಅವರು ಪರಾರಿಯಾಗುತ್ತಾರೆ.

ಇದನ್ನೂ ಓದಿ >>>  VIDEO : ಹಾವು ಕಚ್ಚಿದ್ರೆ ಭಯ ಪಡ್ಬೇಡಿ,ತಕ್ಷಣ ಮಾಡಿ ಈ ಕೆಲಸ...ನೋಡಿ...

ಯಶ್ನ ಕುಮಾರನ ತಲೆಗೆ ಏಟು ಬಿದ್ದಿರುವುದರಿಂದ ರಕ್ತಸ್ರಾವವಾಗುತ್ತಿತ್ತು ಅದನ್ನು ನೋಡಿದ ದಾರಿಹೋಕರು ಅವನನ್ನು ಆಸ್ಪತ್ರೆಗೆ ಸೇರಿಸಿದರು ಇನ್ಯಾರೊ ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯಶ್ನ ಕುಮಾರ್ ಸಾವನ್ನಪ್ಪುತ್ತಾನೆ. ಅವನ ಮೊಬೈಲ್ ಮೂಲಕ ಪೊಲೀಸರು ಅಸಲಿ ಕಥೆಯನ್ನು ತಿಳಿದು ಶ್ವೇತಾಳನ್ನು ವಶಕ್ಕೆ ಪಡೆದು ಅವಳ ಮೂಲಕ ಅಶೋಕ ಹಾಗೂ ಕಾರ್ತಿಕ್ ರನ್ನು ಹುಡುಕಿ ವಶಕ್ಕೆ ಪಡೆಯುತ್ತಾರೆ. ಹೆಣ್ಣಾಗಿ ತನ್ನ ಸಂಸಾರಿಕ ಜೀವನವನ್ನು ಹಾಳು ಮಾಡಿಕೊಂಡಿದ್ದಲ್ಲದೆ ಜೊತೆಗೆ ಇಬ್ಬರು ಯುವಕರನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಹಾಗೂ ಅವರನ್ನು ಜೈಲಿಗೆ ಹೋಗುವಂತೆ ಮಾಡಿದಳು. ಅವಳು ಈಗ 4 ತಿಂಗಳ ಗರ್ಭಿಣಿಯಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಜೈಲಿನಲ್ಲಿರುವುದು ದುಃಖದ ಸಂಗತಿಯಾದರೂ ಉಪ್ಪು ತಿಂದವರು ನೀರು ಕುಡಿಯಲೆ ಬೇಕು ಎನ್ನುವಂತೆ ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇಬೇಕು. ಇದನ್ನು ಓದಿದ ನಂತರವಾದರೂ ಫೇಸ್ಬುಕ್ ಬಳಸುವಾಗ ಎಚ್ಚರದಿಂದ ಬಳಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...