ಚಪ್ಪಲಿ ಏಟಿನ ಬಳಿಕ ನಟ ದರ್ಶನ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ಕನ್ನಡ ಚಿತ್ರರಂಗದಲ್ಲಿ ಹೆಚ್ಚು ನಟ, ನಟಿಯರು ತಮ್ಮ ವೈಯಕ್ತಿಕ ಬದುಕನ್ನು ಹೆಚ್ಚು ಪ್ರಚಾರ ಮಾಡುವುದಿಲ್ಲ. ಮನೆ, ಮಕ್ಕಳ ಬಗ್ಗೆ ಹೆಚ್ಚಾಗಿ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಈ ಸಾಲಿನಲ್ಲಿ ನಟ ದರ್ಶನ್ ಕೂಡ ಇದ್ದಾರೆ. ದರ್ಶನ್ ಹೆಚ್ಚಾಗಿ ತಮ್ಮ ಸಿನಿಮಾಗಳ ವಿಚಾರಕ್ಕಾಗಿಯೇ ಕಾಣಿಸಿಕೊಳ್ಳುತ್ತಾರೆ. ದರ್ಶನ್ ತಮ್ಮ ಮಗ ವಿನೀಶ್ ಮತ್ತು ಪತ್ನಿ ವಿಜಯಲಕ್ಷ್ಮೀ ಜೊತೆಗೆ, ಹೊರಗೆ ಕಾಣಿಸಿಕೊಳ್ಳುವುದು ವಿರಳ. ಹಾಗೊಂದು ವೇಳೆ ಕಾಣಿಸಿಕೊಂಡರೆ ಆ ವಿಡಿಯೋ ಅಥವಾ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇನ್ನು ಅಪರೂಪದ ಕ್ಷಣಗಳಲ್ಲಿ ಈ ಜೋಡಿ ವಿದೇಶ ಪ್ರಯಾಣ ಮಾಡುತ್ತೆ.

ಇದೀಗ ಕ್ರಾಂತಿ ಸಿನಿಮಾ ಪ್ರಮೋಷನ್ ಅಲ್ಲಿ ದರ್ಶನ್ ಅವರು ಬ್ಯುಸಿ ಇದ್ದ ಕಾರಣದಿಂದ ವಿಜಯ ಲಲಕ್ಷ್ಮಿ ಮತ್ತವರ ಮಗ ಸ್ನೇಹಿತರೊಂದಿಗೆ ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದರು. ಸಾಮಾನ್ಯವಾಗಿ ಅಭಿಮಾನಿಗಳು ಸ್ಟಾರ್ ಗಳ ಹೆಸರು ಹಾಗೂ ಭಾವಚಿತ್ರವನ್ನ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ದರ್ಶನ್ ಪತ್ನಿ ಈ ಹಿಂದೆ ಬರ್ತಡೇ ಸ್ಪೆಷಲ್ ಆಗಿ ದರ್ಶನ್ ಹೆಸರಿನ ಹಚ್ಚೆ ಹಾಕಿಸಿಕೊಂಡು ಈ ರೀತಿಯಲ್ಲಿ ಡಿ ಬಾಸ್ ಅವರಿಗೆ ಉಡುಗೊರೆ ನೀಡಿದ್ದರು.ಆದರೆ ಈ ಸಲ ವಾಪಸ್ಸು ಬರುವಾಗ ಪ್ರೀತಿಯ ದಾಸನಿಗೆ ದುಬಾರಿ ಬೆಲೆಯ ವಾಚ್ ಒಂದನ್ನು ಖರೀದಿಸಿದ್ದರು.ಅದನ್ನು ಇದೀಗ ದಚ್ಚು ಕೈಗೆ ಕಟ್ಟಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಇನ್ನು 2003ರಲ್ಲಿ ವಿಜಯಲಕ್ಷ್ಮಿ ಅವರನ್ನು ದರ್ಶನ್​ 2003ರಲ್ಲಿ ಧರ್ಮಸ್ಥಳದಲ್ಲಿ ಮದುವೆ ಆದರು. ವಿಜಯಲಕ್ಷ್ಮಿ ಕೆಮಿಕಲ್​ ಇಂಜಿನಿಯರ್ ಪದವೀಧರೆ​. ದರ್ಶನ್​-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್. ದರ್ಶನ್​ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇವರು, ಈಗ ಹೊಸ ಉದ್ಯಮ ಆರಂಭಿಸಿದ್ದಾರಂತೆ. ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಗಲೇ ದಚ್ಚುವಿಗೆ ತಂದ ಗಿಫ್ಟ್ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

You might also like

Comments are closed.