ನಟ ಶಾರುಖ್ ಖಾನ್ ಬಾಲಿವುಡ್ ಬಾದ್‌ಷಾ, ಕಿಂಗ್ ಖಾನ್ ಹೆಸರು ಪಡೆದವರು. ಇವತ್ತು ಇವರ ಪಾಲಿಗೆ ಇಷ್ಟರ ಮಟ್ಟಿಗೆ ಶ್ರೀಮಂತಿಕೆ ಬರಲು ಇವರು ಪಟ್ಟ ಕಷ್ಟ ಎನ್ನಬಹುದು. ಖ್ಯಾತ ರಂಗನಿರ್ದೇಶಕ ‘ಬ್ಯಾರ್ರಿ ಜಾನ್’ ರ ಗರಡಿಯಲ್ಲಿ ದೆಹಲಿಯ ಥಿಯೇಟರ್ ಆಕ್ಷನ್ ಗ್ರೂಪ್ ನ ಮೂಲಕ ನಟನೆಯಲ್ಲಿ ಪಳಗಿದರು ಶಾರುಖ್ ಖಾನ್. 1980ರ ದಶಕದ ಕೊನೆಯಲ್ಲಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ನಟನಾ ಬದುಕನ್ನು ಶುರು ಮಾಡಿದರು.
1992 ರಲ್ಲಿ ತೆರೆ ಕಂಡ ದೀವಾನಾ ಚಿತ್ರವು ಇವರನ್ನು ಸಿನಿ ಲೋಕಕ್ಕೆ ಪರಿಚಯಿಸಿತು. ಇದಾದ ಬಳಿಕ ಇವರು ನಟಿಸಿದ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಭಾರಿ ಸದ್ದು ಮಾಡುವುದರ ಮೂಲಕ ಜನ ಮನ್ನಣೆ ಪಡೆದುಕೊಂಡರು. ಇನ್ನು ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ, ಕುಚ್ ಕುಚ್ ಹೋತಾ ಹೈ, ಚಕ್ ದೇ ಇಂಡಿಯಾ, ಓಂ ಶಾಂತಿ ಓಂ ಮತ್ತು ರಬ್ ನೇ ಬನಾದಿ ಜೋಡೀ ಹಾಗೂ ‘ಕಭೀ ಖುಷಿ ಕಭೀ ಗಮ್, ಕಲ್ ಹೋ ನಾ ಹೋ, ವೀರ್-ಝಾರಾ ಮತ್ತು ಕಭೀ ಅಲ್ವಿದಾ ನಾ ಕೆಹೆನಾ ಹೀಗೆ ಎವರ್ ಗ್ರೀನ್ ಸಿನಿಮಾಗಳನ್ನು ನೀಡಿದ್ದಾರೆ.
ಅದರ ಜೊತೆಗೆ ಬಹುತೇಕ ಸಿನಿಮಾಗಳು ಭರ್ಜರಿ ಕಲೆಕ್ಷನ್ ಕೂಡ ಗಳಿಸಿತ್ತು.ಅಂದಹಾಗೆ, 2000 ರ ವೇಳೆಗೆ ಖಾನ್ ಚಿತ್ರ ನಿರ್ಮಾಣ ಹಾಗೂ ಕಿರುತೆರೆ ನಿರೂಪಣಾ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟರು.ಅದು ಮಾತ್ರವಲ್ಲದೇ,ಎರಡು ನಿರ್ಮಾಣ ಕಂಪೆನಿಗಳಾದ, ಡ್ರೀಮ್ಸ್ ಅನ್‌ಲಿಮಿಟೆಡ್ ಮತ್ತು ರೆಡ್ ಚಿಲ್ಲೀಸ್‌ಎಂಟರ್‌ಟೇನ್ ಮೆಂಟ್‌ಗಳ ಮಾಲೀಕರು. ಇನ್ನು ಅತ್ಯುತ್ತಮ ನಟನೆಗೆ, ಏಳು ಪ್ರಶಸ್ತಿಗಳೂ ಸೇರಿದಂತೆ ಹದಿಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡು ಎಲ್ಲರ ಮೆಚ್ಚಿನ ನಟರಾಗಿ ಗುರುತಿಸಿಕೊಂಡಿದ್ದಾರೆ.
80ಕ್ಕೂ ಸಿನಿಮಾಗಳಲ್ಲಿ ಶಾರುಖ್ ಬಣ್ಣ ಹಚ್ಚಿದ್ದಾರೆ. ಆದರೆ ಸದ್ಯಕ್ಕೆ ಹಿಂದಿ ಸಿನಿಮಾಗಳು ಸೋಲನ್ನು ಕಾಣುತ್ತಿದೆ. ಹೀಗಾಗಿ ಆದರೆ ಪಠಾಣ್ ಸಿನಿಮಾದ ಮೂಲಕ ಶಾರುಖ್ ಖಾನ್ ಅವರು ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡು ರಿಲೀಸ್ ಆಗಿದೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಹಾಡು ರಿಲೀಸ್ ಆಗುತ್ತಿರುವ ವಿಚಾರವನ್ನು ಶಾರುಖ್ ಖಾನ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಶಾರುಖ್ ಖಾನ್, ಪಠಾಣ್ ಸಿನಿಮಾದ ಹಾಡು ರಿಲೀಸ್ ಆಗುತ್ತಿದೆ. ಇದನ್ನು ನೋಡುವುದಕ್ಕೆ ನಾನು ಕಾತುರರಾಗಿದ್ದೇನೆ ಎಂದು ಬರೆದು ಕೊಂಡಿದ್ದರು. ಪಠಾಣ್ ಸಿನಿಮಾದ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು. ಈ ಹಾಡಿನಲ್ಲಿ ಹಾಟ್ ಆಗಿ ಸೊಂಟ ಬಳುಕಿಸಿದ ನಟಿಯನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಾಗಿ ಇವರಿಬ್ಬರ ಕಾಂಬಿನೇಶನ್ ಸಿನಿಮಾದ ಮೇಲೆ ಬಹು ನಿರೀಕ್ಷೆಯಿದ್ದು, ಈ ಸಿನಿಮಾದ ಬಾಲಿವುಡ್ ನಲ್ಲಿ ಬಾರಿ ಕಲೆಕ್ಷನ್ ಗಳಿಸುವ ನಿರೀಕ್ಷೆಯಿದೆ.