5980 ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ,ಎಲ್ಲಾ ಗ್ರಾಮ ಪಂಚಾಯತಿಯಲ್ಲೂ ನೇಮಕಾತಿ ಆರಂಭ.!

ಕರ್ನಾಟಕ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಒಟ್ಟು 5,980 ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸೂಚನೆ ನೀಡಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಈಗಿರುವ ಕೆಲಸದ ಒತ್ತಡ, ಕಡತಗಳ ನಿರ್ವಹಣೆ ವಿಳಂಬವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಈ ನೇಮಕಾತಿಗೆ ಸರ್ಕಾರ ಅಸ್ತು ಎಂದಿದೆ.

ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ನೇಮಕಾತಿಯ ಕುರಿತು ಸುತ್ತೋಲೆಯನ್ನು ಸಹ ಹೊರಡಿಸಿದೆ. ನೇರ ನೇಮಕಾತಿ ಮೂಲಕ ಈ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು, ಜಿಲ್ಲೆಗಳನ್ನು ಒಂದು ಜೇಷ್ಠತಾ ಘಟಕವೆಂದು ಪರಿಗಣಿಸಿ ಜಿಲ್ಲಾ ಪಂಚಾಯಿತಿಯ CEO ಅಧ್ಯಕ್ಷತೆಯ ಸಮಿತಿಗೆ ನೇಮಕಾತಿ ಜವಾಬ್ದಾರಿಗೊಳಿಸಲು ಇಲಾಖೆ ನಿರ್ಧರಿಸಿದೆ.

ಗ್ರಾಮ ಪಂಚಾಯಿತಿ ನೇರ ನೇಮಕಾತಿಗೆ ಸರ್ಕಾರದ ತಾತ್ಕಾಲಿಕ ತಡೆ | Karnataka Govt Stayed  Various Posts Direct Recruitment Of Gram Panchayat - Kannada Oneindia

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ PUC ಉತ್ತೀರ್ಣರಾಗಿರಬೇಕು ಮತ್ತು ಕಿಯೋನಿಕ್ಸ್ ಅಥವಾ ಕಂಪ್ಯೂಟರ್ ಶಿಕ್ಷಣದ ಸರ್ಟಿಫಿಕೇಟ್ ಕೂಡ ಹೊಂದಿರಬೇಕು. ದ್ವಿತೀಯ PUC ಅರ್ಹತೆಯ ಅಂಕಗಳು ಹಾಗೂ ಕಂಪ್ಯೂಟರ್ ತರಬೇತಿ ಸರ್ಟಿಫಿಕೇಟ್‌ ಗಳನ್ನು ಆಧರಿಸಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಆದವರನ್ನು ನೇಮಕ ಮಾಡಿ.

ಡಾಟ ಎಂಟ್ರಿ ಆಪರೇಟರ್ ಹುದ್ದೆಗೆ ಆಯ್ಕೆಯಾದ ನೌಕರರಿಗೆ ಪ್ರತಿ ತಿಂಗಳು 16,738 ರೂ. ವೇತನ ನೀಡಲು ಮತ್ತು ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದಲೆ ನೌಕರರಿಗೆ ವೇತನ ಪಾವತಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಸೂಚನೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತವಾಗಿ ಡಾಟಾ ಎಂಟ್ರಿ ಆಪರೇಟರ್‌ ಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗಿತ್ತು, ಸಾಧ್ಯವಾದರೆ ಅವರನ್ನೇ ಈ ಮೇಲೆ ತಿಳಿಸಿದ ಅರ್ಹತೆಗಳು ಹೊಂದಿದ್ದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಕ್ಲರ್ಕ್‌ ಅಥವಾ ಡಾಟಾ ಎಂಟ್ರಿ ಆಪರೇಟರ್‌ ನೌಕರರ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ಆಗ್ರಹಿಸಿದ್ದಾರೆ.

Karnataka | ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮೊಟಕು - Saaksha TV

ಗ್ರಾಮೀಣ ಭಾಗದಲ್ಲಿ ಇರುವ ಅಭ್ಯರ್ಥಿಗಳಿಗೆ ಇದೊಂದು ಸೂಕ್ತ ಅವಕಾಶವಾಗಿದ್ದು ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೂ ಕೂಡ ಉದ್ಯೋಗ ಸಿಗುವ ಕಾರಣದಿಂದಾಗಿ ತಪ್ಪದೇ ಈ ಹುದ್ದೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಇತ್ತೀಚೆಗೆ ಎಲ್ಲಾ ಕ್ಷೇತ್ರಗಳನ್ನು ಕೂಡ ಕಾರಣಗೊಳ್ಳುತ್ತಿದೆ.

ಸರ್ಕಾರಿ ವಲಯದ ಕೆಲಸ ಕಾರ್ಯಗಳು ಕೂಡ ಆನ್ಲೈನ್ ಮೂಲಕ ನಡೆಯುತ್ತಿರುವುದರಿಂದ ಈ ರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಾಟ ಎಂಟ್ರಿ ಆಪರೇಟರ್ ನಿಗದಿಪಡಿಸುವುದು ಅನಿವಾರ್ಯವಾಗಿದೆ ಮತ್ತು ಇದರಿಂದ ಸಾಕಷ್ಟು ಅನುಕೂಲವೂ ಕೂಡ ಆಗಲಿದೆ. ಇದಕ್ಕಾಗಿ ಹಲವು ದಿನಗಳಿಂದ ಇಂತಹದೊಂದು ಬೇಡಿಕೆ ಇತ್ತು ಕೊನೆಗೂ ಇದಕ್ಕೆ ಕಾಲಾವಕಾಶ ಕೂಡಿಬಂದಿದೆ.

ಈ ಬಗ್ಗೆ ಸರ್ಕಾರವು ಈ ರೀತಿ ಸುತ್ತೋಲೆ ಹೊರಡಿಸಿ ಡಾಟಾ ಎಂಟಿ ಆಪರೇಟ್‌ಗಳನ್ನು ಪ್ರತಿ ಗ್ರಾಮ ವ್ಯಾಪ್ತಿಗೆ ಮೀಸಲಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೂ ನೇಮಕಾತಿ ಮಾಡಿಕೊಳ್ಳಲು ಅಸ್ತು ಎಂದಿರುವುದರಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಈ ಪ್ರಕ್ರಿಯೆ ಪೂರ್ತಿಗೊಳಿಸಲಿದ್ದಾರೆ.

ಅರ್ಜಿ ಸ್ವೀಕಾರ ಮಾಡುವ ದಿನಾಂಕದ ಬಗ್ಗೆ ಇನ್ನೂ ಸಹ ನಿಖರವಾದ ಮಾಹಿತಿ ತಿಳಿಸಿಲ್ಲ ಈ ಕುರಿತು ಸದ್ಯದಲ್ಲೇ ಅಪ್ಡೇಟ್ ಹೊರ ಬೀಳುವ ಸಾಧ್ಯತೆ ಇದೆ, ತಪ್ಪದೇ ಈ ಅವಕಾಶವನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳಿ.

You might also like

Comments are closed.