dimple-quine

ಡಿಂಪಲ್‌ ಕ್ವೀನ್ ರಚಿತಾ ರಾಮ್ ಹೊಸ ಬಟ್ಟೆ ನೋಡಿ ಫಿದಾ ಆದ ಕನ್ನಡಿಗರು.

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ ನಮಸ್ಕಾರ, ಬುಲ್‌ಬುಲ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಚಿತಾ ರಾಮ್ ರವರು ಇದೀಗ ಮೊದಲ ಪಟ್ಟಿಯಲ್ಲಿದ್ದಾರೆ. ಜೊತೆಗೆ ಸಂಭಾವನೆ ಕೂಡ ಒಂದು ಕೋಟಿಗೂ ಅಧಿಕ ಪಡೆಯುತ್ತಿದ್ದಾರೆ. ಮುದ್ದು ಮುಖದ ರಚಿತಾ ರಾಮ್ ರವರು ದರ್ಶನ್ ಅವರ ಬುಲ್ ಬುಲ್ ಮೂಲಕ ಸಕ್ಕತ್ ಬೋಲ್ಡ್ ಲುಕ್ ನಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.‌

ರಚಿತಾ ರಾಮ್ ಅವರಿಗೆ ಮೊದಲ‌ ಸಿನಿಮಾದ ನಂತರ ಸಾಕಷ್ಟು ಅವಕಾಶಗಳು ಸಿಕ್ಕಿತ್ತು. ಜೊತೆಗೆ ಕರುನಾಡ ಜನತೆ ಕೂಡ ಈ ಸುಂದರಿಯ ಅಭಿನಯಕ್ಕೆ ಮನಸೋತು ಬಿಟ್ಟಿದ್ದರು. ಮುಖದಲ್ಲಿ ಮುದ್ದಾದ ಡಿಂಪಲ್‌ ಹೊಂದಿರುವ ರಚಿತಾ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಜೊತೆಗೆ ಇವರ ಸಿನಿಮಾಗಳು ಕೂಡ ಒಂದು ಹಂತಕ್ಕೆ ಯಶಸ್ಸು ಕಾಣುತ್ತಿದೆ.

ಆದರೆ ಇತ್ತೀಚೆಗೆ ರಚಿತಾ ರಾಮ್ ರವರಿಗೆ ಅವಕಾಶದ ಕೊರತೆ ಕಾಣುತ್ತಿದೆ. ಹೌದು, ಇತ್ತೀಚಿನ ಕಾಲದಲ್ಲಿ ಸಾಕಷ್ಟು ನಟಿಯರು ತಾ ಮುಂದು ತಾ ಮುಂದು ಅಂತ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿಕೊಂಡಿರುವ ನಟಿಯರು ಕೂಡ ಸಿನಿಮಾ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಈ ನಡುವೆ ನಟಿ ರಚಿತಾ ರಾಮ್ ರವರು ಸಿನಿ‌ಮಾ ಕಡೆ ಹೆಚ್ಚಿನ ಬದಲಾವಣೆ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ. ಹೌದು, ತನ್ನ‌ ದೇಹದ ತೂಕ ಹಾಗೂ ಬೋಲ್ಡ್ ಲುಕ್ ಬಟ್ಟೆಗಳ ಕಡೆ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ಇದೀಗ ನಟಿ ರಚಿತಾ ರಾಮ್ ರವರು ಹೊಸ ಹೊಸ ರೀತಿಯ ಬಟ್ಟೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮಿಂಚಲು‌ ಮುಂದಾಗಿದ್ದಾರೆ.‌ ಸದಾ ಸೀರೆ ಉಟ್ಟು ಮಿಂಚುತ್ತಿದ್ದ ರಚ್ಚು ಇದೀಗ ಮಾಡ್ರನ್ ಬಟ್ಟೆಯ ಮೂಲಕ ಮತ್ತೆ ಅಭಿಮಾನಿಗಳ ಪ್ರೋತ್ಸಾಹಕ್ಕೆ ಲಗ್ಗೆ ಇಟ್ಟಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...