ಅದ್ಧೂರಿ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ ಧ್ರುವ ಸರ್ಜಾ ೨೦೧೩ ರಲ್ಲಿ ಬಿಡುಗಡೆಗೊಂಡ ಬಹುದ್ಧೂರ್ ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು. ೨೦೧೭ರಲ್ಲಿ ತೆರೆಗೆ ಬಂದ ಭರ್ಜರಿ ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿವೆ.ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ೨೦೧೯ರ ನವೆಂಬರ್ ೨೫ರಂದು ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ಈ ಜೋಡಿ, ಇದೀಗ ಅಪ್ಪ ಅಮ್ಮ ಆಗುವ ಖುಷಿಯಲ್ಲಿದ್ದಾರೆ. ಈ ಖುಷಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾರೆ ನಟ ಧ್ರುವ. ೨೦೧೯ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧ್ರುವ ಪ್ರೇರಣಾ ಜೋಡಿ ಕೆಲದಿನ ಬಳಿಕ ಕೋವಿಡ್ ಗೆ ತುತ್ತಾಗಿದ್ದರು.
ಆ ನಂತರ ಅಣ್ಣನ ಅಕಾಲಿಕ ನಿಧನ ಸರ್ಜಾ ಕುಟುಂಬದ ಖುಷಿಯನ್ನು ಕಿತ್ತುಕೊಂಡಿತ್ತು.ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆನಂತರದಲ್ಲಿ ರಾಯನ್ ಸರ್ಜಾ ಜೊತೆಗೆ ಧ್ರುವ ಸರ್ಜಾ ತನ್ನ ಮಗುವಿನಂತೆ ಕಪಾಡಿಕೊಂಡು ಬಂದವರು..ಅಣ್ಣನ ಮಗನಲ್ಲೇ ಖುಷಿಯನ್ನು ಕಂಡವರು..ಈಗ ಪ್ರೇರಣಾ ಮಗುವಿಗೆ ಜನ್ಮ ನೀಡುವ ತಯಾರಿಯಲ್ಲಿದ್ದಾರೆ.ಈ ಸಂತಸದ ವಿಚಾರವನ್ನು ಧ್ರುವ ಸರ್ಜಾ ಫೋಟೋ ಶೂಟ್ ಮಾಡಿಸಿ, ಎಲ್ಲಾ ಫೋಟೋಗಳಿಗೆ ಹಾಡನ್ನು ಹಾಕಿ, ಜೀವನದ ಹೊಸ ಹಂತಕ್ಕೆ ಹೋಗುತ್ತಿದ್ದೇವೆ. ಈ ಹಂತ ಬಹಳ ದಿವ್ಯವಾದ ಹಂತವಾಗಿದೆ. ಶೀಘ್ರದಲ್ಲಿ ಪುಟ್ಟ ಮಗುವಿನ ಆಗಮನವಾಗಲಿದ್ದು, ಮಗುವನ್ನು ಹರಸಿ, ಜೈ ಆಂಜನೇಯ” ಎ ಎಂದು ಹೇಳಿ ವಿಷಯವನ್ನು ಹಂಚಿಕೊAಡಿದ್ದರು.ಸದ್ಯ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಬಳಿಕ ಜೋಗಿ ಪ್ರೇಮ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ.
ದರ ಬೆನ್ನಲ್ಲೇ ಇಬ್ಬರಿಗೂ ಸ್ಯಾಂಡಲ್ ವುಡ್ ಸ್ನೇಹಿತರು, ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ. ತುಂಬು ಗರ್ಭಿಣಿ ಪ್ರೇರಣಾ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿರುವ ಧ್ರುವ ತಮ್ಮ ಜೀವನದ ಮಹತ್ವದ ಘಟ್ಟಕ್ಕೆ ಕಾಲಿಡುತ್ತಿದ್ದೇವೆ. ನಿಮ್ಮ ಹಾರೈಕೆಯಿರಲಿ ಎಂದಿದ್ದಾರೆ.ಇನ್ನು ಸಂಧರ್ಶನ ಒಂದೊರಲ್ಲಿ ಮಾತನಾಡಿದ ಧ್ರುವ ಸರ್ಜಾ ತನಗೆ ಹೆಣ್ಣು ಮಗು ಬೇಕು ಎಂದಿದ್ದಾರೆ.ಅಣ್ಣನೇ ಮಗನೇ ನನಗೆ ಮಗ..ಎಂದಿದ್ದಾರೆ.ಸೆಪ್ಟೆAಬರ್ ನಲ್ಲಿ ಇಬ್ಬರ ಪ್ರೀತಿಯ ಕೂಸು ಮಡಿಲು ಸೇರಲಿದೆ. ಇನ್ನು, ಧ್ರುವ ಈ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದAತೇ ಅತ್ತಿಗೆ ಮೇಘನಾ ರಾಜ್ ಕೂಡಾ ಸಂತಸ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ಸಂತೋಷದ ವಿಷಯ ಎಂದಿದ್ದಾರೆ.