ಜತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ. ಎಲ್ಲಿ ಹೆಣ್ಣನ್ನು ಪೂಜಿತ ಭಾವದಿಂದ ಕಾಣಲಾಗುತ್ತೋ ಅಲ್ಲಿ ದೇವರು ಇದ್ದೆ ಇರುತ್ತಾನೆ, ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವರು ಎಂದು ಪೂಜಿಸಲಾಗುತ್ತದೆ ಅಂತಹ ಹೆಣ್ಣಿಗೆ ನಾವು ಏನು ಮಾಡ್ತಿವಿ? ಮನೆಯಲ್ಲಿ ನಮ್ಮ ತಾಯಿಗೆ ಎನ್ನನ್ನು ನೀಡ್ತಿವಿ. ಒಂದು ಹೆಣ್ಣು ತನ್ನ ಪತಿಗಾಗಿ, ತನ್ನ ತಂದೆಗಾಗಿ, ತನ್ನ ಮಕ್ಕಳಿಗಾಗಿ, ತನ್ನ ಸಹೋದರ ಸಹೋದರಿಯರಿಗೆ ಹಲವಾರು ಕರ್ತವ್ಯಗಳನ್ನು ಕಾರ್ಯಗಳನ್ನು ಮಾಡುತ್ತಾರೆ.
ಆದರೆ ಯಾವತ್ತೂ ಸಹ ಆಕೆ ತನಗೆ ಇವರಿಂದ ಏನಾದರೂ ಸಿಗುತ್ತದೆ ಎಂದು ಅನ್ನಿಸಿಕೊಂಡು ಮಾಡುವುದಿಲ್ಲ. ಒಂದು ಹೆಣ್ಣು ಯಾವುದೋ ಒಂದು ಆಪೇಕ್ಷೆ ಇಟ್ಟುಕೊಂಡು ಕೆಲಸ ಮಾಡುವುದಿಲ್ಲ ಆಕೆ ಬೇರೆಯವರ ಖುಷಿಗಾಗಿ ತನ್ನ ಖುಷಿಯನ್ನು ಸಹ ತ್ಯಾಗ ಮಾಡುತ್ತಾಳೆ ಅಂತಹ ಹೆಣ್ಣಿಗೆ ನೀವೇನನ್ನ ಮಾಡಿದ್ದೀರಾ?
ಒಂದು ಹೆಣ್ಣು ತನ್ನ ಪ್ರೀತಿ ಪಾತ್ರರಾದವರಿಂದ ಹಣವನ್ನು ಕೇಳುವುದಿಲ್ಲ, ಒಡವೆ ವಸ್ತ್ರಗಳನ್ನು ಕೇಳುವುದಿಲ್ಲ ಅಥಾವ ಆಡಂಬರದ ಜೀವನವನ್ನು ಕೇಳುವುದಿಲ್ಲ ಆಕೆ ನಿಮ್ಮ ಬಳಿ ಬಯಸುವುದು ಕೇವಲ ಪ್ರೀತಿ ಮತ್ತು ಅವಳ ಜೊತೆ ನೀವು ಅವಳಿಗಾಗಿ ನೀಡತಕ್ಕಂತ ಸ್ವಲ್ಪ ಸಮಯ. ನಿಮಗಾಗಿ ಆಕೆ ಕೇಳೋದು ಸಹ ಅದೇ, ಆಕೆ ನಿಮ್ಮ ಮೇಲೆ ನಾನು ನಿಮ್ಮವಳು ಅನ್ನೋ ನೀಡುತ್ತಕ್ಕಂತ ಒಂದು ಧೈರ್ಯ ಆಕೆಗೆ ಬೇಕು.
ನೀವು ನಿಮ್ಮ ತಾಯಿಗೆ ಉಡುಗೊರೆಗಳನ್ನ ಕೊಡುವುದರ ಬದಲು ಆಕೆಗೆ ನಿಮ್ಮ ಸಮಯವನ್ನು ನೀಡಿ, ನಿಮ್ಮ ಪ್ರೀತಿಯನ್ನ ನೀಡಿ, ನಿಮ್ಮ ಮಮತೆಯನ್ನು ನೀಡಿ ಆಗ ನಿಮ್ಮ ತಾಯಿ ಪ್ರಸನ್ನಳಾಗುತ್ತಾಳೆ, ಇನ್ನು ಅತಿ ಹೆಚ್ಚು ಪ್ರೀತಿಯನ್ನ ನೀಡುತ್ತಾಳೆ ನೀವು ಆಕೆಯನ್ನ ಗೌರವಿಸಿದಷ್ಟು ಆಕೆ ನಿಮ್ಮನ್ನು ಪ್ರೀತಿಸುತ್ತಾಳೆ. ಇದನ್ನ ಹೇಳ್ತಾರೆ ಜತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ, ನಿಮ್ಮ ಮನೆಯಲ್ಲಿ ನೀವು ಹೆಣ್ಣನ್ನು ಗೌರವಿಸಿದರೆ ನಿಮ್ಮ ಮನೆಯಲ್ಲಿ ದೇವರು ನೆಲೆಸಿರುತ್ತಾನೆ ಜೊತೆಗೆ ನೀವು ಸಹ ಸುಖ ಶಾಂತಿ ನೆಮ್ಮದಿಯಿಂದ ಇರ್ತೀರಾ.
ಹೆಣ್ಣುಮಕ್ಕಳ ಆಸೆಗೆ ಮಿತಿಯೇ ಇಲ್ಲ ಎಂಬ ಮಾತಿದೆ. ಅದರಲ್ಲೂ ಪ್ರತಿ ಹೆಣ್ಣು ಕೂಡಾ ತನ್ನ ಪತಿಯಿಂದ ಬಹಳಷ್ಟು ಆಸೆಗಳನ್ನು ನಿರೀಕ್ಷೆ ಮಾಡುವುದು ಸಾಮಾನ್ಯ. ದೊಡ್ಡ ದೊಡ್ಡ ಆಸೆಗಳನ್ನೆಲ್ಲಾ ಈಡೇರಿಸಬೇಕೆಂದೇನಿಲ್ಲ. ಬಹುತೇಕ ಹೆಣ್ಣುಮಕ್ಕಳು ಚಿಕ್ಕಪುಟ್ಟ ಆಸೆಗಳ ಗಳಿಂದಲೇ ತುಂಬಾ ತೃಪ್ತಿ ಪಡುವವರಿದ್ದಾರೆ. ಅದರಲ್ಲೂ ತನ್ನ ಪತಿಯಿಂದ ಈ ಸಣ್ಣ ಕನಸುಗಳು ಈಡೇರಿದ್ರೆ ಅಂತಹದರಲ್ಲೇ ಸ್ವರ್ಗ ಸುಖ ಕಾಣುತ್ತಾರೆ. ಹೀಗೆ ತನ್ನ ಗಂಡನಿಂದ ಅಪೇಕ್ಷೆ ಪಡುವ ಕೆಲವೂಂದು ಆಸೆಗಳು ಏನು ಎಂದು ನೋಡೋಣ ಬನ್ನಿ..
ಪ್ರತಿಯೊಂದು ಹೆಣ್ಣು ತನ್ನ ಗಂಡ ಬೆಳಗ್ಗೆ ಎದ್ದಾಗ ದೇವರ ಬಳಿಕ ತನ್ನ ಮುಖವನ್ನು ನೋಡಲಿ ಎಂದು ಇಷ್ಟಪಡುತ್ತಾರೆ. ಬೆಳಗಿನ ಟಿಫನ್ ಮಾಡುವಾಗ ಅದರಲ್ಲಿ ಒಂದು ತುತ್ತನ್ನು ನನಗಾಗಿ ಇರಲಿ ಎಂದು ಮನೆಯಿಂದ ಹೊರಹೋಗುವಾಗ ಹೋಗಿಬರುತ್ತೇನೆ ಎಂದು ಕಣ್ಣಲ್ಲೇ ಸನ್ನಿಯನ್ನು ಮಾಡದೆ ಹೊರಟುಬಿಟ್ಟರೆ ಯಾವುದೇ ಹೆಣ್ಣು ಕೂಡ ಆ ನೋವನ್ನು ಸಹಿಸುವುದಿಲ್ಲ. ಕೆಲಸದ ವೇಳೆ ಫೋನ್ ಮಾಡಿ ನಾ ತೊಂದರೆ ನೀಡಲು ಇಚ್ಛಿಸುವುದಿಲ್ಲ. ಆದರೆ ಊಟದ ವೇಳೆಯಾದರೂ ನನ್ನನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂಬುದನ್ನ ಮದುವೆಯಾಗಿರುವ ಹೆಣ್ಣು ಮಕ್ಕಳು ಅಪೇಕ್ಷಿಸುತ್ತಾರೆ.
ಇನ್ನು ಸಾಯಂಕಾಲ ಮನೆಗೆ ಮರಳುವ ವೇಳೆ ನನಗಾಗಿ ಏನಾದರೂ ತರದಿದ್ದರೂ ಸರಿಯೇ, ಆದರೆ ಲೇಟಾಗಿ ಮನೆಗೆ ಬರೋದು ಬೇಡ, ಏಕೆಂದರೆ ನಿನಗಾಗಿ ಕಾಯುತ್ತಿರುವೆ. ಮದುವೆ ಸಮಾರಂಭಗಳಿಗೆ ಹೋದಾಗ ನೀ ನನ್ನ ಕೈ ಹಿಡಿದಿದ್ದರೂ ಪರವಾಗಿಲ್ಲ, ದೂರ ಮಾತ್ರ ಹೋಗಬೇಡ, ನಾನು ನಿನ್ನವಳೆಂದು ಎಲ್ಲಿಯೂ ನೀನು ಮರೆಯಬೇಡ. ಕೇವಲ ಸುಖವಾ ಮಾತ್ರ ನೀಡೆಂದು ನಾನು ಕೇಳುವುದಿಲ್ಲ, ನಾನು ನಿಮ್ಮ ಕಷ್ಟಗಳಲ್ಲಿ ಜೊತೆಯಾಗಿರುತ್ತೇನೆ. ನಾನು ತಾಯಿಯಾದಾಗ ಆ ವೇಳೆ ನಾನೇ ನಿನ್ನ ಮಗುವಾಗಿ ಇರುತ್ತೇನೆ. ಆ ಸಮಯದಲ್ಲಿ ನಿನ್ನಿಂದ ಅತಿಯಾದ ಪ್ರೀತಿಯನ್ನು ನಿರೀಕ್ಷೆ ಮಾಡುವೆ ಅಷ್ಟೇ.
ಅದಕ್ಕಾಗಿ ನೀನು ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡ, ಏಕೆಂದರೆ ಆ ಸಮಯ ನಾನೇ ನಿನ್ನ ಮಗುವಾಗಿರುತ್ತೇನೆ. ನಿನ್ನ ಆರೋಗ್ಯ ಹದಗೆಟ್ಟಾಗ ನಿನಗಾಗಿ ನಾನಿರುವೆ ಅದರ ಚಿಂತೆ ನಿನಗೆ ಬೇಡ ನನಗೂ ಒಂದು ವ್ಯಕ್ತಿತ್ವ ಇದೆ. ಅದನ್ನ ರೂಪಿಸಿಕೊಳ್ಳಲು ನಿನ್ನ ಸಹಕಾರವನ್ನು ನಾನು ನಿರೀಕ್ಷೆ ಮಾಡುವೆ. ನಾನು ಏನೇ ಆಗಿದ್ದರೂ ರಾತ್ರಿಯ ಸಮಯ ನಿನ್ನ ತೋಳಿನ ಮೇಲೆ ಮಲಗುವ ಅವಕಾಶ ನೀಡು. ಆದರೆ ನನ್ನ ಆಸೆಗಳು ನಿನಗೆ ಅತಿ ಎನಿಸಿದರೆ ನನ್ನ ಬಗ್ಗೆ ಕ್ಷಮೆ ನೀಡುವ ಕರುಣೆ ತೋರು. ನನ್ನ ಗಂಡ ನಾಗಿರುವ ನಿನ್ನ ಬಳಿ ನನ್ನ ಬಯಕೆ ಆಸೆಗಳನ್ನು ಹೇಳಿಕೊಳ್ಳದೆ ಮತ್ಯಾರ ಬಳಿ ಹೇಳಿಕೊಳ್ಳಲು ಸಾಧ್ಯ. ಈ ಸಂಗತಿಗಳನ್ನು ಪತ್ನಿ ಗಂಡ ನಿನ್ನ ಅಪೇಕ್ಷಿಸುತ್ತಾಳೆ.