
ಬಹಳ ಹಿಂದಿನ ಕಾಲದಿಂದಲೂ ಮೆಂತ್ಯೆಯನ್ನು ಸಾಂಬಾರು ಪದಾರ್ಥಗಳಲ್ಲಿ ಬಳಸುತ್ತಿದ್ದರು ಕೇವಲ ಸಾಂಬಾರು ಪದಾರ್ಥ ಗಳಿಗೆ ಅಷ್ಟೇ ಸೀಮಿತವಾಗಿರದೆ ಮೆಂತ್ಯೆ ಕಾಳು ಅನೇಕ ಔಷಧೀಯ ಗುಣವನ್ನು ಹೊಂದಿದೆ ನೋಡಲು ಚಿಕ್ಕ ಚಿಕ್ಕ ಕಾಳಿನಂತೆ ಕಂಡರೂ ಸಹ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ ಮೆಂತ್ಯೆ ಕಾಳಿನಲ್ಲಿ ಕಾರ್ಬೋ ಹೈಡ್ರೆಡ್ ಫೈಬರ್ ಹಾಗೂ ಕ್ಯಾಲ್ಸಿಯಂ ಹಾಗೂ ಕ್ಯಾಲೋರಿ ಹೀಗೆ ಅನೇಕ ಪೋಷಕಾಂಶವನ್ನು ಹೊಂದಿದೆ.
ರಕ್ತದ ಒತ್ತಡ ಹಾಗೂ ಶುಗರ್ ನಿಯಂತ್ರಣದಲ್ಲಿ ಇಡಲು ತುಂಬಾ ಸಹಾಯಕವಾಗಿದೆ ಹಾಗೆಯೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮೆಂತ್ಯೆ ಕಾಳು ಸ್ವಲ್ಪ ಕಹಿ ಹಾಗೂ ವಿಶೇಷವಾದ ವಾಸನೆಯನ್ನು ಹೊಂದಿರುತ್ತದೆ ರೋಗಗಳು ಬಾರದಂತೆ ತಡೆಯುವ ಶಕ್ತಿಯನ್ನು ಹೊಂದಿದೆ ಹಾಗಾಗಿ ನಮ್ಮ ಆರೋಗ್ಯಕ್ಕೆ ರಕ್ಷಣೆಯನ್ನು ಮಾಡುವಲ್ಲಿ ಸಹಾಯಕಾರಿಯಾಗಿದೆ ಎದೆಯುರಿ ಅಂತಹ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ ನಾವು ಈ ಲೇಖನದ ಮೂಲಕ ಡಯಾಬಿಟಿಸ್ ನಿಯಂತ್ರಣ ಮಾಡುವ ಮೆಂತ್ಯೆಯ ಬಗ್ಗೆ ತಿಳಿದುಕೊಳ್ಳೋಣ.
ಅಡುಗೆಯಲ್ಲಿ ಬಳಸುವ ಸಾಂಬಾರು ಪದಾರ್ಥಗಳಲ್ಲಿ ಮೆಂತ್ಯೆಯು ಒಂದು ಹಾಗೆಯೇ ಮೆಂತ್ಯೆ ಅಡುಗೆಗೆ ಅಷ್ಟೇ ಅಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುವ ಅಥವಾ ರಕ್ಷಿಸುವ ಕಾರ್ಯವನ್ನು ಮಾಡುತ್ತದೆ ಇದು ಉಷ್ಣವೀರ್ಯ ದ್ರವ್ಯ ಹಾಗೂ ತೀಕ್ತರಸವನ್ನು ಹೊಂದಿರುತ್ತದೆ ಹಾಗೆಯೇ ಸಕ್ಕರೆ ಖಾಯಿಲೆ ಇದ್ದವರಿಗೆ ಹೇಳಿ ಮಾಡಿಸಿರುವ ದ್ರವ್ಯ ಇದಾಗಿದೆ ಸಕ್ಕರೆ ಖಾಯಿಲೆ ಇರುವರು ಮೂರು ನಾಲ್ಕು ಚಮಚ ಮೆಂತ್ಯವನ್ನು ರಾತ್ರಿ ನೆನೆಸಿ ಇಡಬೇಕು ಹಾಗೆಯೇ ಬೆಳಿಗ್ಗೆ ಎದ್ದು ಪ್ರತಿನಿತ್ಯ ಸೇವನೆ ಮಾಡಬೇಕು ಇದರಿಂದ ಹಂತ ಹಂತ ವಾಗಿ ಸಕ್ಕರೆ ಕಾಯಿಲೆ ಹಂತ ಹಂತವಾಗಿ ಕಡಿಮೆ ಆಗುತ್ತದೆ.
ಸಕ್ಕರೆ ಕಾಯಿಲೆ ಇರುವರು ಮೆಂತ್ಯವನ್ನು ದಿನ ನಿತ್ಯ ಉಪಯೋಗ ಮಾಡುವುದರಿಂದ ದೇಹದಲ್ಲಿನ ಕೊಬ್ಬು ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ ಮೆಂತ್ಯವನ್ನು ನೆನೆಸಿ ಇಟ್ಟು ಸೇವನೆ ಮಾಡಬೇಕು ಮೊಳಕೆ ತರಿಸಿ ತಿನ್ನಬೇಕು ಹಾಗೆಯೇ ಪದೆ ಪದೆ ಶೀತ ಉಂಟಾಗುವ ವ್ಯಕ್ತಿಗಳು ಮೆಂತ್ಯವನ್ನು ಉಪಯೋಗಿಸಬೇಕು ಉಷ್ಣಾಂಶ ಜಾಸ್ತಿ ಆಗಿ ಶೀತ ಕಡಿಮೆ ಆಗುತ್ತದೆ ಹೀಗೆ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ.
ಮೆಂತ್ಯೆಯನ್ನು ಪುರಾತನ ಕಾಲದಿಂದಲೂ ಸಾಂಬಾರು ಪದಾರ್ಥವಾಗಿ ಬಳಸುತ್ತಿದ್ದರು ಅನೇಕ ಔಷಧೀಯ ಗುಣವನ್ನು ಹೊಂದಿದೆ ಮೆಂತ್ಯೆ ಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ಮೆಂತ್ಯೆಯಿಂದ ಹಸಿವನ್ನು ಕಡಿಮೆ ಮಾಡಿ ತೂಕ ಇಳಿಸಲು ಸಹಾಯಕಾರಿಯಾಗಿದೆ ಕೂದಲಿನ ಆರೋಗ್ಯ ಕಾಪಾಡುವಂತಹ ಪೋಷಕಾಂಶಗಳು ಮೆಂತ್ಯೆ ಕಾಳಿನಲ್ಲಿದೆ ಹಾಗೆಯೇ ತಲೆಹೊಟ್ಟು ತುಂಬಾ ಜನರ ಸಮಸ್ಯೆಯಾಗಿದೆ ಆದರೆ ಮೆಂತ್ಯ ದಿಂದ ತಲೆಹೊಟ್ಟು ಸಮಸ್ಯೆ ನಿವಾರಣೆ ಆಗುತ್ತದೆ.
ಬಾಣಂತಿಯರಿಗೆ ಪ್ರತಿದಿನ ಮೆಂತ್ಯೆ ಸೇವನೆ ಮಾಡುವುದರಿಂದ ಎದೆ ಹಾಲು ಉತ್ಪತ್ತಿಯಾಗುತ್ತದೆ ಹಾಗೂ ತಾಯಿಯ ಆರೋಗ್ಯಕ್ಕೂ ಉತ್ತಮ ಆಹಾರವಾಗಿದೆ ಹಾಗಾಗಿ ಬಾಣಂತಿ ಮಹಿಳೆಯರಿಗೆ ಮೆಂತ್ಯೆಯ ಸೇವನೆ ಮಾಡಲು ಬಹಳ ಹಿಂದಿನ ಕಾಲದಿಂದಲೂ ಕೊಡುತ್ತಿದ್ದರು ಹಾಗೆಯೇ ಮೆಂತ್ಯೆಯಲ್ಲಿ ಕ್ಯಾಲ್ಸಿಯಂ ಅಂಶ ಇರುತ್ತದೆ ಅನೇಕ ಪೋಷಕಾಂಶವನ್ನು ಒಳಗೊಂಡಿರುತ್ತದೆ ಹಾಗಾಗಿ ನಮ್ಮ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಿದೆ ಹೀಗೆ ಮೆಂತ್ಯೆ ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ.
Comments are closed.